ಕಾಗವಾಡ 30: ಡಾ. ಅಮೋಲ ಸರಡೆ ಜನ್ಮ ದಿನದ ನಿಮಿತ್ಯ ಮಿರಜ್‌ನ ಸಿದ್ಧಿವಿನಾಯಕ ಬಡ್ಲ್ ಬ್ಯಾಂಕ್ ಇವರ ಸಹಯೋಗದಲ್ಲಿ ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಗಿದೆಯೆಂದು ಜುಗೂಳ ಗ್ರಾಮ ಪಂಚಾಯತ ಸದಸ್ಯ ರಾಜು ಪಾಟೀಲ ತಿಳಿಸಿದ್ದಾರೆ.
ಅವರು, ಕಾಗವಾಡ ತಾಲೂಕಿನ ಶಿರಗುಪ್ಪಿ ಗ್ರಾಮದಲ್ಲಿ ಶುಕ್ರವಾರ ದಿ. 29 ರಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದರು.
ಡಾ. ಅಮೋಲ ಸರಡೆ ಅವರು ಅಮೋಲ ಜನಕಲ್ಯಾಣ ಪ್ರತಿಷ್ಠಾನ ಸ್ಥಾಪಿಸಿ, ಅನೇಕ ಸಾಮಾಜಿಕ ಕಾರ್ಯಗಳನ್ನು ಹಮ್ಮಿಕೊಳ್ಳುತ್ತಾ ಬಂದಿರುತ್ತಾರೆ. ಅಮೋಲ ಜನಸ್ನೇಹಿ ಕಾರ್ಯಾಲಯ ಸ್ಥಾಪಿಸಿ, ಅನೇಕ ಜನರಿಗೆ ಯೋಗ್ಯ ಮಾರ್ಗದರ್ಶನ ಮಾಡುತ್ತಿದ್ದಾರೆ. ಅವರ ಹುಟ್ಟು ಹಬ್ಬದ ಪ್ರಯುಕ್ತ ಮಿರಜ್‌ನ ಸಿದ್ಧಿವಿನಾಯಕ ಬಡ್ಲ್ ಬ್ಯಾಂಕ್ ಇವರ ಸಹಯೋಗದಲ್ಲಿ ರವಿವಾರ ದಿ. 01 ರಂದು ಬೆಳಿಗ್ಗೆ 9 ರಿಂದ ರಕ್ತದಾನ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಸಾನಿಧ್ಯವನ್ನು ಸದಲಗಾದ ಡಾ. ಶ್ರದ್ಧಾನಂದ ಶ್ರೀಗಳು, ಪರಮಾನಂದವಾಡಿಯ ಡಾ. ಅಭಿನವ ಬ್ರಹ್ಮಾನಂದ ಶ್ರೀಗಳು ವಹಿಸಲಿದ್ದಾರೆ. ಜೊತೆಗೆ ಮೊಳವಾಡದ ಕಿರ್ತನಕಾರರಾದ ಹಬಪ ಸುಭಾಷ ಶೇವಾಳೆ ಮಹಾರಾಜರು ಉಪಸ್ಥಿತರಿರುವರು. ಉದ್ಘಾಟಕರಾಗಿ ಶಾಸಕ ರಾಜು ಕಾಗೆ, ಸಿಪಿಐ ಸಂತೋಷ ಹಳ್ಳೂರ, ಪಿಎಸ್‌ಐ ಗಂಗಾ ಬಿರಾದರ ಸೇರಿದಂತೆ ಅನೇಕರು ಉಪಸ್ಥಿತರಿರಲಿದ್ದು, ಬೆಳಗಾವಿ ವುಶು ಸಂಸ್ಥೆ, ಗ್ರಾಮ ಪಂಚಾಯತ ಶಿರಗುಪ್ಪಿ ಮತ್ತು ಎಲ್ಲ ಗ್ರಾಮಗಳ ಮಂಡಳಗಳು ಹಾಗೂ ಸಹಕಾರಿ ಸಂಘಗಳು ಸಹಕಾರ ನೀಡಲಿವೆ ಎಂದು ತಿಳಿಸಿದ್ದಾರೆ.
ಸಂದೀಪ ಪಾಟೀಲ, ಉಮೇಶ ಸರಡೆ, ವರ್ಧಮಾನ ಈರಣ್ಣವರ, ಅನೀಲ ಘಟಗೆ, ರೋಹಿತ ಘುನಕೆ ಉಪಸ್ಥಿತರಿದ್ದರು.