ಪಂ. ಚಂದ್ರಶೇಖರ ಪುರಾಣಿಕಮಠ ಗುರುವರ್ಯರ ಜನ್ಮದಿನೋತ್ಸವ
ಧಾರವಾಡ 30: ಸಾಧನಕೇರಿಯ ‘ಗುರುಕೃಪಾ’ ನಿವಾಸದಲ್ಲಿ ದಿ. 28 ರವಿವಾರದಂದು ಹಮ್ಮಿಕೊಂಡಿದ್ದ ಸಜ್ಜನಶೀಲ ಖ್ಯಾತ ಹಿಂದುಸ್ತಾನೀ ಗಾಯಕ, ಶಿಷ್ಯವತ್ಸಲ ಪಂ. ಚಂದ್ರಶೇಖರ ಪುರಾಣಿಕಮಠ ಗುರುವರ‌್ಯರ 99ನೇ ಜನ್ಮದಿನೋತ್ಸವವು ನೆಚ್ಚಿನ ಶಿಷ್ಯವೃಂದ ಮತ್ತು ಅಭಿಮಾನೀ ಬಳಗದಿಂದ ತುಂಬಿದ ಸಭಾಗೃಹದಲ್ಲಿ ಯಶಸ್ವಿ ಯಾಗಿ ಜರುಗಿತು.
ಈ ಸಂದರ್ಭದಲ್ಲಿ ಪರಮಪೂಜ್ಯ ಪುಟ್ಟರಾಜ ಗವಾಯಿಗಳ ಶಿಷ್ಯ ಖ್ಯಾತ ತಬಲಾವಾದಕ ಗದುಗಿನ ಪಂ. ಶರಣಕುಮಾರ ಗುತ್ತರಿಗಿ ಇವರನ್ನು ಶಾಲು, ಹಾರ, ಫಲ, ಪುಷ್ಪ ಹಾಗೂ ಸ್ಮರಣಿಕೆಯೊಂದಿಗೆ ಆತ್ಮೀಯವಾಗಿ ಸನ್ಮಾನಿಸಲಾಯಿತು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ನಿವೃತ್ತ ಪ್ರಾಧ್ಯಾಪಕ, ಚಿಂತಕ ಎಮ್.ವೈ. ಸಾವಂತರು ಮಾತನಾಡಿ ಸಾಹಿತ್ಯ ಸಂಗೀತಗಳ ತೊಟ್ಟಿಲೆಂದೇ ಹೆಸರಾದ ಧಾರವಾಡದಲ್ಲಿ ಸಂಗೀತ ಸಾಧಕರ ದೊಡ್ಡ ಪಟ್ಟಿಯೇ ಸಿಗುತ್ತದೆ. ಅಂಥ ಸಾಧಕರಲ್ಲಿ ದಿ. ಚಂದ್ರಶೇಖರ ಪುರಾಣಿಕಮಠ ಒಬ್ಬರಾಗಿದ್ದು ಅತಿ ದೊಡ್ಡ ಸಂಖ್ಯೆಯ ಶಿಷ್ಯ ಬಳಗವೇ ಅವರ ಆಸ್ತಿಯಾಗಿದೆ. ಸಂಗೀತದ ಕಲಿಯುವಿಕೆಯಿಂದ ವ್ಯಕ್ತಿತ್ವ ವಿಕಸನವಾಗುತ್ತದೆ. ಇದು ಇಂದಿನ ಅತಿ ವೇಗದ ದಿನಮಾನಕ್ಕೆ ಅತ್ಯವಶ್ಯವಾದ ಮನ:ಶಾಂತಿಯ ಮೂಲ ಸ್ತ್ರೋತವೂ ಹೌದು, ಹಾಗೆೆಯೇ ನೀವಿಂದು ಈ ಕ್ಷೇತ್ರದ ಸಾಧಕರೊಬ್ಬರನ್ನು ಗುರುತಿಸಿ ಗೌರವಿಸಿದ್ದು ಶ್ಲಾಘನೀಯವಾಗಿದೆ ಎ ಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಧಾರವಾಡ ಕೃಷಿವಿಶ್ವವಿದ್ಯಾಲಯದ ನಿವೃತ್ತ ಕುಲಪತಿ ಡಾಽಽ ಜೆ.ಎಚ್. ಕುಲಕರ್ಣಿಯವರು ಮಾತನಾಡಿ ಧಾರವಾಡವು ಅತಿದೊಡ್ಡ ಶೈಕ್ಷಣಿಕ ಜಾಲವನ್ನೇ ಪಡೆದಿದ್ದು ಅದರ ಹೃದಯ ಭಾಗದಲ್ಲಿರುವ ಸಾಧನಕೇರಿ ಎಂದರೆ ಅನೇಕ ಹಿರಿಯ ಸಾಧಕರ ತವರಾಗಿನಿಂತಿದೆ. ಇಲ್ಲಿಯ ಖ್ಯಾತ ಸಂಗೀತ ಸಾಧಕ ಪಂ. ಚಂದ್ರಶೇಖರ ಪುರಾಣಿಕಮಠರು ತುಂಬಿದ ಕೊಡದಂತಿದ್ದು , ತಮ್ಮ ಅಪಾರ ಶಿಷ್ಯವೃಂದಕ್ಕೆ ಸಂಗೀತವನ್ನು ಧಾರಾಳವಾಗಿ ಉಣಿಸಿದ್ದಾರೆ. ಅದನ್ನು ಮುಂದುವರಿಸಿಕೊಂಡು ಹೋಗಿರಿ ಎಂದು ಹಾರೈಸಿದರು.
