ಜೀವ ವೈವಿಧ್ಯತೆಯ ರಕ್ಷಣೆ ಅಗತ್ಯ: ಚೌಗಲಾ
Biodiversity needs to be protected: Chowgala
ಜೀವ ವೈವಿಧ್ಯತೆಯ ರಕ್ಷಣೆ ಅಗತ್ಯ: ಚೌಗಲಾ
ಬೆಳಗಾವಿ 07: ಪ್ರಕೃತಿಯಲ್ಲಿರುವ ಜೀವ ವೈವಿಧ್ಯತೆಯನ್ನು ಕಾಪಾಡಿ ಭವಿಷ್ಯದ ತಲೆಮಾರಿಗೆ ಆರೋಗ್ಯಕರ ಪರಿಸರವನ್ನು ಉಳಿಸಿಕೊಡುವ ಮಹತ್ತರ ಜವಾಬ್ದಾರಿ ನಮ್ಮ ಮೇಲಿದೆ ಎಂದು ಮಹಿಳಾ ಕಲ್ಯಾಣ ಸಂಸ್ಥೆಯ ಸಂಯೋಜಕ ಎಂ.ಎಸ್.ಚೌಗಲಾ ಅಭಿಪ್ರಾಯಪಟ್ಟರು.
ನಗರದ ಬಸವಣ ಕುಡಚಿಯಲ್ಲಿರುವ ಶಕ್ತಿಸದನ ಮಹಿಳಾ ಪುನರ್ವಸತಿ ಕೇಂದ್ರ ಹಾಗೂ ಚಿನ್ನಮ್ಮ. ಬಿ. ಹಿರೇಮಠ ವೃದ್ಧಾಶ್ರಮದಲ್ಲಿ ಆಯೋಜಿಸಿದ ವಿಶ್ವ ಪರಿಸರ ದಿನಾಚರಣೆ ಹಾಗೂ ವನಮಹೋತ್ಸವ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಮರನೆಡುವುದು ಜಲಸಂರಕ್ಷಣೆ ನೀರಿನ ಸಂಗ್ರಹ ಪ್ಲ್ಯಾಸ್ಟಿಕ ಬಳಕೆ ತಡೆ ವಿದ್ಯುತ್ ಮತ್ತು ಇಂಧನ ಉಳಿತಾಯದ ಬಗ್ಗೆ ಮಾಹಿತಿ ನೀಡಿದರು. ಮನೆ ಮನೆಯಿಂದ ಪರಿಸರ ಸಂರಕ್ಷಣೆ ಆರಂಭವಾಗಬೇಕು, ಮಕ್ಕಳು ಯುವಕರು ಹಾಗೂ ಪ್ರಜ್ಞಾವಂತ ಸಮಾಜ ಈ ಕಾರ್ಯಕ್ರಮದಲ್ಲಿ ಮುಂದಾಗಬೇಕೆಂದರು.
ಶಕ್ತಿ ಸದನ ಯೋಜನೆಯ ಸಂಯೋಜಕಿ ಸುರೇಖಾ ಪಾಟೀಲ, ಆರ್.ಜೆ. ಚೇತನ ಜಾನಕಿ, ಅಲ್ಲಾಭಕ್ಷ ಉಪಸ್ಥಿತರಿದ್ದರು. ವನಮಹೋತ್ಸವ ಸಂದರ್ಭದಲ್ಲಿ ಆವರಣದಲ್ಲಿ 50ಕ್ಕೂ ಹೆಚ್ಚು ಸಸಿಗಳನ್ನು ನೆಡಲಾಯಿತು.
ಅನೆಕಲ್ಲು, ಮಳೆ ಅಬ್ಬರಕ್ಕೆ 39 ಕುರಿಗಳ ಸಾವು : ಬೀದಿಗೆ ಬಂತು ಬಡವನ ಬದುಕು
ಮಳೆಯ ಅವಾಂತರ : ನದಿಯಂತಾದ ರಾಷ್ಟ್ರೀಯ ಹೆದ್ದಾರಿ, ವಾಹನಗಳು ಸಿಲುಕಿ ಪರದಾಡಿದ ಪ್ರಯಾಣಿಕರು
ಬೆಳಗಾವಿಯಲ್ಲಿ ಆನೆಕಲ್ಲು ಮಿಶ್ರಿತ ಗಾಳಿ ಮಳೆಯ ಅರ್ಭಟಕ್ಕೆ ಜನಜೀವನ ಅಸ್ತವ್ಯಸ್ತ
ಹಣ ದ್ವಿಗುಣ ಹೆಸರಲ್ಲಿ ಜನರಿಗೆ ವಂಚಿಸುತ್ತಿದ್ದ ಅಂತರಾಜ್ಯ ಖದೀಮರ ಬಂಧನ : ಗೋಕಾಕ ಪೊಲೀಸರ ಕಾರ್ಯಕ್ಕೆ ಎಸ್ ಪಿ ಶ್ಲಾಘನೆ
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ 