ಶೇಡಬಾಳ ಗ್ರಾಮದ ಸುಪುತ್ರ ರಾಷ್ಟ್ರ ಸಂತ ವಿದ್ಯಾನಂದ ಮುನಿ ಮಹರಾಜರ ಜನ್ಮ ಶತಾಬ್ದಿ ಸಮಾರಂಭ
ಕಾಗವಾಡ 12: ಶೇಡಬಾಳ ಪಟ್ಟಣದಲ್ಲಿ ಜನಿಸಿದ ಬಾಲಕ ದೇಶದ ಹೊಸ ದೆಹಲಿಯಿಂದ ಸಂಪೂರ್ಣ ವಿಶ್ವದ ರಾಷ್ಟ್ರಗಳ ನಾಯಕರು ಅವರ ಮುಂದೆ ನತಮಸ್ತಕರಾಗಿ ತಮ್ಮ ಸಮಸ್ಯೆಗಳಿಗೆ ಪರಿಹಾರ ಕೊಂಡುಕೊಂಡಿದ್ದ ಅಪರೂಪದ ರಾಷ್ಟ್ರ ಸಂತ ವಿದ್ಯಾನಂದ ಮುನಿ ಮಹರಾಜರು ಉತ್ತರ ಕರ್ನಾಟಕದವರು ಅಲ್ಲದೇ ಶೇಡಬಾಳ ಗ್ರಾಮದವರು ಈ ಖ್ಯಾತಿ ಸಂಪೂರ್ಣ ವಿಶ್ವ ಧರ್ಮಕ್ಕೆ ಸಲ್ಲುತ್ತಿದೆ ಎಂದು ಹೊಂಬುಜ ಜೈನ ಮಠದ ಪೀಠಾಧಿಪತಿ ಡಾ.ದೇವೆಂದ್ರ ಕೀರ್ತಿ ಭಟ್ಟಾರಕರು ಹೇಳಿದರು.ರವಿವಾರದಂದು ಶೇಡಬಾಳ ಪಟ್ಟಣದ ವಿದ್ಯಾನಂದ ಮುನಿರಾಜ ಕನ್ನಡ ಶಾಲಾ ಆವರಣದಲ್ಲಿ ಪ್ರಥಮಾಚಾರ್ಯ ಶಾಂತಿಸಾಗರ ಮಹರಾಜರ ಆಚಾರ್ಯ ಪದವಿ ಶತಮಾನೋತ್ಸವ ರಾಷ್ಟ್ರ ಸಂತ ವಿದ್ಯಾನಂದ ಮುನಿಮಹರಾಜರ ಜನ್ಮ ಶತಾಬ್ದಿ ವರ್ಷ ಹಾಗೂ ವಿಜಯಪೂರ ಜ್ಞಾನಯೋಗಾಶ್ರಮದ ಸಿದ್ದೇಶ್ವರ ಮಹಾಸ್ವಾಮೀಜಿ ಅವರ ಪುಣ್ಯ ಸ್ಮರಣೋತ್ಸವ ಈ ಸಂಯುಕ್ತ ಕಾರ್ಯಕ್ರಮ ಜರುಗಿತು.ಸಮಾರಂಭದ ಸಾನಿಧ್ಯ ವಹಿಸದ ಡಾ.ದೇವೆಂದ್ರ ಕೀರ್ತಿ ಭಟ್ಟಾರಕರು ಮುಂದು ವರೆದು ಮಾತನಾಡುವಾಗ ಮುನಿ ಧರ್ಮಕ್ಕೆ ಯಾವುದೇ ಸಮಸ್ಯೆ ಬಂದಲ್ಲಿ ವಿದ್ಯಾನಂದ ಮುನಿ ಮಹರಾಜರು ಅದನ್ನು ತಿಳಿಗೊಳಿಸುತ್ತಿದ್ದರು. ದೇಶದ ಆಗಿನ ಪ್ರಧಾನಿ ಇಂದಿರಾ ಗಾಂಧಿ ಇವರಿಗೆ ಕಾಂಗ್ರೆಸ್ ಪಕ್ಷ ಸಮಸ್ಯೆಯಲ್ಲಿ ಇದ್ದಾಗ ಹಸ್ತ ಚಿನ್ಹೆ ನೀಡಿ ಆಶೀರ್ವಾದ ನೀಡಿದ್ದರು.
