ಲೋಕದರ್ಶನವರದಿ
ಇಳಕಲ್20: ಲಿಂಗಸಗೂರು ತಾಲೂಕಿನ ಸುಕ್ಷೇತ್ರ ಅಂಕಲಿಮಠದಲ್ಲಿ ಅಂಜನಾದ್ರಿ ಸಿನಿ ಪ್ರೊಡಕ್ಷನ್ ಅವರ ನಿರುಪಾದೀಶ್ವರ ಶರಣರ ಜೀವನ ಚರಿತ್ರೆ ಆಧಾರಿತ ಭಾವೈಕ್ಯಬ್ರಹ್ಮ ಚಲನಚಿತ್ರದ ಚಿತ್ರೀಕರಣದ ಮುಹೂರ್ತ ಸಮಾರಂಭ ಜರುಗಿತು.
ಅಂಕಲಿಮಠದ ಶ್ರೀವೀರಭದ್ರ ಮಹಾಸ್ವಾಮಿಗಳು ಕ್ಯಾಮರಾ ಚಾಲನೆ ಮಾಡುವ ಮೂಲಕ ಚಿತ್ರೀಕರಣಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಚಿತ್ರೀಕರಣ ಯಶಸ್ವಿಯಾಗಿ ನಡೆಯಲಿ ಎಂದು ಶ್ರೀಗಳು ಶುಭಹಾರೈಸಿದರು. ನಟ ಮಾ. ಆನಂದ , ತಿಮ್ಮಾಪುರ ಮಠದ ಮಹಾಂತ ಶ್ರೀಗಳು, ಬೇಡರಕಾರ್ಲಕುಂಟಿಯ ಕಾಲಜ್ಞಾನ ಮಠದ ಬಸವರಾಜಸ್ವಾಮಿಗಳು, ಶಿವಕುಮಾರ ಚಿಂಗಳಿ, ಡಾ.ಪ್ರಭು ಗಂಜಿಹಾಳ, ಅನುರಾಗ ಗದ್ದಿ, ಎಂ.ಆರ್.ಪಾಟೀಲ ,ಎಂ.ಶಿವರಾಜ್ ಪಾಟೀಲ, ಉಮೇಶ, ಖಾಜಾವಲಿ ಈಚನಾಳ, ಚಿನ್ನಪ್ಪ ನಕ್ಕುಂದಿ, ಎಸ್.ಆರ್.ರಸೂಲ, ಮೊದಲಾದವರಿದ್ದರು.
ಲಿಂಗಸಗೂರು ತಾಲೂಕಿನ ಅಮರೇಶ್ವರ ರಂಗಭೂಮಿಯ ಕಲಾವಿದರ ಸಂಘದ ಅಧ್ಯಕ್ಷರಾದ ನಿರುಪಾದಿ ಕವಿಗಳು ಕತೆ ಸಂಭಾಷಣೆ ರಚಿಸಿದ್ದಾರೆ. ಸಂಗೀತ ಯುವ ಸಂಗೀತ ನಿದರ್ೆಶಕ ಅನುರಾಗ ಗದ್ದಿ, ಸಾಹಿತ್ಯ ಕೆ.ಕಲ್ಯಾಣ, ಡಾ.ವಿ.ನಾಗೇಂದ್ರಪ್ರಸಾದ , ಮೇಕಪ್ ಪ್ರಕಾಶ ಕಮ್ಮಾರ, ಛಾಯಾಗ್ರಹಣ ಸಿದ್ದಾರ್ಥ ಭೈರವ್, ಪತ್ರಿಕಾ ಸಂಪರ್ಕ ಡಾ.ಪ್ರಭು ಗಂಜಿಹಾಳ, ಡಾ.ವೀರೇಶ ಹಂಡಗಿ ಅವರದಿದೆ. ವಿಜಯಕುಮಾರ ಗದ್ದಿ ನಿಮರ್ಿಸುತ್ತಿರುವ ಚಿತ್ರಕ್ಕೆ ಶಿವಶರಣ ಸುಗ್ನಳ್ಳಿ ನಿದರ್ೇಶನ ನೀಡುತ್ತಿದ್ದಾರೆ. ಮಾಸ್ಟರ್ ಆನಂದ ನಿರುಪಾದೀಶ್ವರರ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು , ಬ್ಯಾಂಕ್ ಜನಾರ್ಧನ, ನಯನ, ಕೆ.ಗಣೇಶರಾವ್ , ಜ್ಯೋತಿ ಮುರೂರ,ರೇಖಾ, ಅಚಿಜನಪ್ಪ ಮೊದಲಾದವರ ಜೊತೆಗೆ ಉತ್ತರ ಕನರ್ಾಟಕದ ಕಲಾವಿದರು ಅಭಿನಯಿಸಲಿದ್ದಾರೆ.
ಚಿತ್ರೀಕರಣ ಲಿಂಗಸಗೂರು ತಾಲೂಕಿನ ಮುದಗಲ್,ನಾಗರಾಳ,ಜಲದುರ್ಗ, ಜಾವೂರ, ಜಡೆಶಂಕರಲಿಂಗ, ಅಂಕಲಿಮಠ , ಗಂಗಾವತಿ ,ಗದಗ ,ಕೊಪ್ಪಳ, ಬೆಳಗಾಂವ ಜಿಲ್ಲೆಯ ಅಂಕಲಿಮಠ ಸುತ್ತಮುತ್ತಲಲ್ಲದೆ ಬಾಗಲಕೋಟ ಜಿಲ್ಲೆಯ ಸಿದ್ಧನಕೊಳ್ಳ, ಮಹಾಕೂಟ, ಶಿವಯೋಗಮಂದಿರಗಳಲ್ಲೂ ಚಿತ್ರೀಕರಣ ನಡೆಯಲಿದ್ದು, ಎರಡು ಹಂತಗಳಲ್ಲಿ ನಡೆಸುವದಾಗಿ ನಿಮರ್ಾಪಕ ವಿಜಯಕುಮಾರ ಗದ್ದಿ ತಿಳಿಸಿದ್ದಾರೆ.