ಲೋಕದರ್ಶನ ವರದಿ
ಮೋಳೆ: ರಕ್ತದಾನವು ಅನ್ನದಾನ ಹಾಗೂ ವಿದ್ಯಾದಾನಕ್ಕಿಂತ ಶ್ರೇಷ್ಠವಾದುದು, ರಕ್ತದಾನ ಮಾಡಿದರೆಹೊಸ ಚೈತನ್ಯ ಹಾಗೂ ಉತ್ತಮ ಗುಣಗಳು ತಾನಾಗಿಯೇ ಬರುತ್ತವೆ ಎಂದು ಪಟ್ಟಣ ಪಂಚಾಯತ್ ಉಪಾಧ್ಯಕ್ಷ ರವೀಂದ್ರ ಗಾಣಿಗೇರ ಹೇಳಿದರು.
ಐನಾಪುರ ಪಟ್ಟಣದಲ್ಲಿ ಕನರ್ಾಟಕ ರಾಜ್ಯೋತ್ಸವದ ನಿಮಿತ್ಯ ನವ್ಯಸ್ಪೂತರ್ಿ ಸಮಾಜ ಸೇವಾ ಸಂಸ್ಥೆ ಐನಾಪುರ ಹಾಗೂ ಅಥಣಿ ಬ್ಲಡ್ ಬ್ಯಾಂಕ್ ಇವುಗಳ ಸಹಯೋಗದಲ್ಲಿ ಎರಡನೇ ಬಾರಿಗೆ ಸ್ವಯಂಪ್ರೇರಿತ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಅವರು ರಕ್ತದ ಕೊರತೆಯಿಂದ ಹೆಚ್ಚಿನ ಜನರು ಸಾವನ್ನಪ್ಪುತ್ತಿದ್ದಾರೆ.ವಿಜ್ಞಾನ, ತಂತ್ರಜ್ಞಾನೆಷ್ಟೇ ಮುಂದುವರೆದಿದ್ದರೂ ಮನುಷ್ಯನ ಜೀವ ಉಳಿಸಲು ಮನುಷ್ಯನೇ ಬೇಕು. ರಕ್ತದಾನದಿಂದ ಉತ್ತಮ ಆರೋಗ್ಯ ಸಿಗುವುದರ ಜೊತೆಗೆ ಹೊಸ ಚೈತನ್ಯವೂ ಸಿಗುತ್ತದೆ ಎಂದು ಹೇಳಿದರು.
ಡಾ. ಆನಂದ ಮುತಾಲಿಕ ಬೇರೊಬ್ಬರ ಜೀವದ ಬೆಲೆ ತಿಳಿಯಬೇಕಾದರೆ ತಮ್ಮ ಜೀವನದ ಬೆಲೆ ಗೊತ್ತಿರಬೇಕು. ಇತ್ತೀಚಿನ ದಿನಗಳಲ್ಲಿ ಜನರಿಗೆ ಜೀವದ ಬೆಲೆ ತಿಳಿಯುತ್ತಿದ್ದುದರಿಂದಲೇ ರಕ್ತದಾನ ಮಾಡಲು ದಾನಿಗಳು ಮುಂದಾಗುತ್ತಿದ್ದಾರೆ.ಅಂತಹ ದಾನಿಗಳನ್ನು ಗುರುತಿಸಿ ಗೌರವಿಸುವುದು ನಮ್ಮೆಲ್ಲರ ಕರ್ತವ್ಯ ಎಂದು ಹೇಳಿದರು.
ಯುವ ಜನತೆ ರಕ್ತದಾನಕ್ಕೆ ಸ್ವಯಂ ಪ್ರೇರಿತರಾಗಿ ಮುಂದೇ ಬಂದರೂ ಪೋಷಕರು ತಡೆಯುತ್ತಿದ್ದಾರೆ. ಅದಕ್ಕೆ ಅವರಲ್ಲಿನ ಅರವಿನ ಕೊರತೆಯೇ ಕಾರಣವಾಗಿದ್ದು, ಯುವಕರು ರಕ್ತದಾನದಿಂದಾಗುವ ಉಪಯೋಗಗಳ ಬಗ್ಗೆ ಅರಿವು ಮೂಡಿಸಿ ರಕ್ತದಾನಕ್ಕೆ ಮುಂದಾಗಬೇಕೆಂದರು. ಅತಿಥೀಗಳಾಗಿ ಕೆ.ಆರ್.ಈ ಸಂಸ್ಥೆಯ ಖಜಾಂಚಿ ಉದಯಕುಮಾರ ನಿಡಗುಂದಿ, ಮೆಹಬೂಬ್ ನನದಿ, ಸಂಜಯ ಭಿರಡಿ, ಗುರುರಾಜ ಮಡಿವಾಳರ, ಶರದ ಹುಯಿಲಗೋಳ, ಉಪಸ್ಥಿತರಿದ್ದು ಮಾತನಾಡಿದರು.
ಈ ವೇಳೆ, ವಿಶ್ವನಾಥ ಜೋಷಿ, ಭರತೇಶ ದಾನೊಳ್ಳಿ, ಶಿವಾನಂದ ಕೋಬರ್ು, ಅಶೋಕ ಭೋಸಗಿ, ಈಶ್ವರ ಭೋವಿ, ಸುರೇಶ ಶೇಡಶ್ಯಾಳೆ, ವಿಠ್ಠಲ ಕುರುಂದವಾಡ, ರಾಜು ಕಟಾವಿ, ಛೋಟು ಪಾಟೀಲ, ಸೇರಿದಂತೆ ಹಲವಾರು ಯುವಕರು ರಕ್ತದಾನ ಶಿಬಿರದಲ್ಲಿ ಪಾಲ್ಗೊಂಡಿದ್ದರು.