ರಕ್ತದಾನದಿಂದ ಜೀವ ಉಳಿಸುವ ಪುಣ್ಯ ಸಿಗುತ್ತದೆ-ಡಾ. ಶಿವನಗೌಡ ಪಾಟೀಲ
ಕೊಪ್ಪಳ 24: ಎಲ್ಲಾ ದಾನಗಳಲ್ಲಿ ಶ್ರೇಷ್ಠವಾದ ದಾನ ರಕ್ತದಾನ, ರಕ್ತದಾನದಿಂದ ಒಂದು ಜೀವ ಉಳಿಸುವಂತಹ ಪುಣ್ಯ ಸಿಗುತ್ತದೆ ಅದಕ್ಕಾಗಿ ಆರೋಗ್ಯವಂತ ಯುವ ಪೀಳಿಗೆ ಪ್ರತಿಯೊಬ್ಬರು ರಕ್ತದಾನ ಮಾಡಿ ಜೀವ ಉಳಿಸುವಂತಹ ಪುಣ್ಯಗಳಿಸಿಕೊಳ್ಳಿ ಎಂದು ನ್ಯಾಷನಲ್ ಇಂಟಿಗ್ರೇಟೆಡ್ ಮೆಡಿಕಲ್ ಅಧ್ಯಕ್ಷರಾದ ಡಾ. ಶಿವನಗೌಡ ಪಾಟೀಲ್ ಹೇಳಿದರು.
ಕೊಪ್ಪಳದ ಅಟಲ್ ಬಿಹಾರಿ ವಾಜಪೇಯಿ ಕಾನೂನು ಮಹಾವಿದ್ಯಾಲಯದಲ್ಲಿ ಸಂವೇದನಾ 2, ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ಭಗತ್ ಸಿಂಗ್, ಸುಖದೇವ್, ಮತ್ತು ರಾಜಗುರು ಇವರ 94ನೇ ವರ್ಷದ ಹುತಾತ್ಮ ದಿನಾಚರಣೆಯ ಅಂಗವಾಗಿ ಸವೇದನಾ 2, ಏರಿ್ಡಸಿದ ರಕ್ತದಾನ ಶಿಬಿರ ದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದರು. ಅನ್ನದಾನ ಅಕ್ಷರ ದಾನದಂತೆ ರಕ್ತದಾನ ಕೂಡ ಮಹತ್ವದ ದಾನವಾಗಿದೆ. ಇದರಿಂದ ಒಂದು ಜೀವ ಒಂದು ಕುಟುಂಬ ಉಳಿಸುವಂತಹ ಕೆಲಸವಾಗುತ್ತದೆ. ಕಾರಣ ರಕ್ತದಾನಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡಬೇಕು ರಕ್ತದಾನದಿಂದ ಜೀವ ಉಳಿಸುವಂತಹ ಕೆಲಸ ನಮ್ಮೆಲ್ಲರಿಂದ ನಡೆಯಲಿ ಎಂದು ರಕ್ತದಾನದ ಮಹತ್ವ ಕುರಿತು ವಿಶೇಷ ಮಾಹಿತಿ ಯನ್ನು ಡಾ. ಶಿವನಗೌಡ ಪಾಟೀಲ್ ತಿಳಿಸಿದರು.
ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ನ್ಯಾಷನಲ್ ಇಂಟಿಗ್ರೇಟೆಡ್ ಮೆಡಿಕಲ್ ಅಸೋಸಿಯೇಷನ್ ಮಹಿಳಾ ಘಟಕದ ಅಧ್ಯಕ್ಷರಾದ ಡಾ. ಕಸ್ತೂರಿ ಕರಮುಡಿ ಅವರು ಮಾತನಾಡಿ ರಕ್ತದಾನಕ್ಕೆ ಯುವ ಪೀಳಿಗೆ ಮುಂದಾಗಬೇಕು. ಎಲ್ಲಾ ದಾನಗಳಲ್ಲಿ ರಕ್ತದಾನ ಮಹತ್ವ ಪಡೆದಿದೆ ಇದು ಶ್ರೇಷ್ಠವಾದ ದಾನವಾಗಿದೆ ಎಂದು ಡಾ, ಕಸ್ತೂರಿ ಕರ ಮುಡಿ ಹೇಳಿದರು. ಕಾಲೇಜಿನ ಪ್ರಾಚಾರ್ಯರಾದ ಉಷಾ ಹಿರೇಮಠ ಅಧ್ಯಕ್ಷತೆವಹಿಸಿ ಮಾತನಾಡಿ ರಕ್ತದಾನ ಮಹತ್ವ ಕುರಿತು ವಿವರಿಸಿದರು. ಉಪ ಪ್ರಚಾರರಾದ ಎಸ್,ಎಂ ,ಬಸವರಾಜ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಕು, ಹುಲಿಗೆಮ್ಮ ನಿರೂಪಣೆಯನ್ನು ನೆರವೇರಿಸಿದರೆ, ಸಂಸ್ಥೆಯ ಕಾರ್ಯದರ್ಶಿ, ಡಾ. ಸುಧಾಕರ್ ಮತ್ತು ಮಹಿಳಾ ಘಟಕದ ಕಾರ್ಯದರ್ಶಿ, ಡಾ. ಭಾಗ್ಯಶ್ರೀ ಗಾಯದ, ಹಾಗೂ ಡಾ, ಲಿಂಗರಾಜ್ ಶಿವರೆಡ್ಡಿ, ನ್ಯಾಯವಾದಿ ಯು ವಿ ಸೊಪ್ಪಿಮಠ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.