ಮಹಾರಾಷ್ಟ್ರದಲ್ಲಿ ಹಕ್ಕಿ ಜ್ವರ: ಜನರಲ್ಲಿ ಹೆಚ್ಚಿದ ಆತಂಕ

Bird flu in Maharashtra: panic among people

ಗಡಿಯಲ್ಲಿ ಚೆಕ್ ಪೋಸ್ಟ್‌ ನಿರ್ಮಾಣ* ಮಹಾರಾಷ್ಟ್ರದ ಮಾಂಸಾಹಾರಕ್ಕೆ ಬ್ರೇಕ್ * ಹಕ್ಕಿ ಜ್ವರ ಕಡಿವಾಣಕ್ಕೆ ಜನರ ಸಹಕಾರ ಅವಶ್ಯ 

ಸಂತೋಷ್ ಕುಮಾರ್ ಕಾಮತ್  

ಮಾಂಜರಿ: ಮಹಾರಾಷ್ಟ್ರ ರಾಜ್ಯದ ಲಾತೂರ ಜಿಲ್ಲೆಯ ಉದಯಗೀರನಲ್ಲಿ ಎಚ್‌-5 ಎನ್‌-1 ವೈರಸ್ ಕೋಳಿಗಳ ಮಾಂಸದಿಂದ ಮಾರಣಾಂತಿಕವಾಗಿರುವದರಿಂದ ಕೋಳಿ ಮಾಂಸದ ದರ ಪಾತಾಳಕ್ಕೆ ಕುಸಿದಿದೆ. ಈ ವೈರಸ್ ಕೋಳಿಗಳಿಂದ ಕೋಳಿಗೆ ಮತ್ತು ಮಾನವರಿಗೆ ತಗಲುವ ಎದುರಾಗಿರುವದರಿಂದ ಗಡಿ ಭಾಗದ ಜನರಲ್ಲಿ ಆತಂಕ ಮನೆ ಮಾಡಿದೆ. ಗಡಿಭಾಗದಲ್ಲಿ ಕಾಗೆ ಹಾಗೂ ಹಕ್ಕಿ ಜ್ವರ ಪತ್ತೆಯಾಗಿರುವದರಿಂದ ಇದೀಗ ಕೋಳಿ ಮಾಂಸ ಕೇಳುವವರು ಇಲ್ಲದಂತಾಗಿದೆ. ದರದಲ್ಲಿ ಕೂಡಾ ಸಾಕಷ್ಟು ಕುಸಿತ ಕಂಡಿದೆ. 

ಗಡಿಯಲ್ಲಿ ಆತಂಕ: ಜಿಲ್ಲೆಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ಕೋಳಿ ಸಾಕಾಣಿಕೆ ಮಾಡಿಕೊಂಡು ರೈತಾಪಿ ಜನರು ಇದನ್ನೆ ನೆಚ್ಚಿಕೊಂಡಿದ್ದಾರೆ. ಇದೀಗ ಕೋಳಿ ಮಾಂಸದ ದರ 240 ರೂಗಳಿಂದ ಇದೀಗ 140 ಕ್ಕೆ ಕುಸಿದಿದೆ. ಇದೀಗ ಕೋಳಿಗಳ ಮಾಂಸವನ್ನು ಕೇಳುವವರು ಇಲ್ಲದಂತಾಗಿದೆ. ಇನ್ನು ಗಡಿ ಭಾಗದ ಜನರಲ್ಲಿ ಹಕ್ಕಿ ಜ್ವರದ ಆತಂಕ ಕಾಡುತ್ತಿದೆ. 

