ಬೆಳಗುಂದಿ - ಬಿಜಗರಣಿ ರಸ್ತೆ ಕಾಮಗಾರಿಗೆ ಭೂಮಿ ಪೂಜೆ
ಬೆಳಗಾವಿ 01 : ಬೆಳಗಾವಿ ಗ್ರಾಮೀಣ ಕ್ಷೇತ್ರದ ಬೆಳಗುಂದಿ ಗ್ರಾಮದ ಪ್ರೌಢಶಾಲೆಯಿಂದ ಬಿಜಗರಣಿ ಕ್ರಾಸ್ ವರೆಗಿನ ರಸ್ತೆ ನಿರ್ಮಾಣದ ಕಾಮಗಾರಿಗೆ ಯುವ ಕಾಂಗ್ರೆಸ್ ಮುಖಂಡ ಮೃಣಾಲ ಹೆಬ್ಬಾಳಕರ್ ಸ್ಥಳೀಯ ಮುಖಂಡರೊಂದಿಗೆ ಸೇರಿ ಭೂಮಿ ಪೂಜೆ ನೆರವೇರಿಸಿದರು.ಕ್ಷೇತ್ರದ ಶಾಸಕರು ಹಾಗೂ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ಅವರ ವಿಶೇಷ ಪ್ರಯತ್ನದಿಂದ ರಸ್ತೆ ನಿರ್ಮಾಣದ ಕಾಮಗಾರಿಗೆ ಸುಮಾರು 23 ಲಕ್ಷ ರೂ,ಗಳು ಬಿಡುಗಡೆಯಾಗಿದೆ. ಸ್ಥಳೀಯರ ಸಲಹೆ, ಸೂಚನೆ ಪಡೆದು ಆದಷ್ಟು ಬೇಗ ರಸ್ತೆ ಕಾಮಗಾರಿ ಪೂರ್ಣಗೊಳಿಸುವಂತೆ ಗುತ್ತಿಗೆದಾರರಿಗೆ ಸೂಚನೆ ನೀಡಲಾಯಿತು.ಈ ವೇಳೆ ಮನೋಹರ್ ಬೆಳಗಾಂವ್ಕರ್, ರಹಿಮಾನ್ ತಹಶಿಲ್ದಾರ, ದಯಾನಂದ ಗಾವಡಾ, ಸುರೇಶ ಕೀಣೆಕರ್, ಪ್ರಹ್ಲಾದ ಚಿರಮುರ್ಕರ್, ಯಲ್ಲಪ್ಪ ಶಹಾಪೂರ್, ಮೆಹಬೂಬ್ ಮುಜಾವರ್, ಹೇಮಾ ಹದಗಲ್, ನಿಂಗೂಲಿ ಚೌಹಾನ್, ಶಿವಾಜಿ ಮಂಡೋಳ್ಕರ್, ನಾರಾಯಣ ಚೌಹಾನ್, ರಾಜು ಮುಜಾವರ್, ಮಹೇಶ ಪಾಟೀಲ, ಸಂತೋಷ ಕಾಂಬಳೆ, ಲಕ್ಷ್ಮಣ ಗಾವಡಾ, ಲಕ್ಷ್ಮಣ ಪಾಟೀಲ, ಪರಶುರಾಮ ಹದಗಲ್, ಲಕ್ಷ್ಮಣ ಮುಗಟಕರ್, ಹನಮಂತ ಗೋಡ್ಸೆ, ಮಹಾದೇವ್ ಪಾಟೀಲ ಮುಂತಾದವರು ಉಪಸ್ಥಿತರಿದ್ದರು.