ಒಳಮೀಸಲಾತಿ ಜಾರಿಯಾಗದಿದ್ದರೆ ರಕ್ತಪಾತ: ಗಣೇಶ್ ಹೊರತಟ್ನಾಳ್ ಎಚ್ಚರಿಕೆ
Bloodshed if internal reservation is not implemented: Ganesh Horatatnal warns
ಕೊಪ್ಪಳ 17: ಒಳ ಮೀಸಲಾತಿಗಾಗಿ ನಾಗಮೋಹನ್ ದಾಸ್ ವರದಿಯನ್ನು ಕೂಡಲೇ ಯಥಾರೀತಿ ಜಾರಿ ಮಾಡವಂತೆ ಈಗಾಗಲೇ ಮನವಿ ಮಾಡಿದ್ದು, ಸರ್ಕಾರ ವಿಳಂಬ ನೀತಿ ಅನುಸರಿಸಿದೆ, ಒಳಮೀಸಲಾತಿ ಜಾರಿಗೆ ರಾಜಕೀಯ ಮಾಡಿದ್ರೆ ರಕ್ತಪಾತ ಆಗುತ್ತೆ ಎಂದು ಮಾದಿಗ ಸಮುದಾಯ ಯುವ ಮುಖಂಡ ಗಣೇಶ್ ಹೊರತಟ್ನಾಳ್ ಎಚ್ಚರಿಸಿದರು.ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿ ನಡೆಸಿ ಮಾತ್ನಾಡಿದ ಗಣೇಶ್ ಹೊರತಟ್ನಾಳ್, ಸುದೀರ್ಘ ಮೂರು ದಶಕಗಳಿಂದ ಒಳ ಮೀಸಲಾತಿ ಜಾರಿಗಾಗಿ ಮಾದಿಗ ಸಮುದಾಯ ಹೋರಾಟ ಮಾಡುತ್ತಲೇ ಇದೆ, ಕಾಂಗ್ರೆಸ್ ಸಿದ್ದರಾಮಯ್ಯ ಸರ್ಕಾರ ಚುನಾವಣೆ ಮುನ್ನ ಪ್ರಣಾಳಿಕೆಯಲ್ಲಿ ನೀಡಿದ ಒಳಮೀಸಲಾತಿ ಭರವಸೆಯನ್ನು ಮಾತಿನಂತೆ ಈಡೇರಿಸಲಿ, ಕೊಟ್ಟ ಮಾತಿನಂತೆ ನಾಗಮೋಹನ್ ದಾಸ್ ವರದಿಯನ್ನು ಯಥಾರೀತಿ ಜಾರಿ ಮಾಡಲಿ, ಆಗಸ್ಟ್ 16 ಎಂದು ಹೇಳಿದ ಸರ್ಕಾರ ಆಗಸ್ಟ್ 19ಕ್ಕೆ ಮುಂದೂಡಿದೆ, ಇದರಲ್ಲಿ ಏನೋ ಹುನ್ನಾರ ಅಡಿಗಿರುವುದು ಮೇಲ್ನೋಟಕ್ಕೆ ಕಾಣಿಸುತ್ತಿದೆ. ಇದು ಕಾಂಗ್ರೆಸ್ ನ ವಿಳಂಬ ನೀತಿ ಎದ್ದು ಕಾಣುತ್ತಿದೆ ಎಂದು ಆರೋಪಿಸಿದರು.
