ಮಾಸ್ಕೋ, ನವೆಂಬರ್ 15 : ಆಗ್ನೇಯ ಫ್ರಾನ್ಸ್ನಲ್ಲಿ ಸಂಭವಿಸಿದ ಭಾರಿ ಹಿಮಪಾತದಿಂದ ಸುಮಾರು 200,000 ಮನೆಗಳಿಗೆ ವಿದ್ಯುತ್ ಸರಬರಾಜು ಇಲ್ಲದೆ ಕತ್ತಲೆಯಲ್ಲೆ ಕಾಲ ಕಳೆಯಬೇಕಾದ ಸ್ಥಿತಿ ಬಂದಿದೆ ಎಂದು ಮಾಧ್ಯಮವರದಿ ಹೇಳಿದೆ. ವಿದ್ಯುತ್ ಕಡಿತವನ್ನು ಡ್ರೋಮ್, ಅಡರ್ೆಚೆ, ಐಸೆರೆ ಮತ್ತು ರೋನ್ ಇಲಾಖೆಗಳಲ್ಲಿ ನೋಂದಾಯಿಸಲಾಗಿದೆ ಎಂದು ವಿದ್ಯುತ್ ಸರಬರಾಜುದಾರರನ್ನು ಉಲ್ಲೇಖಿಸಿ ಸುದ್ದಿವಾಹಿನಿಗಳು ಪ್ರಸಾರ ಮಾಡಿವೆ. ಹಿಮಪಾತದಿಂದಾಗಿ 140,000 ಕುಟುಂಬಗಳು ಹೆಚ್ಚಿನ ವಿದ್ಯುತ್ ಸಮಸ್ಯೆ ಎದುರಿಸುತ್ತಿವೆ ಮರಗಳ ಮೇಲೆ ರಾಶಿ , ರಾಶಿ ಹಿಮ ಬಿದ್ದು ಮರಗಳು ಧರೆಗೆ ಉರುಳುತ್ತಿರುವುದು ವಿದ್ಯುತ್ ಸರಬರಾಜಿಗೆ ತೊಂದರೆಯಾಗಿದೆ ಎಂದು ಎನೆಡಿಸ್ ಹೇಳಿದರು.