ಬಿಹಾರ ಅತ್ಯಾಚಾರ ಖಂಡಿಸಿ ಮನವಿ


ಲೋಕದರ್ಶನ ವರದಿ

ಹಾವೇರಿ30 : ಬಿಹಾರದ ರಾಜ್ಯದ ಮುಜಪ್ಘರಪುರದ ಪುನರ್ ವಸತಿಯ ಮಹಿಳೆಯರ ಮೇಲೆ ನಡೆದ ಅತ್ಯಾಚಾರ ಖಂಡಿಸಿ ಹಾಗೂ ಅತ್ಯಾಚಾರಿಗಳಿಗೆ ಕಠಿಣ ಶಿಕ್ಷೆ ಕೈಗೊಳ್ಳುವಂತೆ ಶಿಫಾರಸ್ಸು ಕೋರಿ ಜಿಲ್ಲಾ ಸ್ವಯಂ ಸೇವಾ ಸಂಸ್ಥೆಗಳ ಒಕ್ಕೂಟದ ವತಿಯಿಂದ ಜಿಲ್ಲಾಧಿಕಾರಿಗಳಾದ ಡಾ|| ವೆಂಕಟೇಶ್ ಎಂವ್ಹಿ ಯವರ  ಮೂಲಕ ಮನವಿ ಸಲ್ಲಿಸಲಾಯಿತು ಜಿಲ್ಲಾ ಸ್ವಯಂ ಸೇವಾ ಸಂಸ್ಥೆ ಒಕ್ಕೂಟದ ಅಧ್ಯಕ್ಷರಾದ  ಹೆಚ್.ಎಫ್.ಅಕ್ಕಿ, ಉಪಾಧ್ಯಕ್ಷರಾದ ಚನ್ನಮ್ಮ ಚಂದಾಪುರ, ಕಾರ್ಯದಶರ್ಿಯಾದ ಎಸ್.ಹೆಚ್.ಮಜೀದ, ಮುತ್ತುರಾಜ ಮಾದರ್ ಹಾಗೂ ಸದಸ್ಯರಾದ ಬಿ.ಜಿ.ಸಾಲಿ, ಮಲ್ಲಪ್ಪ ಬ್ಯಾತನಾಳ್, ನಾಗರತ್ನ ಧಾರವಾಡ್ಕರ್, ಹಸೀನಾ ಯಡಿಯಾಲ್, ಕರಿಬಸಪ್ಪ, ಗುತ್ತೆಪ್ಪ ಅನೇಕರು ಉಪಸ್ಥಿತರಿದ್ದರು.