ಲೋಕದರ್ಶನ ವರದಿ
ರಾಯಬಾಗ 0೪: ರಕ್ತದಾನ ಮಾಡುವುದರಿಂದ ಮತ್ತೊಬ್ಬರ ಜೀವ ಉಳಿಸಬಹುದು. ಯಾವುದೇ ಕಾರಣಕ್ಕೂ ರಕ್ತದಾನ ಮಾಡಲು ಹಿಂಜರಿಕೆ ಬೇಕಿಲ್ಲ ಎಂದರು. ದಾನದಲ್ಲಿ ಶ್ರೇಷ್ಠವಾದ ಈ ರಕ್ತದಾನ ಸಾಮಾಜಿಕ ಪರಿವರ್ತನೆಯಲ್ಲಿ ಪ್ರಮುಖವಾದದ್ದು. ರಕ್ತದಾನ ಮಾಡುವುದರಿಂದ ಉತ್ತಮ ಆರೋಗ್ಯ ಪಡೆಯುವುದರ ಜತೆಗೆ ಮತ್ತೊಂದು ಜೀವವನ್ನು ಉಳಿಸಬಹುದು. ಹಾಗಾಗಿ ಯುವಕರು ಇದರ ಮಹತ್ವ ಅರಿತು ರಕ್ತದಾನ ಮಾಡಬೇಕು ಹಾಗೂ ರಕ್ತದಾನ ಮಾಡುವುದರಿಂದ ಉತ್ತಮ ಆರೋಗ್ಯ ಮತ್ತು ರಕ್ತ ಶುದ್ಧಿ ಯಾಗುತ್ತದ್ದೆಂದು ಡಾ. ಡಾ.ಜೋವಿಯಲ್ ಜೋಸ ಹೇಳಿದರು.
ಸರಕಾರಿ ಪ್ರಥಮ ದಜರ್ೆ ಕಾಲೇಜು ರಾಯಬಾಗ ಇಲ್ಲಿ ಕಾಲೇಜಿನ ರೆಡ್ ಕ್ರಾಸ್ ಯುವ ಘಟಕ ಮತ್ತು ಕೆ.ಎಲ್.ಇ ಆಸ್ಪತ್ರೆ ಬೆಳಗಾವಿ ಸಂಯುಕ್ತ ಆಶ್ರಯದಲ್ಲಿ ರಕ್ತದಾನ ಶಿಬಿರವನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮ ಉದ್ದೇಶಿಸಿ ಡಾ. ಡಾ.ಜೋವಿಯಲ್ ಜೋಸೆ, ಇವರು ಸಹಭಾಗಿತ್ವದಲ್ಲಿ ಸ್ವಯಂ ಪ್ರೇರಿತ ರಕ್ತದಾನ ಶಿಬಿರದಲ್ಲಿ ರಕ್ತದಾನ ಮಾಡಿ ಮಾತನಾಡುತ್ತಾ ನಾವುಗಳು ಪ್ರತಿ ಮೂರು ತಿಂಗಳಿಗೊಮ್ಮೆ ರಕ್ತವನ್ನು ನೀಡುವುದರಿಂದ ನಮ್ಮ ದೇಹದಲ್ಲಿ ಹೊಸ ರಕ್ತ ಉತ್ಪತ್ತಿ ಆಗುತ್ತದೆ ಇದರಿಂದ ದೈಹಿಕವಾಗಿ ಹಲವಾರು ಅನುಕೂಲತೆಗಳಿವೆ ಹಾಗೂ ಮಾನಸಿಕವಾಗಿಯೂ ಸಕಾರಾತ್ಮಕವಾಗಿ ಸಕ್ರಿಯವಾಗಿ ಎಲ್ಲಾ ಕಾರ್ಯಚಟುವಟಿಕೆಗಳು ನಿರ್ವಹಿಸಲು ಸಾಧ್ಯವಾಗುತ್ತದೆ ಆದ್ದರಿಂದ ರಕ್ತದಾನ ಮಾಡುವುದರಿಂದ ಆರೋಗ್ಯಕ್ಕೆ ತುಂಬಾ ಉಪಯುಕ್ತ. ಆದರೆ ಇದರ ಬಗ್ಗೆ ಸಾಕಷ್ಟು ಜನರಿಗೆ ಅಪನಂಬಿಕೆಗಳಿಗೆ ರಕ್ತ ನೀಡಿದರೆ ಎಲ್ಲಿ ನಮ್ಮ ದೇಹದಲ್ಲಿ ರಕ್ತ ಕಡಿಮೆ ಆಗುತ್ತದೆಯೇ ಅನುಮಾನಗಳಿವೆ ಅದೆಲ್ಲ ಶುದ್ಧ ಸುಳ್ಳು. ರಕ್ತದಾನ ಮಾಡುವದರಿಂದ ಆಗುವ ಉಪಯೋಗಗಳು, ರಕ್ತದಾನದ ಪ್ರಾಮುಖ್ಯತೆ ಮತ್ತು ಒಬ್ಬ ವ್ಯಕ್ತಿ ರಕ್ತಧಾನ ಮಾಡುವದರಿಂದ 4 ಜೀವಗಳನ್ನು ಉಳಿಸಬಹುದು ಎಂದು ಹೇಳಿದರು.
ಈ ಶಿಬಿರದಲ್ಲಿ 41 ಜನ ವಿದ್ಯಾಥರ್ಿಗಳು ಹಾಗೂ ಸಿಬ್ಬಂದಿಯವರು ರಕ್ತದಾನ ಮಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಾ.ಎಲ್.ಬಿ ಬನಶಂಕರಿ ವಹಿಸಿಕೊಂಡಿದ್ದರು. ಕಾರ್ಯಕ್ರಮದಲ್ಲಿ ಹಿರಿಯ ಪ್ರಾಧ್ಯಾಪಕರಾದ ಪ್ರೊ.ಬಿ.ಎಸ್.ಕೆಸರಗೊಪ್ಪ, ಡಾ. ಅರುಣ ವಾಯ್. ಕಾಂಬಳೆ, ಪ್ರೊ.ಗೀತಾ ಶಿವಪೂಜಿ, ಪ್ರೊ.ಎ.ಎಸ್ ಚಾನಗಿ, ಪ್ರೊ.ಯಶೋಧಾ ಅಂಗಡಿ, ಪ್ರೊ.ಬಿ.ಎಸ್ ಹಂಪಣ್ಣವರ, ಜೋತೆಪ್ಪಾ ಕಿಲ್ಲೇದಾರ, ಹಾಗೂ ಇತರೆ ಸಿಬ್ಬಂದಿ ಉಪಸ್ಥಿತರಿದ್ದರು. ಹಾಗೂ ಎಸ್.ವಿ ವಿರಗೆ ಇವರ ನೇತೃತ್ವದಲ್ಲಿ ಕೆ.ಎಲ್.ಇ ಆಸ್ಪತ್ರೆಯ ವೈದ್ಯಾಧಿಕಾರಿಗಳಾದ ಡಾ.ಬಸವರಾಜ ದೇವಗಿ, ಪಿ.ಆರ್.ಓ ಶಿವಾನಂದ ಖಾನಾಪೂರೆ, ಹಾಗೂ ಇವರ ತಂಡವು ಆಗಮಿಸಿತ್ತು. ಡಾ.ಭಾಗೀರಥಿ ಹಾಲಳ್ಳಿ ಕಾರ್ಯಕ್ರಮವನ್ನು ನಿರೂಪಿಸಿ ವಂದಿಸಿದರು.