ವಿಜಯಪುರ, ಡಿ. 09: ಅಸಾಧ್ಯವಾದ ಕೆಲಸಗಳನ್ನು ಸಾಧ್ಯ ಮಾಡುವ ಮೂಲಕ ಸಚಿವ ಎಂ. ಬಿ. ಪಾಟೀಲ ಅವರು ಸವಾಂರ್ಗೀಣ ಅಭಿವೃದ್ಧಿಗೆ ಕ್ರಮ ಕೈಗೊಂಡಿದ್ದಾರೆ ಎಂದು ವಿಧಾನ ಪರಿಷತ ಶಾಸಕ ಸುನೀಲಗೌಡ ಪಾಟೀಲ ಹೇಳಿದ್ದಾರೆ.
ಬಬಲೇಶ್ವರ ತಾಲೂಕಿನ ಕಾಖಂಡಕಿ ಬಳಿ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆಯ ವತಿಯಿಂದ ಅಂದಾಜು ರೂ. 160 ಲಕ್ಷ ವೆಚ್ಚದ ಹೊಸ ಜಿನುಗು ಕೆರೆ(ಸೈಟ್- 3) ನಿರ್ಮಾಣ ಕಾಮಗಾರಿಗೆ ಇಂದು ಸೋಮವಾರ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.
ಆಲಮಟ್ಟಿ ಜಲಾಷಯದ ಎತ್ತರ ಹೆಚ್ಚಿದ ನಂತರ ಜಿಲ್ಲೆಗೆ ಮತ್ತಷ್ಟು ನೀರು ಹಂಚಿಕೆಯಾಗಲಿದ್ದು, ನೀರಾವರಿ ಕ್ಷೇತ್ರವೂ ವಿಸ್ತರಣೆಯಾಗಲಿದೆ. ನೀರಾವರಿ, ರಸ್ತೆ, ಗುಣಮಟ್ಟದ ವಿದ್ಯುತ್ ಪೂರೈಕೆ, ಶಿಕ್ಷಣ ಕ್ಶೇತ್ರದ ಸುಧಾರಣೆ ಮೂಲಕ ಎಂ. ಬಿ. ಪಾಟೀಲರು ಸವಾಂರ್ಗೀಣ ಅಭಿವೃದ್ಧಿಗೆ ಒತ್ತು ನೀಡುತ್ತಿದ್ದಾರೆ. ಮುಂಬರುವ ದಿನಗಳಲ್ಲಿ ಜಿಲ್ಲೆಯ ಜನರ ಜೀವನಮಟ್ಟ ಮತ್ತಷ್ಟು ಸುಧಾರಿಸಲಿದ್ದು, ರೈತರು ಆರ್ಥಿಕವಾಗಿ ಹೆಚ್ಚು ಸದೃಢರಾಗಲಿದ್ದಾರೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮುಖಂಡರಾದ ರಾಮನಗೌಡ ಪಾಟೀಲ, ಅಪ್ಪುಗೌಡ ಪಾಟೀಲ, ಮಹೇಶ ಗೌಡಪ್ಪಗೋಳ, ಅಲ್ಲಿಸಾಬ ಖಡಕೆ, ಪ್ರಕಾಶ ಹೂಗಾರಕರ, ಸಂಜು ಕಾಖಂಡಕಿ, ಸಂಕುಗೌಡ ಪಾಟೀಲ, ಚಂದ್ರಶೇಖರ ಸೀತಿಮನಿ, ಮಲ್ಲಿಕಾರ್ಜುನ ಪರಸನ್ನವರ, ಮಲ್ಲು ಹಿರೇಕುರಬರ, ಸುಖದೇವ ಯಕ್ಕುಂಡಿ, ಚಂದು ಸಿದರೆಡ್ಡಿ. ಗ್ರಾ. ಪಂ. ಕಾರ್ಯದರ್ಶಿ ರಫೀಕ ವಾಲಿಕಾರ, ಗ್ರಾಮದ ಹಿರಿಯರು, ಯುವಕರು ಉಪಸ್ತಿತರಿದ್ದರು.