ಚೆಕ್ ಪೋಸ್ಟ ಪ್ರಾರಂಭ: ಜಿಲ್ಲೆ ಗಡಿಭಾಗದಲ್ಲಿ ಈಗಾಗಲೇ 6 ಚೆಕ್ ಪೋಸ್ಟಗಳನ್ನು ಪ್ರಾರಂಭಿಸಲಾಗಿದೆ. ಆಥಣಿ ತಾಲೂಕಿನಕೊಟ್ಟಲಗಿ, ಕಾಗವಾಡ, ನಿಪ್ಪಾಣಿ ತಾಲೂಕಿನ ಕೊಗನೊಳ್ಳಿ, ಹುಕ್ಕೇರಿ ತಾಲೂಕಿನ ಸಂಕೇಶ್ವರ, ಬೆಳಗಾವಿ, ಹಿಂಡಲಗಾ, ಖಾನಾಪುರ ತಾಲೂಕಿನ ಕಣಕುಂಬಿ ಸೇರಿದಂತೆ ಒಟ್ಟು ಜಿಲ್ಲೆಯಲ್ಲಿ ಜಿಲ್ಲಾಡಳಿತ 6 ಚೆಕ್ ಪೋಸ್ಟಗಳನ್ನು ಪ್ರಾರಂಭಿಸಲಾಗಿದೆ. ಮಹಾರಾಷ್ಟ್ರದಿಂದ ರಾಜ್ಯಕ್ಕೆ ಆಗಮಿಸುವ ಕೋಳಿ ಮಾಂಸ ಹಾಗೂ ಕೋಳಿ ಮೊಟ್ಟೆಗಳು ಮತ್ತು ಕೋಳಿಯಿಂದ ತಯಾರಿಸುವ ಇತರೆ ವಸ್ತುಗಳನ್ನು ಚೆಕ್ ಮಾಡಿ ಅವುಗಳನ್ನು ಮಹಾರಾಷ್ಟ್ರ ರಾಜ್ಯಕ್ಕೆ ವಾಪಾಸ್ ಕಳುಹಿಸುತ್ತಿದ್ದಾರೆ.  

ಮಹಾರಾಷ್ಟ್ರ ರಾಜ್ಯದ ಲಾತೂರ ಜಿಲ್ಲೆಯ ಉದಯಗೀರ ಪ್ರದೇಶದಲ್ಲಿ 50ಕ್ಕಿಂತ ಹೆಚ್ಚು ಕಾಗೆಗಳು ಏಕಾಏಕಿಯಾಗಿ ಮೃತಪಟ್ಟವು. ಇವುಗಳ ಮಾದರಿಯನ್ನು ಮಧ್ಯಪ್ರದೇಶ ರಾಜ್ಯದ ಭೂಪಾಲನಲ್ಲಿರುವ ಪ್ರಯೋಗಾಲಯಕ್ಕೆ ಕಳುಹಿಸಲಾಯಿತು. ಸತ್ತ ಕಾಗೆಗಳಲ್ಲಿ ಎಚ್‌-5 ಎನ್‌-1 ವೈರಸ್ ಇರುವದು ದೃಡಪಟ್ಟ ಹಿನ್ನಲೆಯಲ್ಲಿ ಗಡಿ ಭಾಗದ ಜನರಲ್ಲಿ ಆತಂಕ ಶುರುವಾಗಿದೆ.  

ಇನ್ನು ಕಾಗೆಗಳಿಂದ ಕೋಳಿಗಳಿಗೆ ಸೋಂಕು ತಗಲುವ ಆತಂಕ ಎದುರಾಗಿರುವದರಿಂದ ಇದೀಗ ಮಹಾರಾಷ್ಟ್ರದ ಗಡಿ ಭಾಗದಲ್ಲಿ ಚೆಕ್ ಪೋಸ್ಟ್‌ ತೆರೆಯಲಾಗಿದೆ. ಮಹಾರಾಷ್ಟ್ರದಿಂದ ರಾಜ್ಯಕ್ಕೆ ಬರುವ ಪ್ರತಿವೊಂದು ವಾಹನಗಳನ್ನು ತಡೆದು ತಪಾಸಣೆ ಮಾಡಲಾಗುತ್ತಿದೆ. ಕೋಳಿ ಸಾಕಾಣಿಕೆ ಇರುವ ಸ್ಥಳಗಳಿಗೆ ಪಶು ಇಲಾಖೆ ಅಧಿಕಾರಿಗಳು ಭೆಟ್ಟಿ ನೀಡಿ ಪರೀಶೀಲನೆ ನಡೆಸುತ್ತಿದ್ದಾರೆ. ಇನ್ನು ಜಿಲ್ಲೆಯಲ್ಲಿ ಯಾವುದೆ ಒಂದು ಪ್ರಕರಣಗಳು ಪತ್ತೆಯಾಗಿಲ್ಲ. ಆದರೂ ಜಿಲ್ಲಾ ಆಡಳಿತ ಹಕ್ಕಿ ಜ್ವರ ತಡೆಯಲು ಎಲ್ಲಾ ಕ್ರಮ ಕೈಗೊಂಡಿದೆ. ಇನ್ನು ಮುಂಬರುವ ದಿನಗಳಲ್ಲಿ ಹಕ್ಕಿ ಜ್ವರ ಹೆಚ್ಚಾಗುವ ಆತಂಕ ಇರುವದರಿಂದ ಗಡಿ ಭಾಗದ ಜನರಲ್ಲಿ ಆತಂಕ ಮನೆ ಮಾಡಿದೆ. ಇನ್ನು ಕೋಳಿ ಮಾಂಸ ಹಾಗೂ ಮೊಟ್ಟೆ ಸೇವನೆ ಮಾಡಲು ಜನರು ಹಿಂದೇಟು ಹಾಕುತ್ತಿದ್ದಾರೆ. ಕೋಳಿ ಜ್ವರದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಚರ್ಚೆ ಹಾಗೂ ಸುಳ್ಳು ವದಂತಿಗಳು ಹರಡಿರುವದರಿಂದ ಇದೀಗ ಮಾಂಸ ಪ್ರಿಯರು ಆತಂಕದಲ್ಲಿದ್ದಾರೆ. ಕೋವಿಡ್ ನಂತರ ಇದೀಗ ಮತ್ತೆ ಹಕ್ಕಿ ಜ್ವರ ಜನರ ನಿದ್ದೆಗೆಡಿಸಿದೆ. 

