ಅಥಣಿ 04: ಇತ್ತೀಚಿನ ದಿನದಲ್ಲಿ ರಕ್ತದಾನ ಮಾಡುವವರ ಸಂಖ್ಯೆ ಕಡಿಮೆಯಾಗಿದೆ ಮುಂಬರುವ ದಿನಗಳಲ್ಲಿ ಅಥಣಿ ತಾಲೂಕಿನ ಪ್ರತಿ ಕಾಲೇಜುಗಳಲ್ಲಿ ರಕ್ತದಾನ ಶಿಬಿರ ಏರ್ಪಡಿಸುವುದರ ಮೂಲಕ ರಕ್ತದಾನ ಆಂದೋಲನ ಪ್ರಾರಂಭಿಸಲಾಗುವುದು ಎಂದು ಅಥಣಿಯ ಚಿಕ್ಕಮಕ್ಕಳ ತಜ್ಞ ಡಾ ಸಿ.ಎ.ಸಂಕ್ರಟ್ಟಿ ಅವರು ಹೇಳಿದರು.
ಪಟ್ಟಣದ ಸ್ಥಳೀಯ ಜೆ.ಎ.ಶಿಕ್ಷಣ ಸಂಸ್ಥೆಯ ಶತಮಾನೋತ್ಸವಾಚರಣೆಯ ನಿಮಿತ್ಯ ಕೆ.ಎ.ಲೋಕಾಪೂರ ಪದವಿ ಮಹಾವಿದ್ಯಾಲಯದ ವಾಯ್.ಆರ್.ಸಿ ಘಟಕದ ವತಿಯಿಂದ ಹಮ್ಮಿಕೊಂಡ ರಕ್ತದಾನ ಶಿಬಿರವನ್ನು ಉದ್ದೇಶಿಸಿ ಮಾತನಾಡಿದ ಅಥಣಿಯ ಚಿಕ್ಕಮಕ್ಕಳ ತಜ್ಞ ಡಾ ಸಿ.ಎ.ಸಂಕ್ರಟ್ಟಿ ಅವರು ಮಾನವನ ರಕ್ತವನ್ನು ಯಾರಿಂದಲೂ ಸೃಷ್ಟಿಸಲು ಸಾಧ್ಯವಿಲ್ಲ ಆದರೆ ರಕ್ತವನ್ನು ದಾನವನ್ನಾಗಿ ನೀಡುವುದರಿಂದಾಗಿ ಹೊಸ ರಕ್ತವನ್ನು ಸೃಷ್ಟಿಸಲು ಸಾಧ್ಯವಿದೆ ಎಂದರು.
ಮತ್ತೊರ್ವ ವೈದ್ಯ ಡಾ ಪಿ.ಪಿ.ಮಿರಜ ಅವರು ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿ ನಾವು ರಕ್ತದಾನ ಮಾಡುವದರಿಂದ ಒಬ್ಬ ಮನುಷ್ಯನ ಜೀವ ಉಳಿಸುವ ಕೆಲಸ ಮಾಡುತ್ತೇವೆ ಅಷ್ಟೇ ಅಲ್ಲಾ ರಕ್ತದಾನ ಮಾಡುವದರಿಂದ ನಮ್ಮ ದೇಹದಲ್ಲಿ ಹೊಸ ರಕ್ತ ಉತ್ಪತ್ತಿಯಾಗಲು ಸಹಕಾರಿ ಯಾಗುತ್ತದೆ, ಜ್ಞಾಪಕ ಶಕ್ತಿ, ಹೃದಯಾಘಾತ, ರಕ್ತದ ಒತ್ತಡ, ಹೀಗೆ ಕೆಲವು ರೋಗಗಳನ್ನು ತಡೆಗಟ್ಟಲು ಸಹಾಯವಾಗುತ್ತದೆ ಎಂದರು, ದಾನದಲ್ಲಿ ಅತ್ಯಂತ ಶ್ರೇಷ್ಠವಾದ ದಾನ ಎಂದರೆ ಅದು ರಕ್ತದಾನ ಶೇಷ್ಠ ಎಂದು ಸಂದೇಶ ನೀಡಿದರು,
ಕೆ.ಎ.ಲೋಕಾಪೂರ ಪದವಿ ಮಹಾವಿದ್ಯಾಲಯದ ವಾಯ್.ಆರ್.ಸಿ ಘಟಕದ ಸಂಯೋಜನಾಧಿಕಾರಿ ಪ್ರೋ ಪಿ.ಎಲ್.ನರಗಟ್ಟಿ ಮತ್ತು ಪ್ರೋ ಬಿ,ಪಿ.ಗುಂಡಾ ಮತ್ತು ಪ್ರಾಚಾರ್ಯ ಪ್ರೋ ಆರ್.ಎಮ್.ದೇವರಡ್ಡಿ ಅವರು ಮಾತನಾಡಿದರು. ಹಾಗೂ ಈ ಕಾರ್ಯಕ್ರಮದಲ್ಲಿ 100 ಕ್ಕೂ ಹೆಚ್ಚು ಜನರು ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡಿದರು.
ಡಾ ಪ್ರಶಾಂತ ಮಗದುಮ, ಪ್ರೋ ಎಚ್.ಜಿ.ಗಡಕರಿ, ಪ್ರೋ ಸಂತೋಷ ಬಡಕಂಬಿ, ಪ್ರೋ ಪ್ರಶಾಂತ ಚನ್ನರೆಡ್ಡಿ, ಪ್ರೋ ಮಹಾಂತೇಶ ಜನವಾಡ, ಪ್ರೋ ಸನಾಉಲ್ಲಾ, ಪ್ರೋ ರಾಕೇಶ, ಪ್ರೋ ಮಹಾದೇವ ಸಂಕಪಾಳ, ಪ್ರೋ ಸಾಗರ ಸಂಬರಗಿ, ಪ್ರೋ ಟಿ.ಆರ್,ಕಿತ್ತೂರ, ಪ್ರೋ ರಂಜೀತ ದೇಸಾಯಿ, ಪ್ರೋ ಯೋಗೇಶ ಕುಲಕಣರ್ಿ, ಪ್ರೋ ಬಸವರಾಜ ಯಳ್ಳೂರ, ಪ್ರೋ ಬಾಳೆಶ ಬಮನಾಳೆ, ಪ್ರೋ ಸಂದೇಶ ಬಸ್ತವಾಡ, ಪ್ರೋ ಸಂತೋಷ ಕುಲಕಣರ್ಿ, ಪ್ರೋ ಮಂಜು ಸರಿಕರ, ಪ್ರೋ ರಿಯಾಜ ಪಠಾಣ, ಪ್ರೋ ಗಜಾನನ ಕೋರೆ, ಪ್ರೋ ಆನಂದ ಹವಾಯಿ, ಪ್ರೋ ಸುರೇಶ ಜಾಧವ ಅನೇಕರು ಉಪಸ್ಥಿತರಿದ್ದರು,