ನಾಗಮೋಹನ್ ದಾಸ್ ಆಯೋಗದ ಶಿಫಾರಸ್ಸಿನಂತೆ ಆದಿ ಕರ್ನಾಟಕ 147199, ಆದಿದ್ರಾವಿಡ 320641, ಆದಿ ಆಂಧ್ರ 7114 ಜನ ಸಂಖ್ಯೆ ಇದ್ದು ಇದನ್ನು ’ಇ’ ಪ್ರವರ್ಗದಲ್ಲಿ ಗುರಿತಿಸಲಾಗಿದೆ, ’ಇ’ ಗುಂಪಿನಲ್ಲಿ ಮೂಲ ಜಾತಿಹೇಳದೆ ಆದಿದ್ರಾವಿಡ ಎಂದು ಗುರುತಿಸಿಕೊಂಡವರು 320641 ಜನ ಇದ್ದಾರೆ.ಇವರಲ್ಲಿ ಬಹುತೇಕರು ಪೌರಕಾರ್ಮಿಕರಿದ್ದಾರೆ.ಮಾದಿಗ ಸಮುದಾಯದವರಾಗಿದ್ದಾರೆ, ಹಾಗಾಗಿ ಸರ್ಕಾರ ಎಚ್ವರಿಕೆಯಿಂದ ಹೆಜ್ಜೆ ಇಡಬೇಕು ಎಂದು ತಿಳಿಸಿದರು.ಸಿದ್ದರಾಮಯ್ಯನವರು 2013-2018ವರೆಗೆ ಸಿಎಂ ಇದ್ದಾಗಲೂ ವಿಳಂಬ ಧೋರಣೆ ಅನುಸರಿಸಿದ್ದಾರೆ. ಸಿದ್ದರಾಮಯ್ಯ ಅವರು ಮೂರು ಸಚಿವರ ಕೈಗೊಂಬೆಯಾಗಿದ್ದಾರೆ. ಆಗಸ್ಟ್ 1ಕ್ಕೆ ಸುಪ್ರೀಂ ಕೋರ್ಟ್ ತೀಪು ನೀಡಿದೆ. ಒಂದು ವರ್ಷ ಕಳೆದ್ರೂ, ಸಿದ್ದರಾಮಯ್ಯ ಸರ್ಕಾರ ಇನ್ನು ವಿಳಂಬ ನೀತಿ ಅನುಸರಿಸುತ್ತಿದೆ. ಒಳಮೀಸಲಾತಿ ಜಾರಿಯಾಗದೇ, ನೇಮಕಾತಿಗಳು ಸಹ ನೆನಗುದಿಗೆ ಬಿದ್ದಿದೆ, ಸಿದ್ದರಾಮಯ್ಯ ಸರ್ಕಾರ ಕಾಲಹರಣ ನೀತಿಯನ್ನು ಪಕ್ಕಕ್ಕೆ ಇಟ್ಟು ಆಗಸ್ಟ್ 19 ಕ್ಕೆ ಒಳಮೀಸಲಾತಿ ಜಾರಿ ಮಾಡಬೇಕು, ಇಲ್ಲವಾದರೆ ಉಗ್ರಹೋರಾಟ, ರಕ್ತಪಾತ ಖಚಿತ ಎಂದರು.
ಈ ಸಂದರ್ಭದಲ್ಲಿ ಆಗಸ್ಟ್ 19 ನೇ ದಿನಾಂಕದಂದು ಸರಕಾರ ಶಿಫಾರಸ್ಸು ಮಾಡಿ ಗೌರವಾನ್ವಿತ ರಾಜ್ಯಪಾಲರ ಅಂಕಿತ ಬೀಳದಿದ್ದರೆ ಕೊಪ್ಪಳ ಜಿಲ್ಲೆ ಬಂದ್ ಕರೆ ಮಾಡಲಾಗುವುದೆಂದು ಎಚ್ಚರಿಕೆ. ನೀಡಿದರು.ಈ ಪತ್ರಿಕಾ ಗೋಷ್ಠಿಯಲ್ಲಿ ಮಾದಿಗ ಸಮುದಾಯದ ಮುಖಂಡರಾದ ಹನುಮೇಶ್ ಕಡೆಮನಿ, ರಾಮಣ್ಣ ಚೌಡಕಿ, ನಿಂಗಪ್ಪ ಮೈನಳ್ಳಿ, ಮಂಜುನಾಥ್ ಮುಸಲಾಪುರ, ಮಾರುತೆಪ್ಪ ಬಿಕನಳ್ಳಿ, ಶಂಕರ್ ನರೇಗಲ್, ಸುಧೀರ್ ಕಾತರಕಿ, ಬಸವರಾಜ್ ಮ್ಯಗಳಮನಿ ಇತರರು ಇದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 