ರಕ್ತದಾನ ಶಿಬಿರ
ಕೊಪ್ಪಳ 21: ನಗರದ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶುಕ್ರವಾರ ರಾಷ್ಟ್ರೀಯ ಸೇವಾ ಯೋಜನೆ ಹಾಗೂ ರೆಡ್ ಕ್ರಾಸ್ ಸಹಯೋಗದಲ್ಲಿ ಸಂವೇದನಾ -2 ಬೃಹತ್ ರಕ್ತದಾನ ಅಂಗವಾಗಿ ರಕ್ತದಾನ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು. ಕಾಲೇಜಿನ ಪ್ರಭಾರ ಪ್ರಾಂಶುಪಾಲರಾದ ಡಾ. ಭಾಗ್ಯಜ್ಯೋತಿ ಅವರು ಶಿಬಿರವನ್ನು ಉದ್ಘಾಟಿಸಿ ರಕ್ತದಾನ ಮೂರು ಜೀವಿಗಳನ್ನು ಏಕಕಾಲಕ್ಕೆ ಉಳಿಸಬಹುದು ಎಂದು ಹೇಳಿದರು. ವಿದ್ಯಾರ್ಥಿಗಳು ಸ್ವಯಂ ಪ್ರೇರಿತ ರಕ್ತದಾನ ಮಾಡುವ ಮೂಲಕ ಸಮಾಜಕ್ಕೆ ಮಾದರಿ ಆಗಬಲ್ಲರು ಎಂದು ಹೇಳಿದರು. ರಾಷ್ಟ್ರೀಯ ಸೇವಾ ಯೋಜನೆ ಘಟಕಗಳ ಕಾರ್ಯಕ್ರಮಾಧಿಕಾರಿಗಳಾದ ಶ್ರೀಮತಿ ಗಾಯತ್ರಿ ಭಾವಿಕಟ್ಟಿ ಮಾತನಾಡಿ ರಕ್ತದಾನ ಮಾಡುವುದು ಮಹತ್ತರ ಕಾರ್ಯ. ದೇಶ ಸೇವೆಯ ಒಂದು ಭಾಗ ಎಂದು ಹೇಳಿದರು. ಮತ್ತೊಬ್ಬ ಕಾರ್ಯಕ್ರಮಾಧಿಕಾರಿ ಡ.ಉಮೇಶ್ ಅಂಗಡಿ ಹಾಗೂ ರೆಡ್ ಕ್ರಾಸ್ ಘಟಕದ ಸಂಚಾಲಕರಾದ ಶಿವನಾಥ್ ಈ.ಜಿ ಸ್ವಯಂ ಪ್ರೇರಿತ ರಕ್ತದಾನಕ್ಕೆ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಿ ಮಾತನಾಡಿದರು. ಐದು ಜನ ಬೋಧಕರು ಸೇರಿದಂತೆ ಮೂವತ್ತಕ್ಕೂ ಹೆಚ್ಚು ವಿದ್ಯಾರ್ಥಿಗಳು ರಕ್ತದಾನ ಮಾಡಿ ಸಮಾಜಕ್ಕೆ ಮಾದರಿಯಾದರು. ಒಟ್ಟು ಮೂವತ್ತೆಂಟು ಯೂನಿಟ್ ರಕ್ತ ಸಂಗ್ರಹವಾಯಿತು. ಕನ್ನಡ ವಿಭಾಗದ ಡಾ.ಪ್ರಕಾಶ್ ಬಳ್ಳಾರಿ, ಡಾ.ತುಕಾರಾಮ್ ನಾಯ್ಕ, ಡಾ. ಮಹಾಂತೇಶ ನೆಲಾಗಣಿ, ಬಿ.ಬಿ.ಎ ವಿಭಾಗದ ಎಸ್ ಬಾಲಾಜಿ, ಶಂಕರಾನಂದ , ರಾಜ್ಯಶಾಸ್ತ್ರ ವಿಭಾಗದ ಕೊಟ್ರ್ಪ ಮುಂತಾದವರು ಹಾಜರಿದ್ದರು.