ಲೋಕದರ್ಶನ ವರದಿ
ವಿಜಯರ 11: ಇತ್ತೀಚೆಗೆ ಬೆಂಗಳೂರಿನ ಅರ್ಚನಾ ಮಹಿಳಾ ಪೊಲೀಸ್ ಕಾನ್ಸ್ಟೇಬಲ್ಗೆ ಸಿಕ್ಕ ನವಜಾತ ಶಿಶುವಿಗೆ ಹತ್ತು ತಿಂಗಳ ಬಾಣಂತಿಯಾಗಿರುವ ಸಂಗೀತಾ ಹಳಿಮನಿ ಎಂಬ ಯಲಹಂಕ ಪೊಲೀಸ್ ಠಾಣೆಯ ಮಹಿಳಾ ಪೊಲೀಸ್ ಕಾನ್ಸ್ಟೇಬಲ್ ಅನಾಥ ನವಜಾತ ಶಿಶುವಿಗೆ ತಮ್ಮ ಎದೆಹಾಲುಣಿಸಿ ಮಾನವೀಯತೆ ತೋರಿದ್ದಾರೆ. ಮೂಲತಃ ವಿಜಯಪುರ ಜಿಲ್ಲೆ ಬಸವನ ಬಾಗೇವಾಡಿಯವರಾಗಿದ್ದು, ಮೂರು ವರ್ಷದ ಹಿಂದೆ ಪೊಲೀಸ್ ಇಲಾಖೆಗೆ ಸೇರಿದ್ದಾರೆ. ಈಕೆಗೆ ಹತ್ತು ತಿಂಗಳ ಮಗುವಿದೆ.
ಜಿಕೆವಿಕೆ ಸಮೀಪದಲ್ಲಿ ನವಜಾತ ಶಿಶುವೊಂದು ಪತ್ತೆಯಾಗಿದೆಯೆಂಬ ಮಾಹಿತಿ ದೊರೆಯುತ್ತಿದ್ದಂತೆ ಸಂಗೀತಾ ಸೇರಿದಂತೆ ಇನ್ನಿತರ ಪೊಲೀಸರು ಸ್ಥಳಕ್ಕೆ ಬಂದರು. ಮಾತೃಪ್ರೇಮ ವಂಚಿತವಾಗಿ ರೋಧಿಸುತ್ತಿದ್ದ ನವಜಾತ ಶಿಶುವನ್ನು ತನ್ನ ಎದೆಗವಚಿಕೊಂಡ ಈ ಮಹಾತಾಯಿ ಆ ಮಗುವಿಗೆ ಹಾಲುಣಿಸಿ ಸಂತೈಸಿದರು. ಸಂಗೀತ ಅವರ ಆರೈಕೆಯ ನಂತರ ನವಜಾತ ಅನಾಥ ಶಿಶು ಚೇತರಿಸಿಕೊಂಡಿದ್ದು, ವಾಣಿ ವಿಲಾಸ ಆಸ್ಪತ್ರೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ.
ಹಾಗೆಯೇ ಕರುಣೆಯಿಲ್ಲದ ತಾಯಿಯೊಬ್ಬರು ತನ್ನ ಮುದ್ದಾದ ನವಜಾತ ಶಿಶುವನ್ನು ಹೀಗೆ ಅನಾಥವಗಿ ಬಿಟ್ಟುಹೋಗಿದ್ದಾರೆ ಇದು ಹೆಣ್ತನಕ್ಕೆ ಶಾಪ. ಮುಂದೆ ಇಂತಹ ಕೃತ್ಯಕ್ಕೆ ಯಾರೂ ಮುಂದಾಗಬಾರದೆಂದು ಸಂಗೀತಾ ಮನವಿ ಮಾಡಿಕೊಂಡಿದ್ದಾರೆ. ಅನಾಥ ನವಜಾತ ಶಿಶುಗಳಿಗೆ ತಮ್ಮ ಎದೆಹಾಲುಣಿಸಿ ಮಾತೃಪ್ರೇಮ ಹಾಗೂ ಮಾನವೀಯತೆ ಮೆರೆದ ಅರ್ಚನಾ, ಸಂಗೀತಾ ಪೊಲೀಸಮ್ಮರ ಕಾರ್ಯವನ್ನು ರಾಜ್ಯ ಗೃಹ ಸಚಿವ ಎಂ.ಬಿ ಪಾಟೀಲ ಬಹುವಾಗಿ ಶ್ಲಾಘಿಸಿದ್ದಾರೆ. ಅಂತೆಯೇ ನಾವೂ ಈ ಮಾತೃಪ್ರೇಮ ಮೆರೆದ ಮಾನವೀಯ ಮಿಡಿತವುಳ್ಳ ಈ ಪೊಲೀಸಮ್ಮರಿಗೆ ಬಿಗ್ ಸೆಲ್ಯೂಟ್ ಹೊಡೆಯಲೇಬೇಕಲ್ಲವೇ.