ಬೈಲಹೊಂಗಲ: ದೇವರಾಜ ಅರಸುರವರ ಜನ್ಮ ದಿನಾಚರಣೆ

ಲೋಕದರ್ಶನ ವರದಿ

ಬೈಲಹೊಂಗಲ 20:  ಹಿಂದುಳಿದ ವರ್ಗಗಳ ಅಭಿವೃದ್ದಿಗಾಗಿ ಅನೇಕ ರೀತಿಯ ಯೋಜನೆಗಳನ್ನು ಹಾಕಿಕೊಂಡು ಸಮಾಜದಲ್ಲಿ ಮೇಲು-ಕೀಳು ಎಂಬ ಭಾವನೆ ತಾಳದೆ ಎಲ್ಲರೂ ಒಂದು ಎಂಬ ಪರಿಕಲ್ಪನೆ ಮೂಡಲು ಅವಿರತವಾಗಿ ಶ್ರಮಿಸಿದ ಕೀತರ್ಿ ದಿ. ಡಿ.ದೇವರಾಜ ಅರಸುರವರಿಗೆ ಸಲ್ಲುತ್ತದೆ ಎಂದು ಶಾಸಕ ಮಹಾಂತೇಶ ಕೌಜಲಗಿ ಹೇಳಿದರು.

        ಅವರು ತಾಲೂಕಾ ಆಡಳಿತ, ತಾಪಂ.ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಇವರುಗಳ ಸಂಯುಕ್ತ ಆಶ್ರಯದಲ್ಲಿ ತಹಸೀಲ್ದಾರ ಸಭಾಭವನದಲ್ಲಿ ಮಂಗಳವಾರ ನಡೆದ ದಿ. ಡಿ.ದೇವರಾಜ ಅರಸುರವರ 104 ನೇ ಜನ್ಮ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ,  ಡಿ.ದೇವರಾಜ ಅರಸುರವರು  ರಾಜ್ಯದ ಮುಖ್ಯಮಂತ್ರಿಯಂಥ ಉನ್ನತ ಹುದ್ದೆಯನ್ನು ಹೊಂದಿದ್ದರೂ ಕೂಡ ಸರಳ ರೀತಿಯಲ್ಲಿ ಜೀವನ ಸಾಗಿಸಿದ್ದಾರೆ. ಎಲ್ಲಾ ಮುಖ್ಯಮಂತ್ರಿಗಳಿಗೆ ಮಾದರಿಯಾಗಿದ್ದಾರೆ.ಇಂತಹ ಮಹಾನ ವ್ಯಕ್ತಿಗಳ ತತ್ವ ಹಾಗೂ ಸಿದ್ದಾಂತಗಳನ್ನು ವಿದ್ಯಾಥರ್ಿಗಳು ತಮ್ಮ ಜೀವನದಲ್ಲಿ ಆಳವಡಿಸಿಕೊಂಡು ಉತ್ತಮ ಪ್ರಜೆಗಳಾಗಬೇಕು ಎಂದರು.

      ತಹಸೀಲ್ದಾರ ಡಾ.ದೊಡ್ಡಪ್ಪ ಹೂಗಾರ ಅಧ್ಯಕ್ಷತೆ ವಹಿಸಿ ಮಾತನಾಡಿ, ಡಿ.ದೇವರಾಜ ಅರಸು ಅವರು ಹಿಂದುಳಿದ ವರ್ಗದ ಮಕ್ಕಳ ಶಿಕ್ಷಣಕ್ಕಾಗಿ ವಸತಿ ಶಾಲೆ ಹಾಗೂ ವಸತಿ ನಿಲಯಗಳನ್ನು ಸ್ಥಾಪಿಸಿ ಅವರ ಶೈಕ್ಷಣಿಕ ಅಭಿವೃದ್ದಿಗೆ ಪ್ರೋತ್ಸಾಹ ನೀಡಿ ಹಿಂದುಳಿದ ವರ್ಗಗಳ ಹರಿಕಾರರಾಗಿದ್ದಾರೆ ಎಂದರು.

      ಬಸವೇಶ್ವರ ಪಿಯು ಕಾಲೇಜಿನ ಪ್ರಾಂಶುಪಾಲೆ ಸವಿತಾ ರೊಟ್ಟಿ ಉಪನ್ಯಾಸ ನೀಡಿದರು.

     ವೇದಿಕೆ ಮೇಲೆ  ತಾಪಂ.ಅಧ್ಯಕ್ಷೆ ನೀಲವ್ವ ಫಕ್ಕೀರಣ್ಣವರ, ಉಪಾಧ್ಯಕ್ಷ ಮಲ್ಲನಾಯ್ಕ ಭಾಂವಿ, ಎಪಿಎಂಸಿ ಅಧ್ಯಕ್ಷ ಭರಮಪ್ಪ ಸತ್ಯನ್ನವರ, ತಾಪಂ.ಸಹಾಯಕ ನಿದರ್ೇಶಕ ಸುಭಾಷ ಸಂಪಗಾಂವಿ, ಪಿಎಸೈ ಎಂ.ಎಸ್.ಹೂಗಾರ, ಜಿಪಂ.ಸದಸ್ಯರಾದ ರೋಹಿಣಿ ಬಾಬಾಸಾಹೇಬ ಪಾಟೀಲ,ಅನಿಲ ಮೇಕಲಮಡರ್ಿ, ಸಮಾಜ ಕಲ್ಯಾಣ ಇಲಾಕೆ ಅಧಿಕಾರಿ ಮಹೇಶ ಉಣ್ಣಿ, ಪುರಸಭೆ ಮುಖ್ಯಾಧಿಕಾರಿ ಶಿವಪ್ಪ ಅಂಬಿಗೇರ, ಶಿಶು ಅಭಿವೃದ್ದಿ ಯೋಜನಾಧಿಕಾರಿ ಮಹೇಶ ಸುಖಸಾರೆ, ಅಜರ್ುನ ರಾಯಬಾಗ, ರುದ್ರಪ್ಪ ನಿಂಗಣ್ಣವರ, ಎಮ್.ಕೆ.ಮುರಗೋಡ ಇದ್ದರು.

   ಸಮಾರಂಭದಲ್ಲಿ ಆರ್.ಎಂ.ಬಾನಿ, ಎಮ್.ಪಿ.ನಾಯಕ, ಪಿ.ಡಿ.ಬೋಳೆತ್ತಿನ, ಆರ್.ವಾಯ್.ಪೂಜೇರಿ, ಬಿ.ಪಿ.ಹಜೇರಿ, ಎಮ್.ವಾಯ್.ಕರಿಸಿರಿ, ಜಿ.ಬಿ.ಮುದಕನಗೌಡರ, ಎಮ್.ಡಿ.ಕಟ್ಟಿ, ಅಶೋಕ ಸವದತ್ತಿ ಸೇರಿದಂತೆ ತಾಲೂಕಾ ಮಟ್ಟದ ವಿವಿಧ ಇಲಾಖೆಯ ಅಧಿಕಾರಿಗಳು, ವಿದ್ಯಾಥರ್ಿಗಳು ಇದ್ದರು.

   ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವಿಸ್ತರಣಾಧಿಕಾರಿ ಎಸ್.ಆರ್.ಮರಿಗೌಡರ ಸ್ವಾಗತಿಸಿದರು. ಎಸ್.ವಿ.ಗೆಜಪತಿ ನಿರೂಪಿಸಿ, ವಂದಿಸಿದರು.