ಸಂಕೇಶ್ವರ 17 : ಮೈದುಂಬಿ ಹರಿಯುತ್ತಿರುವ ಈ ಭಾಗದ ಪುಣ್ಯದಾಯಿನಿ ಹಿರಣ್ಯಕೇಶಿ ನದಿಗೆ ಸ್ಥಳೀಯ ಶ್ರೀ ಹಿರಣ್ಯಕೇಶಿ ಸಹಕಾರಿ ಸಕ್ಕರೆ ಕಾರಖಾನೆ ವತಿಯಿಂದ ಸಂಚಾಲಕ ರಾಜಕುಮಾರ ಪಾಟೀಲ ದಂಪತಿ ವಿಧಿ-ವಿಧಾನಪೂರ್ವಕ ಪೂಜೆ ನೆರವೇರಿಸಿ ಬಾಗೀನ ಅಪರ್ಿಸಿದರು. ಪೂಜೆ ನೆರವೇರಿಸಿದ ದಂಪತಿಗೆ ಚೇರಮನ್ ಶಿವಪುತ್ರ ಶಿರಕೋಳಿ ಫಲ-ಪುಷ್ಪ ಹಾಗೂ ನೂತನ ವಸ್ತ್ರ ಕಾಣಿಕೆ ನೀಡಿ ಗೌರವಿಸಿದರು.
ಸಮಾರಂಭದಲ್ಲಿ ವೈಸ್ ಚೇರಮನ್ ಶ್ರೀಶೈಲಪ್ಪಾ ಮಗದುಮ್ಮ, ನಿದರ್ೆಶಕರಾದ ಪ್ರಲ್ಹಾದ ಪಾಟೀಲ, ಶಿವನಾಯಿಕ ನಾಯಿಕ, ರಾಜೇಂದ್ರ ಪಾಟೀಲ, ಉದಯಕುಮಾರ ದೇಸಾಯಿ, ಸುರೇಶ ಬೆಲ್ಲದ, ವ್ಯವಸ್ಥಾಪಕ ನಿದರ್ೆಶಕ ಅಶೋಕ ಪಾಟೀಲ, ಚಂದ್ರಕಾಂತ ಕಳಸಗೌಡ, ಸುರೇಶ ಖೋತ, ಭರಮು ಜೀವಣಿ, ಕು.ಐಶ್ವಯ್ಯ ಪಾಟೀಲ, ಜನರಲ್ ಮ್ಯಾನೇಜರ ಟಿ.ಎಸ್.ಪಾಟೀಲ, ಲೇಖಾಧಿಕಾರಿ ಜಯಸಿಂಗ ಸನದಿ, ಕಚೇರಿ ಅಧೀಕ್ಷಕ ಎಸ್.ಎಲ್.ಮಣ್ಣಿಕೇರಿ, ಮಾರಾಟಾಧಿಕಾರಿ ಎಸ್.ಆರ್. ಕಕರ್ಿನಾಯಿಕ, ಸೇರಿದಂತೆ ಎಲ್ಲ ವಿಭಾಗಾಧಿಕಾರಿಗಳು ಉಪಸ್ಥಿತರಿದ್ದರು.