ಲೋಕದರ್ಶನ ವರದಿ
ಹೊಸಪೇಟೆ 01:ಕಳೆದ ದಿನ ಹೊಸಪೇಟೆ ರೈತರ ಸಂಘದಿಂದ ತುಂಗಭದ್ರ ಜಲಾಶಯಕ್ಕೆ ಭೇಟಿ ನೀಡಿ, ತುಂಗೆಗೆ ಭಾಗಿನ ಪೂಜಾ ಕಾರ್ಯಕ್ರಮ ನೆರವೇರಿಸಲಾಯಿತು. ಕಳೆದ 5-6 ವರ್ಷಗಳಿಂದ ಮಳೆಯ ಅಭಾವದಿಂದ ಜಲಾಶಯವು ಭತರ್ಿಯಾಗದೇ ಆದಕಾರಣ ಹೊಸಪೇಟೆ ರೈತರು ಹಾಗೂ ಸಾರ್ವಜನಿಕರು ನೀರಿನ ಬವಣೆಯನ್ನು ಅನುಭವಿಸುವಂತಾಯಿತು.
ಸಮಯಕ್ಕೆ ಸರಿಯಾಗಿ ನೀರು ಸಿಗದೇ ಇದ್ದುದರಿಂದ ರೈತರು ಬೆಳೆದ ಬೆಳೆಗಳು ಒಣಗಿದ್ದರಿಂದ ನಷ್ಟಕ್ಕೆ ಗುರಿಯಾಗಿದ್ದರು. ಮತ್ತು ಜಾನುವಾರುಗಳಿಗೂ ಕುಡಿಯಲು ನೀರಿನ ತೊಂದರೆ ಉಂಟಾಗಿತ್ತು.
ಈ ವರ್ಷ ಮಲೆನಾಡು ಪ್ರದೇಶದಲ್ಲಿ ಉತ್ತಮ ಮಳೆಯಾಗಿದ್ದರಿಂದ ಹೆಚ್ಚಿನ ಮಟ್ಟದಲ್ಲಿ ನೀರು ತುಂಗಭದ್ರಾ ನದಿಗೆ ಹರಿದು ಬಂದಿದ್ದರಿಂದ ಜಲಾಶಯ ಭತರ್ಿಯಾಗಿದೆ. ನಮ್ಮ ಜಲಾಶಯವು ತುಂಬಿರುವುದರಿಂದ ಹೊಸಪೇಟೆ ರೈತಾಪಿ ಜನಕ್ಕೆ ಹಾಗೂ ಸಾರ್ವಜನಿಕರಿಗೆ ಹರ್ಷವನ್ನುಂಟು ಮಾಡಿದೆ. ಇದೇ ರೀತಿ ಜಲಾಶಯವು ಪ್ರತೀ ವರ್ಷ ತುಂಬಿ, ರೈತರ ಬೆಳೆಗಳು ಸಮೃದ್ಧಿಯಾಗಿ ಬೆಳದು, ಹೆಚ್ಚಿನ ಲಾಭ ಲಭಿಸುವಂತಾಗಲಿ ಎಂದು ಮತ್ತು ಹೊಸಪೇಟೆ ತಾಲೂಕಿನ ನಾಗರೀಕರಿಗೆ ನೀರಿನ ತೊಂದರೆಯಾಗದೇ ಇರಲೆಂದು ಪ್ರಾಥರ್ಿಸಿ, ಹೊಸಪೇಟೆ ರೈತರ ಸಂಘದಿಂದ ತುಂಗಭದ್ರ ಜಲಾಶಯಕ್ಕೆ ಭಾಗೀನ ಅಪರ್ಿಸಲಾಯಿತು.
ಈ ಸಂದರ್ಭದಲ್ಲಿ ಹೊಸಪೇಟೆ ರೈತರ ಸಂಘದ ಅಧ್ಯಕ್ಷರಾದ ಗೋಸಲ ಭರಮಪ್ಪ, ಉಪಾಧ್ಯಕ್ಷರಾದ ಬಿಸಾಟಿ ಸತ್ಯನಾರಾಯಣ, ಖಜಾಂಚಿಯಾದ ಬಿ.ಜಿ.ತಿರುಮಲ, ಕಾರ್ಯದಶರ್ಿಗಳಾದ ಬಿ.ನಾಗರಾಜ ಮತ್ತು ರೈತ ಸಂಘದ ಮಾಜಿ ಅಧ್ಯಕ್ಷರಾದ ಕಿಚಿಡಿ ಲಕ್ಷ್ಮಣ ಹಾಗೂ ನಿದರ್ೇಶಕರುಗಳಾದ ಎಂ.ಜಿ. ಜೋಗಯ್ಯ, ಎ.ಪರಸಪ್ಪ, ಬ್ಯಾಲಾಳ ಅಶೋಕ ಮತ್ತು ರೈತ ಮುಖಂಡರಾದ ಗುಂಡಿ ಪ್ರಶಾಂತ, ಸುದರ್ಶನ, ಬೆಳಗೋಡು ರುದ್ರಪ್ಪ, ಡಿ.ಹುಲುಗಪ್ಪ, ಅಂಜಿನಪ್ಪ ಮತ್ತು ನೀರಾವರಿ ಇಲಾಖಾಧಿಕಾರಿಗಳಾದ ಪುರುಷೋತ್ತಮ, ಅಂಬಣ್ಣ ಹಾಗೂ ಪೊಲೀಸ್ ಅಧಿಕಾರಿಗಳು ಹಾಜರಿದ್ದರು.