ಯರಗಟ್ಟಿ 04 : ನನ್ನ ಮತ ಕ್ಷೇತ್ರದಲ್ಲಿ ಬರುವ ಎಲ್ಲಾ ರೀತಿಯ ಮೂಲಭೂತ ಅವಶ್ಯಕತೆಗಳನ್ನು ಪೂರೈಸಲು ನಾನು ಸದಾ ಸಿದ್ಧನಿದ್ದೇನೆ. ಪ್ರತಿಯೊಂದು ಕಾಮಗಾರಿಗಳು ಗುಣಮಟ್ಟದಿಂದ ಕೂಡಿರಬೇಕು ಎಂದು ಶಾಸಕ ವಿಶ್ವಾಸ ವೈದ್ಯ ಗುತ್ತಿಗೆದಾರರಿಗೆ ಸೂಚನೆ ನೀಡಿದರು.
ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿ, ಈವರೆಗೂ ಯರಗಟ್ಟಿ ಪಟ್ಟಣದಲ್ಲಿ ಅಗ್ನಿಶಾಮಕ ಠಾಣೆಯು ಬಹು ದಿನಗಳಿಂದ ಬೇಡಿಕೆಯಲ್ಲಿತ್ತು ಇಂದು ರಾಜ್ಯ ಸರ್ಕಾರ ಮಂಜೂರು ಮಾಡಿದೆ ಲೋಕೋಪಯೋಗಿ ಇಲಾಖೆ ಅಂದಾಜು 3 ಕೋಟಿ ವೆಚ್ಚದಲ್ಲಿ ನೂತನ ಕಟ್ಟಡದ ಕಾಮಗಾರಿ ಪ್ರಾರಂಭವಾಗುತ್ತಿದ್ದು, ಈ ಕಾಮಗಾರಿಯು ಅಚ್ಚುಕಟ್ಟಾಗಿ ನಡೆಯಬೇಕು. ಗುಣಮಟ್ಟ ಕಾಯ್ದುಕೊಳ್ಳುವಲ್ಲಿ ಯಾವುದೇ ರೀತಿಯ ರಾಜಿ ಇಲ್ಲ, ಕಟ್ಟಡ ಕಾಮಗಾರಿಯು ಎಲ್ಲಾ ಮೂಲಭೂತ ಸೌಕರ್ಯಗಳನ್ನು ಹೊಂದಿ ಸುಸಜ್ಜಿತವಾದ ಕಟ್ಟಡ ನಿರ್ಮಾಣ ಮಾಡಿ ಎಂದು ಗುತ್ತಿಗೆದಾರರಿಗೆ ಶಾಸಕ ವಿಶ್ವಾಸ ವೈದ್ಯ ಸೂಚನೆ ನೀಡಿದರು.ಈ ಸಂದರ್ಭದಲ್ಲಿ ಜಿಲ್ಲಾ ಅಗ್ನಿಶಾಮಕ ಠಾಣೆಯ ಅಧಿಕಾರಿ ಮಂಜುಶಶಿಧರ ನೀಲಗಾರ, ಸವದತ್ತಿ ಅಗ್ನಿಶಾಮಕ ಠಾಣೆಯ ಅಧಿಕಾರಿ ಸುನೀಲಕುಮಾರ ತೆಲಗಾರ, ಪ್ರಮುಖ ಅಗ್ನಿಶಾಮಕರಾದ ಉಮೇಶ ಅಂಗಡಿ, ನವೀನ ಪವಾಡಿ, ವಿಠ್ಠಲ ಗುಡನ್ನವರ, ಮುಬಾರಕ ಹಂಚಿನಮನಿ, ಮಾಜಿ ಜಿ. ಪಂ. ಸದಸ್ಯ ಅಜೀತಕುಮಾರ ದೇಸಾಯಿ, ಪ. ಪಂ. ಸದ್ಯರಾದ ಸಲೀಮವಬೇಗ ಜಮಾದಾರ, ನಿಖಿಲ ಪಾಟೀಲ, ಶಿವಾನಂದ ಕರಿಗೊಣ್ಣವರ, ರಾಮನಗೌಡ ಪಾಟೀಲ, ಫಾರುಕ್ ಅತ್ತಾರ, ಕೆಎಂ.ಎಫ್. ನಿರ್ದೇಶಕ ಶಂಕರ ಇಟ್ನಾಳ, ಪ್ರಕಾಶ ವಾಲಿ, ಮಾಡಮಗೇರಿ ಗ್ರಾ. ಪಂ. ಅಧ್ಯಕ್ಷ ಲಕ್ಕಪ್ಪ ಸನ್ನಿಂಗನವರ, ಎಪಿಎಂಸಿ ಅಧ್ಯಕ್ಷ ನೀಲಕಂಠ ಸಿದ್ದಬಸನವರ, ಗಿಡ್ಡಪ್ಪ ಖಂಡ್ರಿ, ಸುರೇಶ ಭಜಂತ್ರಿ, ಗೋಪಾಲ ದಳವಾಯಿ, ಫಕ್ಕೀರ್ಪ ಕಿಲಾರಿ, ಬಸವರಾಜ ಸತ್ತೂರಿ, ಪ್ರಕಾಶ ಸುಣದೋಳಿ, ಸೇರಿದಂತೆ ಇನ್ನೂ ಅನೇಕ ಮುಖಂಡರು ಉಪಸ್ಥಿತರಿದ್ದರು.