ಪೋರ್ಟ್ ಆಫ್ ಸ್ಪೈನ್, ಆ 1 ವೆಸ್ಟ್ ಇಂಡೀಸ್ ವಿರುದ್ಧ ಎರಡನೇ ಏಕದಿನ ಪಂದ್ಯದಲ್ಲಿ ಭಾರತ 59 ರನ್(ಡಿಎಲ್ಎಸ್ ನಿಯಮ)ಗಳಿಂದ ಜಯ ಸಾಧಿಸದ ಬಳಿಕ ಮಾತನಾಡಿದ ವೇಗಿ ಭುವನೇಶ್ವರ್ ಕುಮಾರ್ ನಾಯಕ ವಿರಾಟ್ ಕೊಹ್ಲಿ ಅವರನ್ನು ಶ್ಲಾಘಿಸಿದರು. ಭಾನುವಾರ ನಡೆದ ಎರಡನೇ ಏಕದಿನ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಭಾರತ ನಿಗದಿತ 50 ಓವರ್ಗಳಿಗೆ ಏಳು ವಿಕೆಟ್ ನಷ್ಟಕ್ಕೆ 279 ರನ್ ಗಳಿಸಿತು. ಮೊದಲ ಇನಿಂಗ್ಸ್ ಬಳಿಕ ಪಂದ್ಯಕ್ಕೆ ಮಳೆ ಅಡ್ಡಿ ಉಂಟು ಮಾಡಿದ್ದರಿಂದ ಡಿಎಲ್ಎಸ್ ನಿಮಯದ ಅನುಸಾರ ವೆಸ್ಟ್ ಇಂಡೀಸ್ಗೆ 46 ಓವರ್ಗಳಿಗೆ 270 ರನ್ ಗುರಿ ನೀಡಲಾಯಿತು. ಗುರಿ ಹಿಂಬಾಲಿಸಿದ ವಿಂಡೀಸ್ 42 ಓವರ್ಗಳಿಗೆ 210 ರನ್ಗಳಿಗೆ ತನ್ನೆಲ್ಲ ವಿಕೆಟ್ ಕಳೆದುಕೊಂಡು 59 ರನ್ಗಳಿಂದ ಸೋಲು ಒಪ್ಪಿಕೊಂಡಿತು. ಪಂದ್ಯದಲ್ಲಿ ನಾಲ್ಕು ವಿಕೆಟ್ ಕಬಳಿಸಿದ ಭುವನೇಶ್ವರ್ ಮಾತನಾಡಿ, " ಪಂದ್ಯದಲ್ಲಿ ವಿರಾಟ್ಕೊಹ್ಲಿ ಅವರ ಮುಖಭಾವ ಗಮನಿಸಿದರೆ, ಅವರಿಗೆ ಕೆಟ್ಟದಾಗಿ ಬಯಸಿದ ಶತಕ ಎಂದು ಗಮನಿಸುತ್ತದೆ. ಅಂದರೆ, ಅವರು ಲಯದಿಂದ ಹೊರಗೆ ಇದ್ದಾರೆಂದು ಅಲ್ಲ, ಅವರು ವಿಶ್ವಕಪ್ ಟೂರ್ನಿಯಲ್ಲಿ 70 ಅಥವಾ 80 ಆಸುಪಾಸಿನಲ್ಲಿ ವಿಕೆಟ್ ಒಪ್ಪಿಸುತ್ತಿದ್ದರು. ಆದರೆ, ಇಲ್ಲಿನ ವಿಕೆಟ್ ಬ್ಯಾಟಿಂಗ್ ಮಾಡಲು ಸುಲಭವಾಗಿರಲಿಲ್ಲ" ಎಂದು ಹೇಳಿದರು. ಭುವನೇಶ್ವರ್ ಕುಮಾರ್ ಅವರು ಕ್ರಿಸ್ ಗೇಲ್, ನಿಕೋಲಸ್ ಪೂರನ್, ರೋಸ್ಟನ್ ಚೇಸ್ ಹಾಗೂ ಕೇಮರ್ ರೋಚ್ ಅವರ ವಿಕೆಟ್ಗಳನ್ನು ಕಿತ್ತು ಪಂದ್ಯದ ಗೆಲುವಿಗೆ ಪ್ರಧಾನ ಪಾತ್ರ ವಹಿಸಿದರು. ಒಂದು ಹಂತದಲ್ಲಿ ವೆಸ್ಟ್ ಇಂಡೀಸ್ 4 ವಿಕೆಟ್ಗೆ 179 ರನ್ಗಳಿಸಿತ್ತು. ಈ ವೇಳೆ ವಿರಾಟ್ ಕೊಹ್ಲಿ ಭುವನೇಶ್ವರ್ ಕುಮಾರ್ ಮೊರೆ ಹೋದರು. ಇದನ್ನು ಸದುಪಯೋಗಪಡಿಸಿಕೊಂಡ ಭುವಿ, ಪೂರನ್ ಹಾಗೂ ರೋಸ್ಟನ್ ಚೇಸ್ ಅವರ ವಿಕೆಟ್ಗಳನ್ನು ಕಬಳಿಸಿದ್ದರು. "ಪಂದ್ಯದ ಫಲಿತಾಂಶದ ಬಗ್ಗೆ ನಾನು ಯೋಚನೆ ಮಾಡಿರಲಿಲ್ಲ. ಒಂದು ಅಥವಾ ಎರಡು ವಿಕೆಟ್ ಪಡೆದರೆ ಸಾಕು ಪಂದ್ಯದ ಹಿಡಿತ ನಮ್ಮ ಕೈಗೆ ಸಿಗಲಿದೆ ಎಂದು ಅರಿತಿದ್ದೆ. ಈ ವೇಳೆ ಹೆಚ್ಚು ಡಾಟ್ ಹಾಗೂ ನಿಖರ ಎಸೆತಗಳನ್ನು ಎಸೆಯಲು ಮುಂದಾದೆ" ಎಂದರು. ಪೂರನ್ ವಿಕೆಟ್ ಮುಖ್ಯವಾಗಿರಲಿಲ್ಲ. ರೋಸ್ಟನ್ ಚೇಸ್ ಅವರ ವಿಕೆಟ್ ಅತ್ಯಂತ ಪ್ರಮುಖ ವಿಕೆಟ್ ಆಗಿತ್ತು. ಏಕೆಂದರೆ, ಅವರು ಸ್ಥಿರ ಪ್ರದರ್ಶನ ತೋರುವ ಆಟಗಾರ. ಅವರೊಬ್ಬರು ಕ್ರಿಸ್ ಬಳಿ ನಿಂತರೆ ಪಂದ್ಯದ ದಿಕ್ಕನ್ನೆ ಬದಲಿಸಬಲ್ಲರು ಎಂದು ಭುವಿ ಅಭಿಪ್ರಾಯಪಟ್ಟರು.