ಪುರಾಣಿಕಮಠ ಗುರುವರ‌್ಯರ ಅನೇಕ ಶಿಷ್ಯರಿಂದ ಜರುಗಿದ ಸಂಗೀತ ಸೇವೆಯ ನಂತರ ವಿದುಷಿ ಸುಮಿತ್ರಾ ಕಾಡದೇವರಮಠ ರಾಗ ಭೂಪ ಮತ್ತು ಠುಮ್ರಿ ಪ್ರಸ್ತುತ ಪಡಿಸಿದರು. ಪಂ. ಅಲ್ಲಮಪ್ರಭು ಕಡಕೋಳ ತಬಲಾದಲ್ಲಿ ಮತ್ತು ಹಾರ್ಮೋನಿಯಂದಲ್ಲಿ ಬಸು ಹಿರೇಮಠ ಸಾಥ ನೀಡಿದರು.
ಸನ್ಮಾನಿತರಾದ ಪಂ. ಶರಣಕುಮಾರ ಗುತ್ತರಿಗಿ ತಬಲಾ ಸೋಲೋ ತೀನತಾಲದಲ್ಲಿ ಅದ್ಭುತವಾಗಿ ನುಡಿಸಿ ರಂಜಿಸಿದರು.
ಕಾರ್ಯಕ್ರಮದ ಪ್ರಾರಂಭದಲ್ಲಿ ಇತ್ತೀಚೆಗೆ ನಿಧನರಾದ ಖ್ಯಾತ ಹಿಂದುಸ್ತಾನೀ ಗಾಯಕ ಡಾ. ಅಶೋಕ ಹುಗ್ಗಣ್ಣವರ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಗುರುಕೃಪಾ ಸಂಗೀತ ಶಾಲೆಯ ಶಿಕ್ಷಕಿ ಪ್ರತಿಭಾ ಹೆಗಡೆ ಪ್ರಾರ್ಥಿಸಿದರು. ಸ್ಮೃತಿ ಸಭಾದ ಸ್ಥಾಯೀ ಸಮಿತಿ ಅಧ್ಯಕ್ಷ ಎನ್.ಟಿ. ಪರಾಂಜಪೆ ಎಲ್ಲರನ್ನೂ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ. ಶಾರದಾ ಭಟ್ಟ ಅತಿಥಿಗಳನ್ನು ಪರಿಚಯಿಸಿದರು. ಅಶೋಕ ಜೋಶಿ ಕಾರ್ಯಕ್ರಮ ನಿರೂಪಿಸಿದರು. ನಾಗರತ್ನಾ ಪುರಾಣಿಕಮಠ ವಂದಿಸಿದರು. ಸ್ಮೃತಿ ಸಭಾದ ಅಧ್ಯಕ್ಷ ಕುಮಾರಸ್ವಾಮಿ ಪುರಾಣಿಕಮಠ ವೇದಿಕೆಯಲ್ಲಿದ್ದರು.
ಗಣ್ಯರಾದ ಮಂಜುನಾಥ ಹೆಗಡೆ, ಡಾ. ಅರ್ಜುನ ವಠಾರ, ಬಿ.ಎಸ್. ಕೆಂಡದಮಠ, ಡಾ. ಎಸ್.ಎನ್. ಹೆಗಡೆ, ಜಿ.ಎಸ್.ಹಿರೇಮಠ, ಪ್ರಭುಲಿಂಗಯ್ಯ ಹಿರೇಮಠ, ಶಿವಯೋಗಿ ಪುರಾಣಿಕಮಠ, ಎಮ್.ಬಿ. ಸದಾನಂದ, ಡಿ.ವಿ. ಕುಲಕರ್ಣಿ, ಆರ್.ಎಮ್. ಹೊಸಮನಿ, ಎಮ್.ಎ. ಕಾಮತೆೆ, ಬಿ.ಜಿ. ಗುಂಡೂರ, ವಿದುಷಿ ರಾಧಾ ದೇಸಾಯಿ, ಜ್ಯೋತಿ ಹಾವನೂರ, ಅನಿತಾ ಗಾಳಿ, ದಾಕ್ಷಾಯಿಣಿ ಹಿರೇಮಠ, ಸೀಮಾ ಪರಾಂಜಪೆ, ಭಾರತಿ ಗಜಾನನ ಹೆಗಡೆ ಮುಂತಾದವರು ಉಪಸ್ಥಿತರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 