ಹಾವೇರಿ: ಫೆ.20: ತಾಯಿಯ ಎದೆಹಾಲು ಹಾಗೂ ರಕ್ತವನ್ನು ಕೃತಕವಾಗಿ ತಯಾರಿಸಲು ಸಾಧ್ಯವಿಲ್ಲ. ಅವುಗಳನ್ನು ದಾನದ ರೂಪದಲ್ಲಿಯೇ ಪಡೆಯಬೇಕು. ಹೀಗಾಗಿ ದಾನಗಳಲ್ಲಿ ರಕ್ತದಾನವೇ ಅತ್ಯಂತ ಶ್ರೇಷ್ಠವಾದ ದಾನ ಎಂದು ಭಾರತೀಯ ರಡ್ಕ್ರಾಸ್ ಸಂಸ್ಥೆಯ ಕಾರ್ಯದಶರ್ಿಗಳಾದ ಡಾ.ನಿಲೇಶ್ ಎಮ್.ಎನ್.ಅವರು ಹೇಳಿದರು.
ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಹಾವೇರಿ ಹಾಗೂ ಹೊಸಳ್ಳಿ ಗ್ರಾಮಸ್ಥರು, ಸ್ನೇಹ ಮೈತ್ರಿ ರಕ್ತದಾನಿಗಳ ಬಳಗ ಅಕ್ಕಿಆಲೂರು, ಯುವ ಬ್ಲೆಡ್ ಡೋನರ್ಸ್ ಹಾವೇರಿ, ಸ್ವಾಮಿ ವಿವೇಕಾನಂದ ಯುವಕ ಸಂಘ ಹಿರೇಹುಲ್ಲಾಳ, ಹಾಗೂ ರಕ್ತ ನಿಧಿ ಘಟಕ ಹಾವೇರಿ ಇವರುಗಳ ಸಹಯೋಗದಲ್ಲಿ ಗುರುವಾರ ಹೊಸಳ್ಳಿ ಗ್ರಾಮದಲ್ಲಿ ಜರುಗಿದ ರಕ್ತದಾನ ಹಾಗೂ ಆರೋಗ್ಯ ಚಿಕಿತ್ಸಾ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಭಾರತೀಯ ರೆಡ್ಕ್ರಾಸ್ ಸಂಸ್ಥೆಯ ಚೇರಮನ್ರಾದ ಸಂಜೀವಕುಮಾರ ಅವರು ಮಾತನಾಡಿ, ಜೀವನದಲ್ಲಿ ಪ್ರತಿಯೊಬ್ಬರು ಒಂದು ಬಾರಿಯಾದರು ರಕ್ತದಾನ ಮಾಡಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಅಬ್ದುಲ್ ಹುಸೇನ್ಸಾಬ ದೊಡ್ಮನಿ, ಜಿಲ್ಲಾ ರಕ್ತನಿಧಿ ಘಟಕದ ತಜ್ಞ ವೈದ್ಯರಾದ ಡಾ.ಬಸವರಾಜ ತಳವಾರ ಸೇರಿದಂತೆ ಇತರರು ಹಾಜರಿದ್ದರು.
ಹೆಚ್ಚು ಬಾರಿ ರಕ್ತದಾನ ಮಾಡಿದ ದಾನಿಗಳಾದ ವಿನಾಯಕ ಚಿನ್ನೂರು, ತಾನಾಜಿ ಘೋರ್ಪಡೆ, ವಿಜಯ ದೇವರಗುಂಡಿಮಠ, ರಾಜೀವ ತಿಳವಳ್ಳಿ, ಕರಬಸಪ್ಪ ಮಗೊಂದಿ, ರಾಘವೇಂದ್ರ ರೇಣುಕೆ, ಕಿರಣ ಗಡ, ಸಂಜೀವ ಅಚಲಕರ, ಸುಚಿತ ಅಂಗಡಿ, ಹರೀಶ್ ಕುಮಾರ ಇವರಿಗೆ ಸನ್ಮಾನ ಮಾಡಲಾಯಿತು.