ರಾಯಬಾಗ 05: ತಾಲ್ಲೂಕಿನ ಹಿಡಕಲ್ ಗ್ರಾಮದ ಶ್ರೀ ಜಡಿ ಸಿದ್ದೇಶ್ವರ ನಿಲಯದ ಆವರಣದಲ್ಲಿ ಗಾನ ಗಂಗೆ ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಗಂಗೂಬಾಯಿ ಹಾನಗಲ್ ರವರ ಜನ್ಮದಿನಾಚರಣೆ ಕಾರ್ಯಕ್ರಮ ಆಚರಿಸಲಾಯಿತು.
ಗಾನವಿದುಷಿ ಗಂಗೂಬಾಯಿ ಹಾನಗಲ್ ರವರ ಭಾವಚಿತ್ರಕ್ಕೆ ಗೌರವ್ವ ಒಂಟಗೋಡಿ ಪೂಜೆ ಸಲ್ಲಿಸಿದರು ಸಮಾರಂಭದ ಮುಖ್ಯ ಅತಿಥಿಗಳಾಗಿ ಅಖಿಲ ಕರ್ನಾಟಕ ಸಾಂಸ್ಕೃತಿಕ ಪರಿಷತ್ತು ತಾಲೂಕು ಘಟಕ ರಾಯಬಾಗದ ಅಧ್ಯಕ್ಷರಾದ ಸಾಹಿತಿ ಟಿ ಎಸ್ ವಂಟಗೂಡಿ ಮಾತನಾಡಿ ಸಾಹಿತ್ಯ ಮತ್ತು ಸಂಗೀತ ಎಂದರೆ ಸರಸ್ವತಿ ದೇವಿಯ ಎರಡು ನಯನಗಳಿದ್ದಂತೆ ರಸಾನುಭವದ ಸುಂದರವಾದ ಅಭಿವ್ಯಕ್ತಿಯೇ ಸಾಹಿತ್ಯ ನೊಂದ ಮನಸ್ಸಿಗೆ ಆನಂದ ನೀಡುವ ದಿವ್ಯ ಓಷದವೇ ಸಂಗೀತ ಸಂಗೀತಕ್ಕೆ ತಲೆದೂಗಲಾರದ ಮನುಷ್ಯರೇ ಇಲ್ಲ ಗಂಗೂಬಾಯಿ ಅವರ ಹಾಡುಗಾರಿಕೆಯನ್ನು ಆ ಕಾಲದ ಎಲ್ಲಾ ಉದ್ಧಾಮ ಸಂಗೀತಕಾರರಾದ ಬಡೇ ಗುಲಾಂ ಅಲಿ ಖಾನ್ ಉಸ್ತಾದ್ ಫಯಾಜ್ ಖಾನ್ ಪಂಡಿತ ಶಹನಾಯಿ ಮಾಂತ್ರಿಕ ಬಿಸ್ಮಿಲ್ಲಾ ಖಾನ್ ಮೊದಲಾದವರು ಮೆಚ್ಚಿಕೊಂಡಿದ್ದರು. ಗಾನ ಮುದ್ರಿಕೆ ಹಾಗೂ ಆಕಾಶವಾಣಿ ಕಾರ್ಯಕ್ರಮಗಳಲ್ಲದೆ ಗಂಗೂಬಾಯಿ ಯವರು ಮುಂಬೈಯಲ್ಲಿಯ ಅನೇಕ ಸಂಗೀತ ಕಚೇರಿಗಳಲ್ಲಿ ಭಾಗವಹಿಸಿ ಸಂಗೀತ ಕ್ಷೇತ್ರವನ್ನು ಶ್ರೀಮಂತ ಗೊಳಿಸಿದ ಶ್ರೇಯಸ್ಸು ಗಾನ ಗಂಗೆ ಗಂಗೂಬಾಯಿ ಹಾನಗಲ್ ಅವರಿಗೆ ಸಲ್ಲುತ್ತದೆ ಗಂಗೂಬಾಯಿ ಹಾನಗಲ್ ಅವರ ಸಂಗೀತಕ್ಕೆ ಲೋಕ ಗೆಲ್ಲುವ ಶಕ್ತಿ ಇದೆ ಎಂದು ಅಖಿಲ ಕರ್ನಾಟಕ ಸಂಸ್ಕೃತಿಕ ಪರಿಷತ್ತು ತಾಲೂಕು ಘಟಕ ರಾಯಬಾಗದ ಅಧ್ಯಕ್ಷ ಸಾಹಿತಿ ಟಿಎಸ್ ವಂಟಗೂಡಿ ಅಭಿಮತ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಸಮಾರಂಭದ ಅಧ್ಯಕ್ಷತೆಯನ್ನು ಜಡಪ್ಪ ಒಂಟಗುಡಿ , ದೀಪಾ ಒಂಟಗುಡಿ , ಸೀಮಾ ಕಾತ್ರಾಳೆ, ಮೀನಾಕ್ಷಿ ಒಂಟಗೂಡಿ, ಕಲಾವತಿ ಪೂಜಾರಿ ಉಪಸ್ಥಿತರಿದ್ದರು ವಿದ್ಯಾಶ್ರೀ ವಡಿಯರ ಸ್ವಾಗತಿಸಿ ನಿರೂಪಿಸಿದರು ಲಕ್ಷ್ಮಿ ಪೂಜಾರಿ ವಂದಿಸಿದರು.