ಗ್ರಾಮೀಣ ಸಂಪರ್ಕ ರಸ್ತೆ ಸುಧಾರಣೆ ಕಾಮಗಾರಿಗೆ ಭೂಮಿಪೂಜೆ

Bhumi Puja for rural connectivity road improvement works

ಮಾಂಜರಿ 13: ಚಿಕ್ಕೋಡಿ ತಾಲೂಕಿನ ಸಂಕೇಶ್ವರ್ ಜೇವರ್ಗಿ ರಸ್ತೆಯ ನಿಂದ ಕಾಡಪುರ್ ಗ್ರಾಮದವರೆಗೆ ರಸ್ತೆಯಿಂದ ಮಾಳಿ, ಕೋಳಿ  ತೋಟಗಳ ಮಾರ್ಗವಾಗಿ ಕಾಡಾಪುರ ಜೋಡ ರಸ್ತೆಯವರೆಗೆ ರಸ್ತೆ ನಿರ್ಮಾಣವಾಗಲಿರುವ 1 ಕೋಟಿ 50 ಲಕ್ಷ ರೂ ವೆಚ್ಚದ ರಸ್ತೆ ಕಾಮಗಾರಿಗೆ ಅಂಕಲಿ ಗ್ರಾಮದ ಸಿದ್ದೇಶ್ವರ ಗ್ರೂಪ್ ಅಧ್ಯಕ್ಷ ಹಾಗೂ ಸಿದ್ದೇಶ್ವರ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಸ್ಥೆಯ ಸಂಸ್ಥಾಪಕ ಗ್ರಾಮದ ಮುಖಂಡ ರಣಜಿತ್ ಶಿರಸೇಟ ನೇತೃತ್ವದಲ್ಲಿ ಭೂಮಿ ಪೂಜೆ ನೆರವೇರಿಸಲಾಯಿತು. 

ರಣಜಿತ್ ಶಿರಸೇಟ ಅವರು ಮಾತನಾಡಿ ಕರ್ನಾಟಕ ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿ ಹಾಗೂ ವಿಧಾನ ಪರಿಷತ್ ಸದಸ್ಯರಾದ ಪ್ರಕಾಶ ಹುಕ್ಕೇರಿ ಮತ್ತು ಶಾಸಕರಾದ ಗಣೇಶ ಹುಕ್ಕೇರಿ ಅವರ ಪ್ರಯತ್ನದಿಂದ ಗ್ರಾಮಗಳ ರಸ್ತೆ ಸುಧಾರಣೆಗಾಗಿ ಒಟ್ಟು 1.50 ಕೋಟಿ ರೂ. ಅನುದಾನ ಮಂಜೂರಾಗಿದ್ದು, ಗ್ರಾಮದ ಅಭಿವೃದ್ಧಿಗೆ ಸಹಕಾರಿಯಾಗಲಿದೆ ಎಂದು ಹೇಳಿದರು. 

ಕೆರೂರ್ ಗ್ರಾಮದ ಮುಖಂಡರಾದ ಅಪ್ಪಾಸಾಹೇಬ ಸನದಿ  ಮಾತನಾಡಿ ಬಹುದಿನಗಳ ಬೇಡಿಕೆಗೆ ಸ್ಪಂದಿಸಿ ರಸ್ತೆ ನಿರ್ಮಾಣಕ್ಕೆ 50 ಲಕ್ಷ ರೂ. ಅನುದಾನ ಮಾಡಿರುವುದು ನಮ್ಮೆಲ್ಲರಿಗೂ ಸಂತಸದ ವಿಷಯ. ಈ ರಸ್ತೆಯು ಕೆರೂರ, ಜೋಡಕುರಳಿ ಹಾಗೂ ಉಮರಾಣಿ ರಾಯಬಾಗ್ ಮತ್ತು ಅಂಕಲಿ ಗ್ರಾಮದ ರೈತರಿಗೆ ಕೃಷಿ ಉತ್ಪನ್ನಗಳ ಸಾಗಣೆಗೆ ಬಹುಮುಖ್ಯವಾಗಿ ಉಪಯೋಗವಾಗಲಿದೆ ಎಂದು ಹೇಳಿದರು. 

ತಾಲೂಕಾ ಪಂಚಾಯತ್ ಸದಸ್ಯ ಪ್ರಕಾಶ ರಾಚನ ಮೊದಲು ಮಳೆಗಾಲದಲ್ಲಿ ಹದಗೆಟ್ಟ ರಸ್ತೆಯಿಂ ಮಾತನಾಡಿ ಭಾಗದ ನಿವಾಸಿಗಳು ತುಂಬಾ ಕಷ್ಟ ಅನುಭವಿಸಬೇಕಾ ಈ ರಸ್ತೆ ನಿರ್ಮಾಣದಿಂದ ತೋಟಪಟ್ಟಿ ಪ್ರದೇಶದಲ್ಲಿ ನೆಲೆಸಿರುವ ರೈತರು, ಕೆಲಸಗಾರರು ಹಾಗೂ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ ಎಂದು ಹೇಳಿದರು.  

ಭರತ್ ಕೊಳೇಕರ್, ಶರದ್ ಕೊಳೇಕರ್, ಶಿವಾಜಿ ಕೋಟೆವಾಲೆ, ನಂದುಕುಮಾರ್ ದರಬಾರೆ, ಸಂಜಯ್ ಸನದಿ, ಅಥರ್ವ ಶಿತೋಳೆ, ಸಂತೋಷ್ ಮಠದ, ರಾಜು ಪಾಟೀಲ್, ವಿಕಾಸ್ ಮನೆ, ರವೀಂದ್ರ ಬಡಿಗೇರ್, ಭಗವದ್ ಪಾಟೀಲ್, ಮಹಾದೇವ ಮನೆ ಹಾಗೂ ಅಂಕಲಿ ಸಿದ್ದಾಪುರವಾಡಿ ಕೆರೂರ್ ಕಾಡಪುರ್ ಗ್ರಾಮದ ಗ್ರಾಮಸ್ಥರು ಹಾಜರಿದ್ದರು.