ಲೋಕದರ್ಶನ ವರದಿ
ಹಾವೇರಿ 23: ಇಲ್ಲಿನ ಇಜಾರ ಲಕಮಾಪುರ ವ್ಯಾಪ್ತಿಯಲ್ಲಿನ ಜ್ಞಾನ ಪ್ರಜ್ಞಾ ಶಿಕ್ಷಣ ಸಂಸ್ಥೆಯ ಜ್ಞಾನ ಜ್ಯೋತಿ ಅಂಧ ಮಕ್ಕಳ ಶಾಲೆಯಲ್ಲಿ ಲೋಕಸಭೆಯ ವಿರೋಧ ಪಕ್ಷದ ನಾಯಕರಾದ ಮಲ್ಲಿಕಾಜರ್ುನ ಖಗರ್ೆಯವರ 77 ನೇ ಹಾಗೂ ಸುಭಾಸ ನಾಟೇಕರ ಅವರ 47 ನೇ ಹುಟ್ಟುಹಬ್ಬವನ್ನು ಕನರ್ಾಟಕ ಪ್ರದೇಶ ಚಲವಾದಿ ಮತ್ತು ಚನ್ನಯ್ಯ ಮಹಾಸಂಸ್ಥಾನದ ವತಿಯಿಂದ ಬುದ್ಧಿಮಾಂದ್ಯ ಮಕ್ಕಳಿಂದ ಕೇಕ್ ಕತ್ತರಿಸುವ ಮೂಲಕ ಆಚರಿಸಲಾಯಿತು.
ಮಹಾಸಂಸ್ಥಾನದ ಅಧ್ಯಕ್ಷರಾದ ನಿಂಗಪ್ಪ ಗಾಳೆಮ್ಮನವರ ಮಾತನಾಡಿ ಸಮಾಜದಲ್ಲಿ ಉತ್ತಮ ಕೆಲಸಗಳ ಮೂಲಕ ಈ ನಮ್ಮ ನಾಯಕರುಗಳಾದ ಮಲ್ಲಿಕಾಜರ್ುನ ಖಗರ್ೆ ಹಾಗೂ ಸುಭಾಸ ನಾಟೇಕರ ಅವರು ಎಲ್ಲ ರಂಗದಲ್ಲಿ ತಮ್ಮ ಪ್ರಮಾಣಿಕತೆ ಹಾಗೂ ನಿಷ್ಠೆಯಿಂದ ದೊಡ್ಡ ಮಟ್ಟದಲ್ಲಿ ಬೆಳೆದಿದ್ದಾರೆ.
ಇವರು ನೊಂದವರ ಧ್ವನಿಯಾಗಿ, ಬಡವರ ಏಳಿಗೆಗೆ ಹಾಗೂ ತುಳಿತಕ್ಕೆ ಒಳಗಾದವರಿಗೆ ನ್ಯಾಯ ಒದಗಿಸಲು ತುಂಬಾ ಶ್ರಮವಹಿಸಿದ್ದಾರೆ. ಹುಟ್ಟು ಹಬ್ಬವನ್ನು ಮಹಾಸಂಸ್ಥಾನದ ವತಿಯಿಂದ ವಿಕಲಚೇತನ ಮಕ್ಕಳ ಹತ್ತಿರ ಆಚರಣೆ ಮಾಡುತ್ತಿರುವುದು ಸಂತೋಷಕರವಾಗಿದೆ. ಇನ್ನು ಸಂಸ್ಥಾನ ನೆನೆಪಿನಲ್ಲಿ ಅನೇಕ ಕಾರ್ಯಕ್ರಮ ಮಾಡಬೇಕು ಎನ್ನುವ ಆಶಯ ಹೊಂದಿದೆ. ನಮ್ಮ ನಾಯಕರು ಇನ್ನು ಅನೇಕ ಉತ್ತಮ ಸಮಾಜಿಮುಖಿ ಕೆಲಸ ಮಾಡಲು ಆರೋಗ್ಯ ಆಯುಷ್ಯ ವೃದ್ಧಿಯಾಗಲಿ ಎಂದು ಮಕ್ಕಳೊಂದಿಗೆ ಎನ್ಎನ್ ಗಾಳೆಮ್ಮನವರ ಆರೈಸಿದರು. ಈ ಶಾಲೆಯ ಪ್ರಧಾನ ಗುರುಗಳಾದ ವಸಂತ ಮಾಗ್ಲೇನವರ.ಶಿಕ್ಷಕರಾದ ಮಂಜುನಾಥ ಕಮ್ಮಾರ. ವಿವಿಧ ಸಂಘಟನೆ ಮುಖಂಡರುಗಳಾದ ಎಂ ಎಚ್ ಕರ್ಜಗಿ.ಎಂ ಡಿ ಕಡಕೋಳ. ಫಕ್ಕಿರೇಶ ಕಾಳಿ.ಸುಹಾಸ ಎಸ್ .ಆಸ್ಪಕ್ ನದಾಫ್.ಶಾಲೆಯ ಗುಡ್ಡಪ್ಪ ಹರಕೇರಿ.ಮಾದೇವಿ ಸೇರಿದಂತೆ ಶಾಲೆಯ ಮಕ್ಕಳು ಪಾಲ್ಗೊಂಡಿದ್ದರು.