ಗಡಿಭಾಗದ ಶಾಲೆಗೆ ಬಿಸಿ ಊಟ ಅಧಿಕಾರಿಗಳ ಭೇಟಿ

Bisi uta officials visit to school

ಸಂಬರಗಿ 11: ಮಧ್ಯಾಹ್ನದ ಆಹಾರ ಯೋಜನೆಯ ಅಧಿಕಾರಿ ಮಲ್ಲಿಕಾರ್ಜುನ ನಾಮದಾರ ಅವರು ಗಡಿಭಾಗದ ಶಾಲೆಗೆ ಅನೀರೀಕ್ಷಿತ ಭೇಟಿ ನೀಡಿ ಆಹಾರದ ಬಗ್ಗೆ ವಿಚಾರಿಸಿ ಮುಖ್ಯೋಪಾಧ್ಯಾಯರಿಗೆ ಸೂಕ್ತ ಸೂಚನೆಗಳನ್ನು ನೀಡಿದರು.  

ಅವರು ಸಂಬಂಧಪಟ್ಟ ಶಿಕ್ಷಕರನ್ನು ಭೇಟಿಯಾಗಿ ಏನಾದರೂ ತಪ್ಪಾದಲ್ಲಿ  ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ.  ಅಥವಾ ತಪ್ಪು ಮಾಹಿತಿಯನ್ನು ನೀಡಬಾರದು ಎಂದು ಸೂಚನೆ ನೀಡಿದರು.   

ಜಕಾರಹಟಿ, ಅರಳಹಟಿ, ಗುಂಡೆವಾಡಿ, ಖಿಳೇಗಾಂವ್ ಅಜುರ್ ಚಂದ್ರಪವಾಡಿ ಶಾಲೆಗಳಿಗೆ ಭೇಟಿ ನೀಡಿ ಅಲ್ಲಿನ  ಸಂಬಂಧಪಟ್ಟ ಶಿಕ್ಷಕರಿಗೆ ಸೂಚನೆ ನೀಡಿದರು. ಸರಿಯಾದ ಆಹಾರವನ್ನು ನೀಡದಿರುವಲ್ಲಿ ಯಾವುದೇ ತಪ್ಪು ಕಂಡುಬಂದರೆ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.  

 ಈ ಶಾಲೆಗಳಲ್ಲಿರುವ ಎಲ್ಲಾ ಶಿಕ್ಷಕರು ವಿದ್ಯಾರ್ಥಿಗಳ ಸಂಖ್ಯೆಗೆ ಅವರ ಬೇಡಿಕೆಗೆ ತಕ್ಕಂತೆ ಬಾಳೆಹಣ್ಣು ಮೊಟ್ಟೆಗಳು ಚಕ್ಕಿ ನೀಡಬೇಕು,  ವಿದ್ಯಾರ್ಥಿಗಳ ಬೇಡಿಕೆಗಳಿಗೆ ಅನುಗುಣವಾಗಿ ನೀಡಬೇಕು  ಬಾಳೆಹಣ್ಣುಗಳನ್ನು ಮಾತ್ರ ನೀಡಿದರೆ ಕ್ರಮ ಕೈಗೊಳ್ಳುವುದಾಗಿ ಶಿಕ್ಷಕರು ಎಚ್ಚರಿಸಿದ್ದಾರೆ.