ರಕ್ತದಾನ ನಾಲ್ಕು ಜೀವದಾನಕ್ಕೆ ಸಮ: ಕರ್ಪುರಮಠ


 ಧಾರವಾಡ 4: ಒಬ್ಬ ವ್ಯಕ್ತಿಯ ರಕ್ತದಾನ ನಾಲ್ಕು ವ್ಯಕ್ತಿಯ ಜೀವವನ್ನು ಉಳಿಸಬಲ್ಲದು ರಕ್ತ, ಪ್ಲಾಸ್ಮಾವ, ಪ್ಯಾಟಿಲೇಟ್ಸ್ ಹೀಗೆ ಬೇರೆ ಬೇರೆ ರುಪದಲ್ಲಿ ವ್ಯಕ್ತಿಗಳಿಗೆ ಅವುಗಳನ್ನು ನೀಡಬಹುದು ರಕ್ತ ಬೇರೆ ಎಲ್ಲೂ ತಯಾರಿಸಲು ಸಾಧ್ಯವಿಲ್ಲ ಅದು ಮನುಷ್ಯನಲ್ಲಿ ಮಾತ್ರ ಉತ್ಪತ್ತಿಯಾಗುವುದು. ರಕ್ತದಾನ ಮಾಡುವದರಿಂದ ಯಾವುದೇ ಅಡ್ಡ ಪರಿಣಾಮಗಳಿಲ್ಲ ಅದರಿಂದ ಕಳೆದುಕೊಳ್ಳುವಂತಹದು ಏನೂ ಇಲ್ಲ ಎಂದು ನಿವೃತ್ತ ಜಿಲ್ಲಾ ಸರ್ಜನ್ ಡಾ. ವ್ಹಿ. ಡಿ ಕಪರ್ೂರಮಠ ಹೇಳಿದರು.

ಜೆ.ಎಸ್.ಎಸ್ ಮಂಜುನಾಥೇಶ್ವರ ಸ್ನಾತಕ ಮತ್ತು ಸ್ನಾತಕೋತ್ತರ ಅಧ್ಯಯನ ಸಂಸ್ಥೆಯಲ್ಲಿ ಆಯೋಜಿಸಿದ್ದ ರಕ್ತದಾನ ಮಹತ್ವ ಕುರಿತು ಮಾತನಾಡಿದರು.

ಜೆ.ಎಸ್.ಎಸ್ನಲ್ಲಿ ಪ್ರತಿ ವರ್ಷ ಎರಡು ಬಾರಿ ರಕ್ತದಾನ ಶಿಬಿರಗಳನ್ನು ಆಯೋಜಿಸಲಾಗುತ್ತಿದೆ. ಈ ಬಾರಿ ಜನತಾ ಶಿಕ್ಷಣ ಸಮಿತಿ ತನ್ನ ಅಮೃತ ಮಹೋತ್ಸವ ಆಚರಿಸುತ್ತಿರುವ ಈ ಸಂದರ್ಭದಲ್ಲಿ ಹೊಸ ವರ್ಷಾಚರಣೆ ವೇಳೆಯಲ್ಲಿ ಈ ಶಿಬಿರವನ್ನು ಆಯೋಜಿಸಿದ್ದೇವೆ. ರಕ್ತದಾನದಿಂದ ವಿದ್ಯಾಥಿಗಳಲ್ಲಿ ಚೈತನ್ಯ, ಉತ್ಸಾಹ ಇಮ್ಮಡಿಗೊಳ್ಳುತ್ತದೆ. ವಿದ್ಯಾರ್ಥಿ  ದೆಸೆಯಿಂದಲೇ ಇಂತಹ ವಿಧಾಯಕ ಕೆಲಸಗಳಲ್ಲಿ ಪಾಲ್ಗೊಳ್ಳುವದರ ಮೂಲಕ ದುಶ್ಚಟಗಳಿಂದ ದೂರವಿರಬಹುದು ಹಾಗೂ ಹಲವರ ಜೀವ ಉಳಿಸಿದ ಕೃತಜ್ಞತಾ ಭಾವ ನಮ್ಮಲ್ಲಿ ಮೂಡಲು ಸಾಧ್ಯ. ರಕ್ತದಾನದ ಜೊತೆಗೆ ವಿದ್ಯಾರ್ಥಿಗಳಿಗೆ ಆರೋಗ್ಯದ ಕಾಳಜಿ, ಆಹಾರ ಸೇವಿಸುವ ಕ್ರಮ, ನೈತಿಕ ಮೌಲ್ಯಗಳ ಬಗ್ಗೆಯೂ ಜೆ.ಎಸ್.ಎಸ್ನಲ್ಲಿ ಕಾಯರ್ಾಗಾರಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಜೆ.ಎಸ್.ಎಸ್ ಮಂಜುನಾಥೇಶ್ವರ ಸ್ನಾತಕ ಮತ್ತು ಸ್ನಾಥಕೋತ್ತರ ಅಧ್ಯಯನ ಸಂಸ್ಥೆಯ ಪ್ರಾಚಾರ್ಯ ಡಾ. ಅಜಿತ ಪ್ರಸಾದ ಹೇಳಿದರು.

