ಲೋಕದರ್ಶನವರದಿ
ಧಾರವಾಡ 10:ನಗರದ ಅಂಜುಮನ್ ಏ ಇಸ್ಲಾಂ ಸಂಸ್ಥೆಯಿಂದ (ಇದ ಮಿಲಾದುನ್ನಬಿ) ಪ್ರವಾದಿ ಮುಹಮ್ಮದ ಪೈಗಂಬರ ಅವರ ಜನ್ಮ ದಿನದ ನಿಮಿತ್ತ ಪ್ರಾರಂಭಗೂಂಡ ಮೆರವಣಿಗೆಯಲ್ಲಿ ಡಿ ಜೆ ರಹಿತ, ದೇವರ ಘೋಷಣೆ ಯೂಂದಿಗೆ ಎಲ್ಲರ ಮನ ಮೆಚ್ಚುವಂತಿತ್ತು, ಮಾಜಿ ಸಚಿವ ವಿನಯ ಕುಲಕಣರ್ಿಯವರಿಂದ ಎಲ್ಲ ಮುಸ್ಲೀಮ್ ಬಾಂಧವರಿಗೆ ಶರಬತ್ ವಿತರಣೆ ಕಾರ್ಯಕ್ರಮ ವಿವೇಕಾನಂದ ವ್ರತ್ತದ ಬಳಿ ಆಯೂಜಿಸಲಾಗಿತ್ತು. ಅದೇ ರೀತಿ ಮರವಣಿಗೆ ಆಗಮಿಸುವ ಮಾರ್ಗದಲ್ಲಿ ಐಸ್ಕ್ರೀಮ್ ,ಹಣ್ಣಿನ ಪ್ರೂಟ ಸಲಾಡ, ತಂಪು ಪಾನೀಯ ವ್ಯವಸ್ಥೆಯನ್ನ ಸಮಾಜ ಬಾಂಧವರು ಮಾಡಿದ್ದರು. ಎ ಎ ಅಗಸಿಮನಿ, ಡಾ ಎನ್ ಬಿ ನಲತವಾಡ, ಪ್ರೂ ಎ ಎಮ್ ಮುಲ್ಲಾ, ಎಪ್ ಜೆ ಅತ್ತಾರ,ಆಯ್ ಎಮ್ ಮುಲ್ಲಾ,ಎ ಎ ಹರಿಹರ,ಪ್ರೂ ಅಬ್ದುಲ್ ರಾಷಿದ ಚಾಕುಲಿ, ಇಕಬಾಲ ಜಮಾದಾರ,ಡಾ ಎಮ್ ಎನ್ ಮೀರಾನಾಯಕ, ಎಮ್ ಎಲ್ ಕಿಲ್ಲೆದಾರ ,ಜೆ ಎ ಜಾಗೀರದಾರ ,ಮಾಜಿ ಅದ್ಯಕ್ಷ ಇಸ್ಮಾಯಿಲ್ ತಮಾಟಗಾರ,ಐ ಎಮ್ ಜವಳಿ, ನಜೇರ್ ಹುಸೇನ ಮನಿಯಾರ, ರಫೀಕ ಅಹ್ಮದ ಶಿರಹಟ್ಟಿ, ಎಸ್ಎಸ್ ಸೈಯದ,ಎಚ್ ಡಿ ಶೇಖ, ಜಿ ಡಿ ಕವಲಗೇರಿ ಮುಂತಾದವರು ಮೆರವಣಿಗೆಯಲ್ಲಿ ಉಪಸ್ಥಿತರಿದ್ದರು.