ಗದಗ 30: ರಕ್ತದಾನ ಅತ್ಯಂತ ಪವಿತ್ರ ಕೆಲಸ. ನಾವು ಮಾಡಿದ ರಕ್ತದಾನದಿಂದ ಒಂದು ಜೀವ ಉಳಿಯುತ್ತದೆ ಎಂದು ಜಿಲ್ಲಾ ಪಂಚಾಯತ್ ಅಧ್ಯಕ್ಷ ಶಿವಲಿಂಗಪ್ಪ ಬಳಿಗಾರ ಅವರು ನುಡಿದರು.
ಅವರಿಂದು ನಗರದ ಕನಕದಾಸ ಶಿಕ್ಷಣ
ಸಮಿತಿ, ಎಮ್.ಎಸ್. ಡಬ್ಲ್ಯೂ
ಕಾಲೇಜಿನಲ್ಲಿ ಏರ್ಪಡಿಸಲಾಗಿದ್ದ ಗದಗ
ಜಿಲ್ಲಾ ಮಟ್ಟದ ಸ್ವಯಂ ಪ್ರೇರಿತ ರಕ್ತದಾನ ದಿನಾಚರಣೆ ಸಮಾರಂಭ-2018 ಕಾರ್ಯಕ್ರಮವನ್ನು ಉದ್ಘಾಟಿಸಿ
ಮಾತನಾಡಿದರು.
ರಕ್ತವನ್ನು ಕೃತಕವಾಗಿ
ಉತ್ಪಾದನೆ ಮಾಡಲಾಗುವುದಿಲ್ಲ. ವೈದ್ಯ
ವಿಜ್ಞಾನದ ಸಂಶೋಧನೆಯ ಫಲವಾಗಿ ಇಂದು ಹೃದಯ,
ಕಿಡ್ನಿ ಮನುಷ್ಯನ
ದೇಹದ ಮುಂತಾದ ಅಂಗಾಂಗಗಳನ್ನು ಒಂದು ವ್ಯಕ್ತಿಯಿಂದ ಇನ್ನೊಂದು
ವ್ಯಕ್ತಿಗೆ ಕಸಿ ಮಾಡಲಾಗುತ್ತದೆ.
ಅಂತಹ ಶಸ್ತ್ರ ಚಿಕಿತ್ಸೆ ಸಂದರ್ಭದಲ್ಲಿ, ಅಪಘಾತ ಸಂಭವಿಸಿದಾಗ, ಹೆರಿಗೆ ಸಂದರ್ಭದಲ್ಲಿ ತೀವ್ರ ರಕ್ತಸ್ರಾವವಾದಾಗ ರಕ್ತದ ಕೊರತೆಯುಂಟಾಗಿ ಅದರ
ಅವಶ್ಯಕತೆಯುಂಟಾಗುತ್ತದೆ. ಒಬ್ಬ
ಮನುಷ್ಯನ ರಕ್ತವನ್ನು ಇನ್ನೊಬ್ಬನ
ಜೀವ ಉಳಿಸಲು ಉಪಯೋಗಿಸಲಾಗುತ್ತದೆ. ಓರ್ವ ವ್ಯಕ್ತಿ
ರಕ್ತದಾನ ಮಾಡಿದಾಗ ಹೊಸ ರಕ್ತದ ಉತ್ಪಾದನೆಯಾಗುತ್ತದೆ. 18 ರಿಂದ
60 ವರ್ಷ ವಯಸ್ಸಿನ ಆರೋಗ್ಯವಂತರು ರಕ್ತದಾನ
ಮಾಡಬಹುದಾಗಿದೆ ಯಾವುದೇ
ವ್ಯಕ್ತಿ ಇನ್ನೊಬ್ಬರ ಜೀವ ಉಳಿಸಲು ತನ್ನ
ರಕ್ತವನ್ನು ಸ್ವಯಂ ಪ್ರೇರಿತನಾಗಿ ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೇ ದಾನಮಾಡಬೇಕೆಂದು ಜಿಲ್ಲಾ
ಪಂಚಾಯತ್ ಅಧ್ಯಕ್ಷ ಶಿವಲಿಂಗಪ್ಪ ಬಳಿಗಾರ ತಿಳಿಸಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಂಜುನಾಥ ಚವ್ಹಾಣ ಅವರು ಮಾತನಾಡಿ ಶಸ್ತ್ರ ಚಿಕಿತ್ಸೆ ಸಂದರ್ಭದಲ್ಲಿ ರಕ್ತದಾನದ ಅವಶ್ಯಕತೆ ಉಂಟಾಗುತ್ತದೆ. ರಕ್ತದಾನದಿಂದ
ದೇಹದಲ್ಲಿ ಹೊಸ ರಕ್ತದ ಉತ್ಪಾದನೆಯಾಗುತ್ತದೆ.ಮತ್ತು ದೇಹದಲ್ಲಿನ ಕೊಲೆಸ್ಟರಾಲ್ ಕಡಿಮೆಯಾಗುತ್ತದೆ. ರಕ್ತದಾನ
ಮಾಡುವುದು ಪ್ರತಿ ಆರೋಗ್ಯವಂತ ವ್ಯಕ್ತಿಯ ಕರ್ತವ್ಯವೆಂದು ಭಾವಿಸಿ ಬ್ಲಡ್ ಗ್ರುಪ್ ಪರಿಶೀಲಿಸಿ ಆಗಾಗ
ರಕ್ತದಾನ ಮಾಡಿದಲ್ಲಿ
ಒಂದು ಜೀವ ಉಳಿಸಲು ಸಾಧ್ಯ
ಎಂದರು.
