ಪುನೀತ ರಾಜಕುಮಾರ ಅವರ 50ನೇ ಹುಟ್ಟುಹಬ್ಬದ ನಿಮಿತ್ತ; ರಕ್ತದಾನ ಶಿಬಿರ

Blood donation camp on the occasion of Puneetha Rajkumar's 50th birthday

ಪುನೀತ ರಾಜಕುಮಾರ ಅವರ 50ನೇ ಹುಟ್ಟುಹಬ್ಬದ ನಿಮಿತ್ತ; ರಕ್ತದಾನ ಶಿಬಿರ 

ಬೀಳಗಿ, 17; ರಕ್ತ ದಾನ ಮಾಡುವುದರಿಂದ ಯಾವುದೇ ಹೃದಯ ಕಾಯಿಲೆ ಬರುವುದಿಲ್ಲ. ಮನುಷ್ಯನಲ್ಲಿ ರಕ್ತ ಸಮತೋಲನವಾಗಿದ್ದರೆ ಆರೋಗ್ಯವಂತನಾಗಿರುತ್ತಾನೆ. ವ್ಯತಿರಿಕ್ತ ಸಮಸ್ಯಗಳಿಗೆ ರಕ್ತದಾನ ಉತ್ತಮವಾದದ್ದು. ಒಬ್ಬ ರಕ್ತದಾನ ಮಾಡುವುದರಿಂದ ಮೂರು ಜೀವ ಬದುಕುತ್ತವೆ ಎಂದು ಬೀಳಗಿ ಕಲ್ಮಠದ ಗುರುಪಾದ ಶಿವಾಚಾರ್ಯ ಸ್ವಾಮಿಜೀ ಹೇಳಿದರು. 

      ಸ್ಥಳೀಯ ಓಂ ಕ್ರಿಕೆಟ್ ಅಕಾಡೆಮಿಯ ಆವರಣದಲ್ಲಿ ಪುನೀತ ರಾಜಕುಮಾರ ಅವರ 50ನೇ ಹುಟ್ಟುಹಬ್ಬದ ನಿಮಿತ್ಯವಾಗಿ, ಪುನೀತ ಮೆಮೊರಿಯಲ್ ಟ್ರಸ್ಟ್‌, ಧನ್ವಂತರಿ ರಕ್ತನಿಧಿ ಬಾಗಲಕೋಟೆ ಹಾಗೂ ಪಟ್ಟದಕಲ್ಲ ಆಸ್ಪತ್ರೆ  ಬೀಳಗಿ ಇವರ ಸಹಯೋಗದಲ್ಲಿ ಸ್ವಯಂ ಪ್ರೇರಿತ ರಕ್ತದಾನ ಶಿಬಿರ, ಉಚಿತ ಆರೋಗ್ಯ ತಪಾಸಣಾ ಶಿಬಿರದ ಸಾನಿಧ್ಯವಹಿಸಿ ಅವರು ಮಾತನಾಡಿದರು. 

       ವೈದ್ಯಕೀಯ ಲೋಕದಲ್ಲಿ ಮನುಷ್ಯನ ಯಾವುದೇ ಅಂಗಾಂಗಗಳು ಹೋದರು ಅವುಗಳನ್ನು ವೈದ್ಯರು ಜೋಡಣೆ ಮಾಡಿ ಬದುಕಿಸುತ್ತಾರೆ. ಯಾವುದೇ ವಿಶ್ಮಯದಲ್ಲಿ ವಿಜ್ಞಾನವಾಗಲಿ, ತಂತ್ರಜ್ಞಾನವಾಗಲಿ ಎಷ್ಟೇ ಪ್ರಯತ್ನ ಮಾಡಿರಬಹುದು ಆದರೆ ರಕ್ತವನ್ನು ಸೃಷ್ಟಿ ಮಾಡಲು ಆಗುತ್ತಿಲ್ಲ. ಇದರಿಂದಾಗಿ ನಾವುಗಳು ರಕ್ತದ ಮಹತ್ವವನ್ನು ಅರಿಯಬೇಕಾಗಿದೆ. ರಕ್ತದಾನ ಮಾಡುವುದರಿಂದ ನೀಡಿದರರಿಗೂ, ಪಡೆದವರಿಗೂ ಇಬ್ಬರಿಗೂ ಲಾಭವಿದೆ. ಸಮಾಜ ಸೇವೆಯ ಜೊತೆಗೆ ಸಮಾಜದ ಚಿಂತನೆ ಮಾಡುವ ಉದ್ಧೇಶಕ್ಕಾಗಿ ಸಂಘ, ಸಂಸ್ಥೆಗಳನ್ನು ಹುಟ್ಟುಹಾಕಬೇಕು. ಇಂತಾ ಕಾರ್ಯವನ್ನು ಪುನೀತ ಮೆಮೋರಿಯಲ್ ಟ್ರಸ್ಟ್‌ ಮಾಡುತ್ತಿರುವುದು ಶ್ಲಾಘನೀಯ ಎಂದರು. 

      ಪಟ್ಟಣದ ಪುನೀತ್ ರಾಜಕುಮಾರ ಅಭಿಮಾನಿ ಬಳಗದ  30ಯುವಕರು ರಕ್ತದಾನ ಮಾಡಿದರೆ, ಮಹಿಳೆಯರು ಸೇರಿದಂತೆ 45 ಯುವಕರು ಸೇರಿ ಒಟ್ಟು 75 ಜನರು ರಕ್ತದಾನ ಮಾಡಿದ್ದಾರೆ. 80 ಜನರ ಆರೋಗ್ಯ ತಪಾಸಣೆ ಮಾಡಲಾಗಿದೆ.    

      ಎಸ್ ಎಚ್ ಯಾಳವಾರಮಠ, ವೀರೇಂದ್ರ ಶೀಲವಂತ ಮಾತನಾಡಿದರು. ಅಧ್ಯಕ್ಷೆತೆ ಪುನೀತ ಮೆಮೋರಿಯಲ್ ಟ್ರಸ್ಟ್‌ ಅದ್ಯಕ್ಷೆ ಆಶಾ  ಶಾಹೀರ್ ಬೀಳಗಿ ವಹಿಸಿದ್ದರು, ಪಪಂ ಅಧ್ಯಕ್ಷ ಮುತ್ತು ಬೋರ್ಜಿ, ಉಪಾಧ್ಯಕ್ಷೆ ಕಲಾವತಿ ಗಡ್ಡದ, ಸದಸ್ಯ ರಾಜು ಬೊರ್ಜಿ, ಸಿದ್ದು ಮಾದರ, ಎಂ.ಎಸ್‌.ಕೋಮಾರ ದೇಸಾಯಿ, ಶಾಹೀರ ಬೀಳಗಿ, ಡಾ.ವಾಶಿಂ ಫೀರೊಜಿ ಪಟ್ಟದಕಲ್ಲ, ಆನಂದ ಹಳ್ಳಿ, ಸೀರಾಜಾ ದಳವಾಯಿ, ಆರೀಫ ಬೀಳಗಿ, ವಿಶಾಲಾಕ್ಷ ಹಿರೇಮಠ, ಸುನಂದಾ ದೇಸಾಯಿ ಇತರರು ಇದ್ದರು.