ಹಡಪದ ಅಪ್ಪಣ್ಣ ಸಮಾಜದ ಸರಕಾರಿ ಸೌಲಭ್ಯಕ್ಕಾಗಿ ಬೈಕ ರ್ಯಾಲಿ
Bike rally for government facilities for the Hadapad Appanna community
ಶಿಗ್ಗಾವಿ 19 : ತಾಲೂಕಿನ ಕ್ಷೌರಿಕರಿಗೆ ಸರಕಾರದಿಂದ ಸಿಗುವ ಸರಕಾರಿ ಸೌಲಭ್ಯಗಳನ್ನು ಪಡೆಯುವುದಕ್ಕಾಗಿ ಪಟ್ಟಣದ ವ್ಯಾಪ್ತಿಯಲ್ಲಿ 21 ರಂದು ಶನಿವಾರ ಬೈಕ ರ್ಯಾಲಿಯನ್ನು ಏರಿ್ಡಸಲಾಗಿದೆ ಎಂದು ತಾಲೂಕ ಹಡಪದ ಅಪ್ಪಣ್ಣ ಸಮಾಜದ ಅಧ್ಯಕ್ಷ ಮಲ್ಲಿಕಾರ್ಜುನ ಹಡಪದ ಎಂದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಹಡಪದ ಅಪ್ಪಣ್ಣ ಸಮಾಜ ಸೇವಾ ಸಂಘ ವರದಿಗಾರರೊಂದಿಗೆ ಮಾತನಾಡಿದ ಅವರು ಪುರಸಭೆ ವ್ಯಾಪ್ತಿಯಲ್ಲಿ ಕುಟೀರ ಹಾಗೂ ಗ್ರಾಮೀಣ ಭಾಗದಲ್ಲಿ ಪಂಚಾಯತ ಜಾಗದಲ್ಲಿ ಕುಟೀರ, ಆರೋಗ್ಯ್ ಜೀವ ವಿಮೆ ಹಾಗೂ ವಾಸಿಸಲು ನೀವೇಶನ ಪಿಂಚಣಿ ಯೋಜನೆ ಕ್ಷೌರಿಕರ ಮಕ್ಕಳಿಗೆ ವಿದ್ಯಾರ್ಥಿಗಳಿಗೆ ವಿಶೇಷ ಹಾಸ್ಟೆಲ್ ಸೌಲಭ್ಯ ಹಾಗೂ ಕ್ಷೌರಿಕ ಅಂಗಡಿ ಕಟ್ಟಿಕೊಳ್ಳಲು ಸಾಲ ಸೌಲಭ್ಯ ಸರ್ಕಾರ ದಿಂದ ಕ್ಷೌರಿಕ ಸಾಮಾಗ್ರಿಗಳು ಹಾಗೂ ಸಾಮಾಜಿಕ ನ್ಯಾಯಕ್ಕಾಗಿ 21 ಶನಿವಾರದಂದು ಬೈಕ್ ರ್ಯಾಲಿ ಮೂಲಕ ಶಿಗ್ಗಾವಿ ನಗರದ ದ್ಯಾಮವ್ವನ ಪದಗಟ್ಟಿ ಪ್ರಾರಂಭಿಸಿ ನಗರದ ಕಿತ್ತೂರು ರಾಣಿ ಚೆನ್ನಮ್ಮ ವೃತ್ತದ ಹೊಸ ಬಸ್ ನಿಲ್ದಾಣ ಮಾರ್ಗವಾಗಿ ತಹಸೀಲ್ದಾರ್ ಆಫೀಸಗೆ ತೆರಳಿ ಮನವಿ ಅರ್ಿಸಲಾಗುವುದು ಎಂದರು. ಈ ಬೈಕ್ ರ್ಯಾಲಿಗೆ ಹಡಪದ ಅಪ್ಪಣ್ಣ ಸಮಾಜ ಹಾಗೂ ಸವಿತಾ ಸಮಾಜದ ವೃತ್ತಿ ಬಾಂದವರು ಹೆಚ್ಚಿನ ಸಂಖ್ಯೆಯೆಲ್ಲಿ ಭಾಗವಹಿಸಿ ಬೈಕ್ ರ್ಯಾಲಿ ಏಶಸ್ವಿ ಗೊಳಿಸಲು ಕರೆ ಕೊಟ್ಟದ್ದಾರೆ.
ಈ ಸಂದರ್ಭದಲ್ಲಿ ತಾಲೂಕ ಅಧ್ಯಕ್ಷ ಮಲ್ಲಿಕಾರ್ಜುನ ಹಡಪದ, ಕಾರ್ಯಧ್ಯಕ್ಷ ಮಂಜುನಾಥ ಕ್ಷೌರದ, ಉಪಾಧ್ಯಕ್ಷ ಈರ್ಪ ಹಡಪದ, ಶಹರ ಘಟಕ ಅಧ್ಯಕ್ಷ ವಿರೇಶ ಹಡಪದ, ತಾಲೂಕ ಕಮಿಟಿಯ ನಿರ್ದೇಶಕರಾದ ದೇವಪ್ಪ ಮಡ್ಲಿಕರ, ಬಸವರಾಜ ಕ್ಷವರದ, ಪ್ರಮೋದ ಮುಗಳಿ, ಶಿವರಾಜ್ ಹಡಪದ, ಮಂಜುನಾಥ ಓಣಿಮನಿ ಉಪಸ್ಥಿತರಿದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 