ಲೋಕದರ್ಶನವರದಿ
ರಾಣೇಬೆನ್ನೂರು: ಜೂ.3: ಎಲ್ಲ ವಸ್ತುಗಳನ್ನು ಹಣದಿಂದ ಕೊಂಡುಕೊಳ್ಳಬಹುದು ಆದರೆ ಜೀವ ಉಳಿಸಲು ಬೇಕಾಗಿರುವುದು ಅಮೂಲ್ಯವಾದ ರಕ್ತ. ರಕ್ತದಾನಿಗಳು ತಮ್ಮ ರಕ್ತವನ್ನು ನೀಡುವುದರ ಮೂಲಕ ಮತ್ತೊಬ್ಬರ ಪ್ರಾಣ ಉಳಿಸಲು ಮುಂದಾಗಬೇಕು ಇದು ಪವಿತ್ರವಾದ ಕಾರ್ಯವಾಗಿದೆ ಎಂದು ಜೇಸಿ ಸಂಸ್ಥೆ ಅಧ್ಯಕ್ಷ ಶಿವರುದ್ರಪ್ಪ ಹೇಳಿದರು.
ಅವರು ಇಲ್ಲಿನ ಮೃತ್ಯುಂಜಯ ನಗರದ ಶ್ರೀ ಸಾಯಿ ಆಸ್ಪತ್ರೆ ಆವರಣದಲ್ಲಿ ರಾಣೇಬೆನ್ನೂರ ಬ್ಲಡ್ ಬ್ಯಾಂಕ್ನಲ್ಲಿ ನಗರದ ಪಂದಳಕಂದ ಕಮೀಟಿ, ಬ್ಲಡ್ ಡೋನರ್ಸ್, ಬ್ಲಡ್ ಬ್ಯಾಂಕ್ ಆಯೋಜಿಸಿದ್ದ ಸ್ವಯಂಪ್ರೇರಿತ ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು. 18ರಿಂದ 60 ವರ್ಷದೊಳಗಿನ ಪ್ರತಿಯೊಬ್ಬ ಆರೋಗ್ಯ ವ್ಯಕ್ತಿ ರಕ್ತದಾನ ಮಾಡಬಹುದು. ಇದರಿಂದ ದೇಹದಲ್ಲಿ ಹೊಸ ರಕ್ತ ಉತ್ಪಾದನೆಯಾಗಿ ಕೊಲೆಸ್ಟ್ರಾಲ್ ನಿಯಂತ್ರಣದಲ್ಲಿರುತ್ತದೆ. ಯುವ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ರಕ್ತದಾನ ಮಾಡಲು ಮುಂದೆ ಬರಬೇಕು ಎಂದು ಕರೆ ನೀಡಿದರು.
ಬ್ಲಡ್ ಬ್ಯಾಂಕ್ ಮುಖ್ಯಸ್ಥ ಶ್ರೀಧರ, ಶ್ರೀ ಪಂದಳಕಂದ ಕಮಿಟಿ ಅಧ್ಯಕ್ಷ ಗಣೇಶ, ಕಾರ್ಯದಶರ್ಿ ಸಿದ್ಧು, ಗೋಪಿ ಮತ್ತಿತರ ಗಣ್ಯರು ಸಿಬ್ಬಂದಿ ಉಪಸ್ಥಿತರಿದ್ದರು