ರಕ್ತದಾನಿಗಳಾದ ವಿಶ್ವನಾಥ ಯಳಮಲಿ, ಅಣ್ಣಪ್ಪ ಹೆಗಡೆ, ಸತೀಶ
ಮುಜುಮ್ದಾರ, ಇಮ್ರಾನ್ ಮೇಳೆಕೊಪ್ಪ, ಅಬ್ದುಲ್ ಪಾಶ್ಚಾಪೂರ ಇವರುಗಳನ್ನು
ಸನ್ಮಾನಿಸಲಾಯಿತು. ನಂತರ
ರಕ್ತದಾನಿಗಳು ರಕ್ತದಾನದ ಬಗ್ಗೆ ತಮ್ಮ ಅಭಿಪ್ರಾಯ
ವ್ಯಕ್ತಪಡಿಸಿದರು.
ತಾಲೂಕು ಪಂಚಾಯತ್ ಅಧ್ಯಕ್ಷ ಮೋಹನ ದುರಗಣ್ಣವರ ಅವರು
ಮಾತನಾಡಿ ರಕ್ತದಾನ
ಶ್ರೇಷ್ಠವಾಗಿದ್ದು ರಕ್ತದಾನದ
ಬಗ್ಗೆ ಗ್ರಾಮೀಣ
ಪ್ರದೇಶದ ಜನರಲ್ಲಿಯೂ ಅರಿವು ಮೂಡಿಸುವ ಅಗತ್ಯತೆ ಇದೆ ಎಂದು ತಿಳಿಸಿದರು. ಕನಕದಾಸ
ಶಿಕ್ಷಣ ಸಮಿತಿಯ ಅಧ್ಯಕ್ಷರಾದ ಬಿ.ಎಫ್. ದಂಡಿನ ಅವರು
ಮಾತನಾಡಿ ಅನ್ನದಾನ,
ವಿದ್ಯಾದಾನ ಹಾಗೆಯೇ ರಕ್ತದಾನವೂ ಶ್ರೇಷ್ಟ ದಾನವಾಗಿದೆ. ರಕ್ತಕ್ಕೆ
ಪರ್ಯಾಯವಾದ ವಸ್ತುವಿಲ್ಲ. ಹಾಗೂ ರಕ್ತವನ್ನು ಮನುಷ್ಯರ
ದಾನದಿಂದ ಮಾತ್ರ ಪಡೆಯಬಹುದು. ಆದಕಾರಣ
ರಕ್ತದಾನ ಕುರಿತು ವಿದ್ಯಾಥರ್ಿಗಳು ಅರಿವು ಮೂಡಿಸುವ ಕಾರ್ಯಕ್ರಮಕ್ಕೆ ಮುಂದಾಗಬೇಕು ಮತ್ತು ರಕ್ತದಾನ
ಮಾಡುವವರಿಗೆ ಪ್ರೇರೇಪಣೆ
ಮಾಡಬೇಕೆಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಗದಗ ಬೆಟಗೇರಿ ನಗರಸಭಾ ಅಧ್ಯಕ್ಷ
ಸುರೇಶ ಕಟ್ಟಿಮನಿ, ಕೆ ಎಸ್ ಎಸ್
ಸಮಾಜ ಕಾರ್ಯ ಸ್ನಾತಕೋತ್ತರ ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ. ಅಂಬರೀಶ ಕಪ್ಲಿ,
ಕೆ.ಎಸ್.ಎಸ್. ಸ್ನಾತಕೋತ್ತರ
ಕೇಂದ್ರದ ಮುಖ್ಯ ಸಂಯೋಜಕರಾದ ಜೆ.ಸಿ. ಜಂಪಣ್ಣವರ,
ಕಾಲೇಜು ಬೋಧಕ ಸಿಬ್ಬಂದಿಗಳಾದ ಸಿ.ಎಸ್. ಬೊಮ್ಮನಹಳ್ಳಿ, ವಸಂತ
ಅಗಸಿಮನಿ, ಶೇಖರ ಅಡಗಿ, ಪಿ.ಎಸ್. ಗಾಣಿಗೇರ, ಎಸ್.ಎಸ್. ಬೆನಕನಾಳ,
ಜ್ಯೋತಿ ಅಂದಪ್ಪನವರ, ಗಿರೀಶ ಪಂತರ, ಕಾಲೇಜಿನ
ವಿದ್ಯಾಥರ್ಿ ವಿದ್ಯಾಥರ್ಿನಿಯರು, ಆರೋಗ್ಯ ಇಲಾಖೆಯ ಶ್ರೀಮತಿ ಗೀತಾ ಕಾಂಬಳೆ , ಸಿಬ್ಬಂದಿಗಳು
ಉಪಸ್ಥಿತರಿದ್ದರು.