- ಗಡಿಯಲ್ಲಿ ಜಿಲ್ಲಾಡಳಿತ ಕೇವಲ 6 ಚೆಕ್ ಪೋಸ್ಟಗಳನ್ನು ತೆಗೆದಿದೆ. ಮಹಾರಾಷ್ಟ್ರದಿಂದ ರಾಜ್ಯಕ್ಕೆ ಪ್ರವೇಶ ಮಾಡುವ ವಾಹನಗಳನ್ನು ಚೆಕ್ ಪೋಸ್ಟ್‌ ಸಿಬ್ಬಂದಿಗಳು ಸರಿಯಾಗಿ ಚೆಕ್ ಮಾಡುತ್ತಿಲ್ಲ. ಜಿಲ್ಲಾಡಳಿತ ಇದರ ಬಗ್ಗೆ ಕ್ರಮ ಕೈಗೊಳ್ಳಬೇಕು. ಜಿಲ್ಲೆಯಲ್ಲಿ ಚೆಕ್ ಪೋಸ್ಟ್‌ ಸಂಖ್ಯೆಗಳನ್ನು ಇನ್ನಷ್ಟು ಹೆಚ್ಚಿಸಬೇಕು. 

ಽ ಚಂದ್ರಕಾಂತ್ ಹುಕ್ಕೇರಿ ಸಾಮಾಜಿಕ ಹೋರಾಟಗಾರರು. 

* ಜಿಲ್ಲೆಯಲ್ಲಿ ಎಚ್‌.ಎನ್ - ಹಕ್ಕಿ ಜ್ವರದ ಯಾವುದೇ ಪ್ರಕರಣಗಳು 3 ಪತ್ತೆಯಾಗಿಲ್ಲ. ಆದರೂ ಕೂಡಾ ಮಹಾರಾಷ್ಟ್ರದ ಗಡಿ ಭಾಗದಿಂದ ರಾಜ್ಯ ಪ್ರವೇಶ ಮಾಡುವ ಕೆಲವೊಂದು ಸ್ಥಳಗಳಲ್ಲಿ ಚೆಕ್ ಪೋಸ್ಟ್‌ ನಿರ್ಮಿಸಲಾಗಿದೆ. ಮಾಂಸ ಪ್ರಿಯರು ಮಾಂಸವನ್ನು ಚೆನ್ನಾಗಿ ಬೇಯಿಸಿ ತಿನ್ನಬೇಕು. ಕೋಳಿ ಸಾಕಾಣಿಕೆ ಕೇಂದ್ರಗಳಿಗೆ ಪಶು ಇಲಾಖೆ ಸಿಬ್ಬಂದಿಗಳು ಭೆಟ್ಟಿ ನೀಡಿ ಮಾಹಿತಿ ಪಡೆದುಕೊಳ್ಳಲಾಗುತ್ತಿದೆ. ಹಕ್ಕಿ ಜ್ವರ ಕಡಿವಾಣಕ್ಕೆ ಜನರು ಸಹಕಾರ ನೀಡಬೇಕು. 

ಸಿ ಸದಾಶಿವ್ ಉಪ್ಪಾರ್  

ಪಶು ವೈದ್ಯಕೀಯ ಅಧಿಕಾರಿಗಳು ಚಿಕ್ಕೋಡಿ