ಧಾರವಾಡ 27: ತಾಲೂಕಿನ ಅಮ್ಮಿನಬಾವಿ ಗ್ರಾಮದ ಸ್ವಾತಂತ್ರ್ಯಪೂರ್ವದ ಪಾರಂಪರಿಕ ದೇಶಗತಿ ಘರಾಣೆಯ ಯಜಮಾನ ಮತ್ತು ದಿಗಂಬರ ಜೈನ್ ಸಮಾಜದ ಮುಖಂಡ ಭುಜಬಲಿ ಬಲ್ಲಾಳರಾವ ದೇಸಾಯಿ (95) ಬುಧವಾರ ನಿಧನರಾದರು.
ಮೃತರು ಪತ್ನಿ, 5 ಜನ ಪುತ್ರಿಯರು, ಮೊಮ್ಮಕ್ಕಳು ಸೇರಿದಂತೆ ಅಪಾರ ಬಂಧಗಳನ್ನು ಅಗಲಿದ್ದಾರೆ. ಬುಧವಾರ ಅಮ್ಮಿನಬಾವಿಯಲ್ಲಿ ಗ್ರಾಮ ಪರಂಪರೆಯ ಸಕಲ ಗೌರವಗಳೊಂದಿಗೆ ಅಂತ್ಯಕ್ರಿಯೆ ನೆರವೇರಿತು.
ಶೋಕ : ಅಮ್ಮಿನಬಾವಿ ಪಂಚಗೃಹ ಹಿರೇಮಠದ ಹಿರಿಯ ಶ್ರೀಗಳಾದ ಶಾಂತಲಿಂಗ ಶಿವಾಚಾರ್ಯರು ಹಾಗೂ ಕಿರಿಯ ಶ್ರೀಗಳಾದ ಅಭಿನವ ಶಾಂತಲಿಂಗ ಶಿವಾಚಾರ್ಯರು, ವರೂರು ನವಗ್ರಹ ತೀರ್ಥದ ಶ್ರೀಧರ್ಮಸೇನ ಭಟ್ಟಾರಕ ಪಟ್ಟದಾರ್ಯ ಸ್ವಾಮೀಜಿ, ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಶಾಸಕ ವಿನಯ ಕುಲಕರ್ಣಿ, ಮಾಜಿ ಶಾಸಕರುಗಳಾದ ಎ.ಬಿ. ದೇಸಾಯಿ, ಅಮೃತ ದೇಸಾಯಿ, ಸೀಮಾ ಮಸೂತಿ, ಜೈನ್ ಸಮಾಜವೂ ಸೇರಿದಂತೆ ವಿವಿಧ ಕ್ಷೇತ್ರಗಳ ಅನೇಕ ಗಣ್ಯರು ತೀವ್ರ ಶೋಕವ್ಯಕ್ತಪಡಿಸಿದ್ದಾರೆ.