ಜಿಲ್ಲಾ
ಏಡ್ಸ ನಿಯಂತ್ರಣ ಅಧಿಕಾರಿಗಳಾದ ಡಾ.
ಚಂದ್ರಕಲಾ ಜೆ. ಪ್ರಾಸ್ತಾವಿಕವಾಗಿ
ಮಾತನಾಡಿ ಗದಗ
ಜಿಲ್ಲೆಯಲ್ಲಿ 10000 ಯುನಿಟ್ ರಕ್ತದ ಅವಶ್ಯಕತೆಯಿದ್ದು ಈಗ 90 % ಕ್ಕಿಂತ ಹೆಚ್ಚಿಗೆ ರಕ್ತ ಸಂಗ್ರಹಣೆಯಾಗುತ್ತಿದ್ದು ಎಲ್ಲ ಗಭರ್ಿಣಿ
ಮಹಿಳೆಯರಿಗೆ ಉಚಿತವಾಗಿ ವಿತರಿಸಲಾಗುತ್ತದೆ ಎಂದು ನುಡಿದರು.
ಆರೋಗ್ಯ ಮತ್ತು ಕುಟುಂಬ ಕಲ್ಯಾಣಾ ಇಲಾಖೆಯ ಪ್ರಭಾರಿ ಅಧಿಕಾರಿಗಳಾದ ವೈ.ಕೆ. ಭಜಂತ್ರಿ ಸರ್ವರನ್ನು
ಸ್ವಾಗತಿಸಿದರು. ಕುಮಾರಿ ಸಲ್ಮಾ ಪ್ರಾಥರ್ಿಸಿದರು. ಆರೋಗ್ಯ
ಇಲಾಖೆಯ ಬಸವರಾಜ
ಲಾಳಗಟ್ಟಿ ವಂದಿಸಿದರು. ಪ್ರಕಾಶ
ಗಾಣಿಗೇರ ಕಾರ್ಯಕ್ರಮ ನಿರೂಪಿಸಿದರು.
ಗದಗ ಜಿಲ್ಲಾಡಳಿತ, ಜಿಲ್ಲಾ
ಪಂಚಾಯತ್, ಜಿಲ್ಲಾ
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಜಿಲ್ಲಾ
ಏಡ್ಸ್ ತಡೆಗಟ್ಟುವಿಕೆ ಮತ್ತು ನಿಯಂತ್ರಣ ಘಟಕ, ಜಿಲ್ಲಾ ವಾತರ್ಾ
ಇಲಾಖೆ, ಜಿಲ್ಲಾ ರೆಡ್ ಕ್ರಾಸ್ ಸಂಸ್ಥೆ,
ಜಿಮ್ಸ್ ರಕ್ತನಿಧಿ ಕೇಂದ್ರ, ಜಿಲ್ಲಾ ಆಸ್ಪತ್ರ, ಐ.ಎಂ.ಎ,
ರಕ್ತಭಂಡಾರ, ಎನ್.ಎಸ್.ಎಸ್.
ಘಟಕ, ಎನ್.ಸಿ.ಸಿ.
ಘಟಕ, ಮದರ ಥೆರೇಸಾ ಸ್ಕೂಲ್
ಆಫ್ ನಸರ್ಿಂಗ್, ಮಹೇಶ್ವರಿ ನಸರ್ಿಂಗ್ ಕಾಲೇಜ್, ಬಸವೇಶ್ವರ ಪ್ಯಾರಾ ಮೆಡಿಕಲ್ ಕಾಲೇಜ ಹಾಗೂ ಕಿರಣ ಸಮಿತಿಯ ಬಿ.ಎಸ್. ಡಬ್ಲ್ಯೂ ಕಾಲೇಜ,
ಕೆ.ಎಸ್.ಎಸ್. ಎಂ.ಎಸ್. ಡಬ್ಲ್ಯೂ
ಕಾಲೇಜ ಹಾಗೂ ಶಿಕ್ಷಣ ಇಲಾಖೆ
ಗದಗ ಇವರುಗಳ ಸಂಯುಕ್ತ ಆಶ್ರಯದಲ್ಲಿ ಗದಗ
ಜಿಲ್ಲಾ ಮಟ್ಟದ ಸ್ವಯಂ ಪ್ರೇರಿತ ರಕ್ತದಾನ ದಿನಾಚರಣೆ ಸಮಾರಂಭ-2018 ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.