ಜೈನ ಧರ್ಮದ ಪಂಚರಂಗಿ ಧ್ವಜ ಹಾಗೂ ಜೈನ ಸಮಾಜದ ಲಾಂಛನ ನೀಡಿದ ಕೊಡುಗೆ ಶ್ರೀಗಳಿಗೆ ಸಲ್ಲುತ್ತದೆ ಎಂದರು ಬೈಟ್ :ಶ್ರೀಶೈಲ ಜಗದ್ಗುರುಗಳಾದ ಡಾ.ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ ವಿದ್ಯಾನಂದ ಮುನಿಮಹರಾಜರು ಜೈನ ಸಮಾಜಕ್ಕೆ ಸೀಮಿತವಾಗದೆ ವಿಶ್ವಧರ್ಮದಕ್ಕೆ ಅಹಿಂಸಾ ತತ್ವಗಳನ್ನು ಸಾರಿ ಹೇಳಿದರು, ಅವರು ಮಹಾನ ಜ್ಞಾನಿಗಳು ವಿಜಯಪೂರ ಜ್ಞಾನ ಯೋಗಾಶ್ರಮದ ಸಿದ್ದೇಶ್ವರ ಮಹಾ ಸ್ವಾಮೀಜಿಗಳು ಹಾಗೂ ವಿದ್ಯಾನಂದ ಮುನಿ ಮಹರಾಜರು ರಾಷ್ಟ್ರಕ್ಕೆ 21ನೇ ಶತಮಾನದ ಮಹಾಸಂತರಾಗಿದ್ದು ಅವರ ಕಾಲಾವಧಿಯಲ್ಲಿ ನಾವೆಲ್ಲ ಬಾಳಿ ಬದುಕಿದ್ದು ಪುಣ್ಯವಂತರಾಗಿದ್ದೇವೆ ಎಂದರುಬೈಟ್ ಹಂಚಿನಾಳ ಮಠದ ಮಹೇಶಾನಂದ ಸ್ವಾಮೀಜಿ ಮಾತನಾಡಿ ಶೇಡಬಾಳದಲ್ಲಿ ಜನಿಸಿದ ವಿದ್ಯಾನಂದ ಮುನಿಮಹರಾಜರು ರಾಷ್ಟ್ರ ಸಂತರಾಗಿದ್ಧರು. ಅವರು ಸಮಾಜಕ್ಕೆ ನೀಡಿದ ಕೊಡುಗೆ ಅಪಾರವಿದೆ ಜೈನ ಹಾಗೂ ಜೈನೆತರ ಸಮಾಜದ ತಂದೆ ತಾಯಿಗಳು ಇಂತಹ ಪವಿತ್ರ ಗ್ರಾಮದಲ್ಲಿ ಇರುವ ತಮ್ಮ ಮಕ್ಕಳಿಗೆ ಸಂಸ್ಕಾರ ನೀಡಿ ದುಷ್ಟಚಟಗಳಿಂದ ದೂರ ಊಳಿಸಿರಿ ಈ ಭಾಗದಲ್ಲಿ ಇನ್ನೊಬ್ಬ ವಿದ್ಯಾನಂದ ಮುನಿ ಮಹರಾಜರು ಆಗುವಂತೆ ತಂದೆ ತಾಯಿಗಳು ಪ್ರೇರಣೆ ನೀಡಿ ಎಂದು ಹೇಳಿ ಈ ಶೇಡಬಾಳ ಪುಣ್ಯ ಭೂಮಿಯನ್ನ ಸಿದ್ದ ಕ್ಷೇತ್ರ ಎಂದು ಸ್ಮರಿಸಿದರು.ಬೈಟ್ ಸೊಂದಾ ಮಠದ ಭಟ್ಟಾಕಲಂಕ ಸ್ವಾಮೀಜಿ, ಕೊಲ್ಲಾಪೂರ ಜೈನ ಮಠದ ಲಕ್ಷ್ಮೀಸೇನ ಭಟ್ಟಾರಕರು ಶೇಡಬಾಳದ ಭಕ್ತಿ ಪೂರ್ವಕವಾಗಿ ಜರುಗಿದ ಈ ಸಮಾರಂಭವನ್ನು ಗಮನಿಸಿ ವಿದ್ಯಾನಂದ ಮುನಿ ಮಹರಾಜರು ಈ ಪಟ್ಟಣದಲ್ಲಿ ಜನಿಸಿದ್ದರಿಂದ ಇಲ್ಲಿಯ ಎಲ್ಲ ಜನರು ಪುಣ್ಯವಂತರು ಎಂದರು. ಪ್ರಾರಂಭದಲ್ಲಿ ವಿದ್ಯಾನಂದ ಮುನಿ ಮಹರಾಜರ ಕೀರ್ತಿ ಸ್ತಂಭಕ್ಕೆ ಪೂಜೆ ಸಲ್ಲಿಸಿ ಲೋಕಾರೆ್ಣ ಮಾಡಿದರು ಬಳಿಕ ವಿದ್ಯಾನಂದ ಮುನಿಮಹರಾಜರ ಸ್ಮರಣ ಸಂಚಿಕೆಯನ್ನು ಪೂಜ್ಯ ಶ್ರೀಗಳಿದ ಬಿಡುಗಡೆಗೊಂಡಿತು.ಪ್ರತಿಷ್ಟಾಚಾರ್ಯರಾದ ಕುಮಾರ ಅಲಗೌಡರ ಹಾಗೂ ಇನ್ನೂಳಿದ ಉಪಾಧ್ಯೆಯವರಿಂದ ಭಟ್ಟಾರಕ ಸ್ವಾಮೀಜಿಗಳ ಪಾದ ಪೂಜೆ ನೆರವೆರಿತು.
