ಬಿಂಜಲಭಾವಿ ಪಿಕೆಪಿಎಸ್‌: 5 ಸ್ಥಾನಗಳಿಗೆ ಚುನಾವಣೆ

Binjalabhavi PKPS: Elections for 5 seats

ತಾಳಿಕೋಟಿ 17: ತಾಲೂಕಿನ ಬಿಂಜಲಭಾವಿ ಗ್ರಾಮದ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘ ನಿ.ಇದರ ಆಡಳಿತ ಮಂಡಳಿಯ 11 ಸ್ಥಾನಗಳ ಪೈಕಿ ಸಾಲಗಾರರ ಸಾಮಾನ್ಯ 5 ಸ್ಥಾನಗಳಿಗೆ ರವಿವಾರ ಚುನಾವಣೆ ನಡೆಯಿತು.  

ಸಂಘದ ಮುಂದಿನ 5 ವರ್ಷಗಳ ಅವಧಿಯ ಆಡಳಿತ ಮಂಡಳಿ ನಿರ್ದೇಶಕರ ಈ ಚುನಾವಣೆಯಲ್ಲಿ ಸಂಘದ ಒಟ್ಟು 12 ಸ್ಥಾನಗಳಿಗೆ ಆಯ್ಕೆ ನಡೆಯಬೇಕಾಗಿತ್ತು, ಪರಿಶಿಷ್ಟ ಪಂಗಡದ ಒಂದು ಸ್ಥಾನಕ್ಕೆ ಯಾರೂ ನಾಮಪತ್ರ ಸಲ್ಲಿಸದೇ ಇರುವುದರಿಂದ ಉಳಿದ 11 ಸ್ಥಾನಗಳಿಗೆ ಚುನಾವಣೆ ನಡೆಯಬೇಕಾಗಿತ್ತು, ಇದರಲ್ಲಿ 6 ಸ್ಥಾನಗಳಿಗೆ ಅವಿರೋಧ ಆಯ್ಕೆ ನಡೆದು, ಉಳಿದ 5 ನಿರ್ದೇಶಕರ ಸ್ಥಾನಗಳಿಗೆ ಚುನಾವಣೆ ನಡೆದಿತ್ತು 

ಚುನಾವಣೆಯಲ್ಲಿ ಒಂದೇ ಗುಂಪಿಗೆ ಸೇರಿದ 5 ಜನ ಅಭ್ಯರ್ಥಿಗಳು ಅತ್ಯಧಿಕ ಮತಗಳಿಂದ ಆಯ್ಕೆಯಾದರು. ಚುನಾವಣೆಯಲ್ಲಿ ಆಯ್ಕೆಯಾದ ಸದಸ್ಯರಾದ ರುದ್ರಗೌಡ ದೊಡ್ಡಪ್ಪಗೌಡ ಪಾಟೀಲ, ಸೂಗಪ್ಪಗೌಡ ಬಸನಗೌಡ ಪಾಟೀಲ( ಬಿರಾದಾರ),ರಾಮನಗೌಡ ಬಸವಂತರಾಯಗೌಡ ಬಿರಾದಾರ, ರಾಚಪ್ಪ ವೀರಭದ್ರ​‍್ಪ ಪಟ್ಟಣಶೆಟ್ಟಿ, ಭೀಮನಗೌಡ ಶರಣಪ್ಪಗೌಡ ಬಿರಾದಾರ (ಕೆಸರಟ್ಟಿ) ಹಾಗೂ ಅವಿರೋಧವಾಗಿ ಅಮರೇಶ ಸಂಗಪ್ಪ ಪಟ್ಟಣಶೆಟ್ಟಿ, ಶ್ರೀಮತಿ ಕಮಲಾಕ್ಷಿ ಶಿವಪುತ್ರ​‍್ಪ ಕರವಿನ, ದರಸಮಾ ಬೀಜಾನಸಾ ಮುಜಾವರ, ಈರಯ್ಯ ಶಿವಯ್ಯ ಸ್ಥಾವರಮಠ, ಮಾಳಪ್ಪ ಪ್ರಧಾನೆಪ್ಪ ಆಲ್ಯಾಳ(ಅಂಬಳನೂರ), ಶಂಕ್ರು ಚಂದು ಚವಾಣ್ ಕೆಸರಟ್ಟಿ ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಗುರುರಾಜ ಕವಡಿ ಘೋಷಿಸಿದರು.  

ಸಂಘದ ಕಾರ್ಯದರ್ಶಿ ವಿಜಯಕುಮಾರ್ ಲಿಂಗದಳ್ಳಿ ಸಹಾಯಕರಾಗಿ ಕಾರ್ಯ ನಿರ್ವಹಿಸಿದರು. ವಿಜಯೋತ್ಸವ: ತಮ್ಮ ಗುಂಪಿನ 5 ಜನ ಅಭ್ಯರ್ಥಿಗಳ ಗೆಲುವಿನ ಫಲಿತಾಂಶ ಹೊರಬೀಳುತ್ತಿದ್ದಂತೆಯೇ ಅವರ ಬೆಂಬಲಿಗರು ಗ್ರಾಮದ ಗಣ್ಯರ ನೇತೃತ್ವದಲ್ಲಿ ವಿಜಯೋತ್ಸವ ಆಚರಿಸಿದರು.ಈ ಸಮಯದಲ್ಲಿ ಗ್ರಾಮದ ಗಣ್ಯರಾದ ಅಮರೇಶಗೌಡ ಸಂ.ನಾಡಗೌಡ,ಗೌಡಪ್ಪಗೌಡ ಎಂ.ಬಿರಾದಾರ, ಶಂಕರಗೌಡ ಜಿ.ಪಾಟೀಲ,ಸುರೇಶಧಣಿ ಅ.ನಾಡಗೌಡ, ಬಸನಗೌಡ ಎಸ್‌.ಪಾಟೀಲ, ಶಾಂತಪ್ಪ ಬಿ. ಪಟ್ಟಣಶೆಟ್ಟಿ,ವಿ.ಎ.ನಾಡಗೌಡ, ಮಡಿವಾಳಪ್ಪ ಎನ್‌. ಜಾಲಿಹಾಳ, ಬಸನಗೌಡ ಎನ್‌.ಚೌದ್ರಿ, ಬಸನಗೌಡ ಆರ್‌.ಮುದ್ನೂರ, ಬಿಂಜಲಭಾವಿ,ಅಂಬಳನೂರ ಹಾಗೂ ಕೆಸರಟ್ಟಿ ಗ್ರಾಮದ ಗಣ್ಯರು ಹಿರಿಯರು ಇದ್ದರು.