ಲೋಕದರ್ಶನವರದಿ
ರಾಣೇಬೆನ್ನೂರು: ಗುರುಪೂಣರ್ಿಮೆ ದಿನ ಗುರು ಸೂತ್ರದ ಪ್ರಭಾವ ಇತರ ದಿನಗಳಿಗಿಂತ ಪ್ರಭಾವಶಾಲಿಯಾಗಿರುತ್ತದೆ ಎನ್ನುವ ನಂಬಿಕೆ ಇದೆ. ಸಂಸ್ಕೃತ ಭಾಷೆಯಲ್ಲಿ ಗು ಅಂದರೆ ಅಂಧಕಾರ ಅಥವಾ ಅಜ್ಞಾನ. ರು ಎಂದರೆ ದೂರ ಮಾಡುವ ಎಂದರ್ಥವಾಗಿದೆ. ಎಂದು ಕರೆಯಲಾಗುತ್ತದೆ ಎಂದು ನಗರದ ವಿಶ್ವವಿಭು ಧ್ಯಾನಪೀಠದ ಆಚಾರ್ಯ ಮೌನೇಶ್ವರ ಗುರೂಜಿ ಹೇಳಿದರು.
ಉಮಾಶಂಕರ ನಗರದ ವಿಶ್ವವಿಭು ಧ್ಯಾನಪೀಠದಲ್ಲಿ ಗುರುಪೂಣರ್ಿಮೆ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಸಮಸ್ತ ಸದ್ಗುರುಗಳಿಗೆ ಗುರುವಂದನೆ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದ ಅವರು, ಶ್ರೇಷ್ಠ ಗುರುಗಳಲ್ಲಿ ಒಬ್ಬರಾದ ವೇದವ್ಯಾಸ ಮಹಷರ್ಿಗಳ ಜನ್ಮದಿನದ ಅಂಗವಾಗಿಯೂ ಈ ಹಬ್ಬವನ್ನು ಆಚರಿಸುತ್ತಾರೆ ಎಂದರು.
ವೇದವ್ಯಾಸ ಮಹಷರ್ಿಗಳು ಈ ದಿನ ಹುಟ್ಟಿದ್ದಲ್ಲದೇ ಆಷಾಢ ಶುಕ್ಲ ಪಕ್ಷದಲ್ಲೇ ಬ್ರಹ್ಮಸೂತ್ರಗಳ ರಚನೆ ಪ್ರಾರಂಭಿಸಿದರು.
ಈ ದಿನ ಶುಕ್ಲ ಪಕ್ಷ ಕೊನೆಗೊಳ್ಳುತ್ತದೆ. ಇದರ ಸ್ಮರಣಾರ್ಥವಾಗಿ ಈ ದಿನದಂದು ಬ್ರಹ್ಮಸೂತ್ರಗಳ ಪಠಣ ಮಾಡಲಾಗುತ್ತದೆ. ವೇದವ್ಯಾಸರನ್ನು ಪರಮ ಗುರುಗಳೆಂದು ಗೌರವಿಸಲಾಗುತ್ತದೆ ಎಂದರು.
ಗುರುವು ಕಲ್ಯಾಣ ಸ್ವರೂಪ, ಪರಮಾತ್ಮ ತತ್ವವು ಸರ್ವವ್ಯಾಪಿ, ಸೂಕ್ಷ್ಮ, ಆಕಾಶದಂತೆ ಶೂನ್ಯ, ಅಜನ್ಮ, ಅನಂತವಾಗಿರುತ್ತದೆ. ಆದ್ದರಿಂದ ಆ ಪರಮಾತ್ಮ, ಪ್ರತ್ಯಕ್ಷ ಗುರು ರೂಪದಿಂದ ಪ್ರಕಟವಾಗುತ್ತಾನೆ. ಅನೇಕ ಮಹತ್ವಪೂರ್ಣವಾದ ವಿದ್ಯೆಗಳು ಗುರುವಿನ ಮಾಧ್ಯಮದಿಂದಲೇ ಪ್ರಾಪ್ತವಾಗಿರುತ್ತವೆ. ಸಾಧನೆಯ ಸಿದ್ಧಿಯು ಗುರುತತ್ವದ ಮೇಲೆ ಅವಲಂಭಿಸಿರುತ್ತವೆ ಎಂದರು.
ಲಕ್ಷ್ಮೀದೇವಿ ಅಮ್ಮನವರು, ವಿಶ್ವನಾಥ ಕುಂಬಳೂರು, ವೆಂಕಟೇಶ ಎಸ್ ಸೇರಿದಂತೆ ಮತ್ತಿತರರು ಇದ್ದರು. ನಂತರ ವಿಶ್ವರೂಪ ಲಲಿತ ಕಲಾನಿಕೇತನ ವಿದ್ಯಾಥರ್ಿಗಳಿಂದ ಸಂಗೀತ ಕಾರ್ಯಕ್ರಮ ಜರುಗಿದವು