ವಿದ್ಯಾನಂದ ಮುನಿ ಮಹರಾಜರ ಪೂರ್ವಾಶ್ರಮದ ಮನೆಯನ್ನು ಹೊಸ ದೆಹಲಿಯ ಕುಂದ ಕುಂದು ಭಾರತಿ ಟ್ರಸ್ಟಿನವರು ಮುಂಬರುವ ದಿನಗಳಲ್ಲಿ ಸ್ಮಾರಕವಾಗಿ ನಿರ್ಮಿಸಲಿದ್ದೇವೆ ಎಂದು ಘೋಷಣೆ ಮಾಡಲಾಯಿತು.ಕಾರ್ಯಕ್ರಮದಲ್ಲಿ ಪಂಡಿತ ಬಾಹುಬಲಿ ಬೊಸಗೆ, ಪಂಡಿತ ರವೀಂದ್ರ ನರಸಾಯಿ ಹಿರಿಯರಾದ ಬಾಲ ಬ್ರಹ್ಮಚಾರಿಣಿ ಪದ್ಮಾವತಿ ಖೇಮಲಾಪೂರೆ, ಪಾಠಶಾಲೆಯ ಗುರುಮಾತೆಯರನ್ನ ಸತ್ಕರಿಸಿದರು. ವಿದ್ಯಾನಂದ ಮುನಿಮಹರಾಜರ ಬಗ್ಗೆ ಶಾಲೆಯಲ್ಲಿ ಓದುತ್ತಿರುವ ಸೃಷ್ಟಿ ಕುರಳೆ ಹಾಗೂ ತನುಶ್ರೀ ಲಾಟಕರ ಸಂಪೂರ್ಣ ಪರಿಚಯ ಮಾಡಿದರುಕಾರ್ಯಕ್ರಮ ಸಂಯೋಜಕ ಪ್ರಕಾಶ ನಾಂದ್ರೆ ಇವರನ್ನು ಮಹರಾಜರಿಂದ ಸತ್ಕರಿಸಲಾಯಿತು. ಕಾರ್ಯಕ್ರಮ ಸ್ವಾಗತವನ್ನ ಡಾ.ರಾಜೇಂದ್ರ ಸಾಂಗಾವೆ, ನಿರೂಪಣೆ ಹಾಗೂ ವಂದನಾರೆ್ಣ ಶೀತಲ ಮಾಲಗಾಂವೆ ಮಾಡಿದರು. ಕುಂದ ಕುಂದ ಭಾರತಿ ಟ್ರಸ್ಟ ದೆಹಲಿ ಅಧ್ಯಕ್ಷ ಸತೀಶ ಜೈನ, ಇನೊರ್ವ ಟ್ರಸ್ಟಿ ಅನಿಲ ಜೈನ, ಅನಿವಾಸಿ ಭಾರತಿ ಅನಿಲ ಜೈನ, ಕೇಂದ್ರ ಅಲ್ಪಸಂಖ್ಯಾತ ಆಯೋಗದ ಸದಸ್ಯ ಧನ್ಯಕುಮಾರ ಗುಂಡೆ ಸೆರಿದಂತೆ ಅನೇಕ ಶ್ರಾವಕ ಶ್ರಾವಕಿಯರು ಪಾಲ್ಗೊಂಡಿದ್ದರು. ಫೋಟೋ ಶಿರಸಿಕೆ: ಕಾರ್ಯಕ್ರಮವನ್ನು ದೀಪ ಬೆಳಗಿಸಿ ಚಾಲನೆ ನೀಡುತ್ತಿರುವ ಶ್ರೀಗಳು ಮತ್ತು ಗಣ್ಯರು