ಬಿಂಕದಕಟ್ಟಿ: ಎಪ್ರೀಲ್ 1 ರಿಂದ ನರೇಗಾ ಸಮುದಾಯ ಕಾಮಗಾರಿ ಆರಂಭ
ಬಿಂಕದಕಟ್ಟಿ: ನರೇಗಾ ಯೋಜನೆಯ ಸಮರ್ಕ ನಿರ್ವಹಣೆಗೆ ಸರ್ಕಾರದಿಂದ ಕಾಯಕ ಬಂಧು ಎಂಬ ಪರಿಕಲ್ಪನೆಯನ್ನು ರೂಪಿಸಿದೆ ಎಂದು ಗ್ರಾಮ ಪಂಚಾಯತ ಅಭಿವೃದ್ದಿ ಅಧಿಕಾರಿ ಶ್ರೀಮತಿ ರೆಹಮತ್ಬಾನು ಕೀರೆಸೂರ ಹೇಳಿದರು. ಗದಗ ತಾಲೂಕಿನ ಬಿಂಕದಕಟ್ಟಿ ಗ್ರಾಪಂ ವ್ಯಾಪ್ತಿಯಲ್ಲಿ ನರೇಗಾ ಯೋಜನೆಯಡಿ ನಡೆದ ಕಾಯಕ ಬಂಧುಗಳ ತರಬೇತಿ ಕಾರ್ಯಕ್ರಮದಲ್ಲಿ ಪಿಡಿಒ ಶ್ರೀಮತಿ ರೆಹಮತ್ಬಾನು ಕೀರೆಸೂರ ಮಾತನಾಡಿ, ನರೇಗಾ ಕೂಲಿ ಕಾರ್ಮಿಕರಿಗೆ ಇದುವರೆಗೆ ಸಮರ್ಕ ಕೂಲಿ ಕೆಲಸ ನೀಡಿದ್ದು ಯೋಜನೆಯಡಿ ರೈತರು ಸಮುದಾಯ ಕಂದಕ ಬದು ನಿರ್ಮಾಣ, ದನ/ಕುರಿ ಶೆಡ್, ತೋಟಗಾರಿಕೆ ಬೆಳೆ, ರೇಷ್ಮೆ ಮುಂತಾದ ಕಾಮಗಾರಿಗಳಲ್ಲಿ ಸಮಗ್ರವಾಗಿ ಪಾಲ್ಗೋಂಡು ಯೋಜನೆಯ ಸದುಪಯೋಜ ಪಡೆದುಕೊಳ್ಳಲು ಸೂಚಿಸಿದರು. ತಾ.ಪಂ ಐ.ಇ.ಸಿ ಸಂಯೋಜಕ ಮಾತನಾಡಿ ಕಾಮಗಾರಿಕೆ ಸ್ಥಳದಲ್ಲಿ ಸ್ವಚ್ಛ ಕುಡಿಯುವ ನೀರು, ನೆರಳಿನ ವ್ಯವಸ್ಥೆ, ಪ್ರಥಮ ಚಿಕಿತ್ಸಾ ಪೆಟ್ಟಿಗೆ, ದಾಖಲಾತಿಗಳನ್ನು ಸರಿಯಾಗಿಡಬೇಕು ಹಾಗೂ ಈ ಯೋಜನೆಯಲ್ಲಿ ಮಹಿಳೆಯರ ಭಾಗವಹಿಸುವಿಕೆಯ ಪ್ರಮಾಣ ಹೆಚ್ಚಿಸಲು ಕ್ರಮ ಕೈಗೊಳ್ಳಲು ಮಹತ್ವ ಕೊಡಲು ಕರೆ ನೀಡಲಾಯಿತು.