ಲೋಕದರ್ಶನವರದಿ
ಶಿಗ್ಗಾವಿ : ದಾನ, ದಾನಗಳಲ್ಲಿ ಶ್ರೇಷ್ಠದಾನ ರಕ್ತ ದಾನವಾಗಿದೆ. ನೀವು ದಾನ ನೀಡುವ ರಕ್ತದಿಂದ ಅಪಾಯದ ಅಂಚಿನಲ್ಲಿರುವ ವ್ಯಕ್ತಿಗೆ ಮರು ಜನ್ಮ ನೀಡುವ ಶಕ್ತಿ ಅಡಗಿದೆ ಎಂದು ತಾಲೂಕಿನ ಬಂಕಾಪುರ ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಮನೋಜ ಕುಮಾರ ನಾಯಕ ಹೇಳಿದರು.
ತಾಲೂಕಿನ ಬಂಕಾಪುರ ಪಟ್ಟಣದ ಸಮುದಾಯ ಆರೋಗ್ಯಕೇಂದ್ರದಲ್ಲಿ ಜಿಲ್ಲಾ ಆರೋಗ್ಯ ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ರಕ್ತ ನಿಧಿ ಘಟಕ, ತಾಲೂಕಾ ರಕ್ತ ಸಂಗ್ರಹಣಾ ಘಟಕ, ಸಮೂದಾಯ ಆರೋಗ್ಯ ಕೇಂದ್ರದ ಸಂಯುಕ್ತಾಶ್ರಯದಲ್ಲಿ ನಡೆದ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಕಾರ್ಯಕ್ರಮವನ್ನುದ್ಧೇಸಿಸಿ ಮಾತನಾಡಿದ ಅವರು ರಕ್ತದಾನ ಮಾಡುವದರಿಂದ ಮನುಷ್ಯನ ದೇಹದಲ್ಲಿ ಅಡಗಿರುವ ಕೊಬ್ಬಿನ ಅಂಶ ಕಳೆದು ಹೃದಯಾಘಾತದಿಂದ ತಪ್ಪಿಸಿಕೋಳ್ಳಬಹುದಾಗಿದೆಯಲ್ಲದೇ ದೇಹದಲ್ಲಿ ಹೊಸ ರಕ್ತ ಉತ್ಪತ್ತಿಯಾಗಿ ನವಚೈತನ್ಯ ತುಂಬಿ ಆರೋಗ್ಯಕೂಡಾ ವೃದ್ಧಿಯಾಗಲಿದೆ. ಸಾರ್ವಜನಿಕರ ಅನುಕೂಲಕ್ಕಾಗಿ ಶಿಗ್ಗಾವಿ ಪಟ್ಟಣದಲ್ಲಿ ಶೀಘ್ರ ರಕ್ತ ಬಂಢಾರದಘಟಕವನ್ನು ಸ್ಥಾಪಿಸಲಾಗುವುದು ಎಂದು ಹೇಳಿದರು.
ಗ್ರೀನ ಇಂಡಿಯಾ ಕಮೀಟಿಯ ಅಧ್ಯಕ್ಷ ಮೈನುದ್ಧೀನ ಖತೀಬ ಮಾತನಾಡಿ ನಮ್ಮ ಸಂಸ್ಥೆಯ ಸದಸ್ಯರೇಲ್ಲರೂ ಸ್ವಯಂ ಪ್ರೇರಣೆಯಿಂದ ರಕ್ತದಾನಮಾಡಲು ಮುಂದಾಗಿದ್ದು, ನಾವು ದಾನ ಮಾಡುವ ರಕ್ತ ಸಂಕಷ್ಟದಲ್ಲಿರುವ ವ್ಯಕ್ತಿಗಳಿಗೆ, ದೇಶಕ್ಕಾಗಿ ಹಗಲಿರುಳೆನ್ನದೇ ಹೋರಾಡುವ ನಮ್ಮ ವೀರಯೋದರಿಗೆ ನೇರವಾದಾಗ ನಮ್ಮ ಜನ್ಮ ಸಾರ್ಥಕವಾಗಲಿದೆ.
ನಮ್ಮ ಸಂಸ್ಥೆವತಿಯಿಂದ ಪರಿಸರ ಜಾಗೃತಿ ಕಾರ್ಯಕ್ರಮ, ಉಚಿತ ಟೇಲರಿಂಗ್ ಹಾಗು ಕಂಪ್ಯೂಟರ ತರಬೇತಿ, ಬಡ ವಿದ್ಯಾಥರ್ಿಗಳ ಶೈಕ್ಷಣಿಕ ಗುಣಮಟ್ಟ ಹೆಚ್ಚಿಸಲು ಹಲವಾರು ಕಾರ್ಯಕ್ರಮಗಳನ್ನು ಮಾಡುತ್ತಾ ಬರಲಾಗುತ್ತಿದೆ. ಆ ದಿಶೆಯಲ್ಲಿ ರಕ್ತದಾನವೂ ಕೂಡಾ ಒಂದಾಗಿದೆ ಎಂದು ಹೇಳಿದರು.