ದೇಶದ ಕೇವಲ 30 ಪ್ರತಿಶತ ಜನ ಮಾತ್ರ ರಕ್ತದಾನ ಮಾಡುತ್ತಿದ್ದು, ಇದರ ಬಗ್ಗೆ ವ್ಯಾಪಕ ಪ್ರಚಾರದ ಅಗತ್ಯತೆ ಇದೆ. ವೈದೈಕೀಯ ಕೇತ್ರದ ಪ್ರತಿ ಹಂತದ ಶುಶ್ರೂತೆಯಲ್ಲೂ ರಕ್ತದ ಅವಶ್ಯಕತೆ ಇದೆ. ಯುವ ಸಮೂಹ ಇಂತಹ ಶಿಬಿರಗಳಲ್ಲಿ ಪಾಲ್ಗೊಂಡು ದೇಶದ ಆರೋಗ್ಯವನ್ನು ವೃದ್ಧಿಸಬೇಕು. ಎಂದು ರೋಟರಿ ಸೇಂಟ್ರಲ್ ಧಾರವಾಡದ ಅಧ್ಯಕ್ಷ ಡಾ. ಕವನ್. ದೇಶಪಾಂಡೆ ಹೇಳಿದರು.

ಶಿಬಿರದಲ್ಲಿ ಎಸ್.ಡಿ.ಎಮ್ ರಕ್ತ ಭಂಡಾರದ ಜ್ಯೋತಿಪ್ರ್ರಿಯಾ, ಡಾ. ಆರ್.ಬಿ ಪಾಟೀಲ್ ಕ್ಯಾನ್ಸರ್ ಆಸ್ಪತ್ರೆಯ ಡಾ. ಉಮೇಶ ಹಳ್ಳಿಕೇರಿ, ಧಾರವಾಡ ಜಿಲ್ಲಾ ಆಸ್ಪತ್ರೆಯ ಡಾ. ಪ್ರಭು ಅವರು ತಮ್ಮ ತಂಡದೊಂದಿಗೆ ಭಾಗವಹಿಸಿ 220ಕ್ಕೂ ಹೆಚ್ಚು ಯುನಿಟ್ ರಕ್ತವನ್ನು ಸಂಗ್ರಹಿಸಿದರು.

ಡಾ. ಜಿ.ಕೃಷ್ಣಮೂರ್ತಿ, ಡಾ. ಸೂರಜ್ ಜೈನ್ ಪಾಲ್ಗೊಂಡಿದ್ದರು. ಮಹಾವೀರ ಉಪಾದ್ಯೆ ನಿರೂಪಿಸಿದರು. ಡಾ. ಶ್ರೀಧರ ವಂದಿಸಿದರು. ವಿಜಯಶ್ರೀ ಹೆಗಡೆ ಪ್ರಾಥರ್ಿಸಿದರು.