ಸಿ.ಸಿ ರಸ್ತೆಗಳ ನಿರ್ಮಾಣಕ್ಕೆ ಭೂಮಿ ಪೂಜೆ

Bhoomi Puja for construction of CC roads

ದೇವರಹಿಪ್ಪರಗಿ 04: ರೈತರು, ಯುವಕರು ಸೇರಿದಂತೆ ಮತಕ್ಷೆ?ತ್ರದ ವ್ಯಾಪ್ತಿಯ ಸರ್ವ ಜನಾಂಗದ ಮತ್ತು ಕ್ಷೆ?ತ್ರದ ಸಮಗ್ರ ಅಭಿವೃದ್ದಿಯೇ ಶಾಸಕರಾದ ರಾಜುಗೌಡ ಪಾಟೀಲ ಕುದುರಿಸಾಲವಾಡಗಿ ಅವರ ಕನಸಾಗಿದೆ. ಆ ಗುರಿಯೊಂದಿಗೆ ಶಾಸಕರು ಕೆಲಸ ಮಾಡುತ್ತಿದ್ದಾರೆ ಎಂದು ಶಾಸಕರ ಸಹೋದರರಾದ ಸಚಿನಗೌಡ ಪಾಟೀಲ ಕುದುರಿಸಾಲವಾಡಗಿ ಹೇಳಿದರು.

ತಾಲೂಕಿನ ಚಿಕ್ಕರೂಗಿ, ಸಾತಿಹಾಳ ಹಾಗೂ ಸಾತಿಹಾಳ ತಾಂಡಾ ಗ್ರಾಮದಲ್ಲಿ ಮಂಗಳವಾರದಂದು ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಪ್ರಗತಿ ಕಾಲೋನಿಗಳಲ್ಲಿ ಸಿ.ಸಿ. ರಸ್ತೆಗಳ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಅವರು,ಶಾಸಕರು ಅಧಿವೇಶನದಲ್ಲಿ ಭಾಗವಹಿಸಿದ್ದಾರೆ, ಅಭಿವೃದ್ಧಿ ಕಾಮಗಾರಿಗಳಿಗೆ ತೊಂದರೆ ಆಗಬಾರದು ಎಂದು ಅವರ  ಸೂಚನೆ ಮೇರೆಗೆ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸರ್ವಸದಸ್ಯರ ಸಮ್ಮುಖದಲ್ಲಿ ಚಾಲನೆ ನೀಡಲಾಯಿತು.ಶಾಸಕರು ರಸ್ತೆ,ಸಿ.ಸಿ ರಸ್ತೆ ಸೇರಿದಂತೆ ಮೂಲಭೂತ ಸೌಕರ್ಯಗಳಾದ ಕುಡಿಯುವ ನೀರು, ಎಸ್ಸಿ, ಎಸ್ಟಿ ಹಾಗೂ ಅಲ್ಪಸಂಖ್ಯಾತರ ಕಾಲೋನಿಗಳಲ್ಲಿ ಸಿ.ಸಿ.ರಸ್ತೆ, ಕೆರೆಗಳಿಗೆ ನೀರು ತುಂಬಿಸುವ, ಗ್ರಾಮೀಣ ನೈರ್ಮಲ್ಯ, ದೇವಸ್ಥಾನಗಳಿಗೆ ಅನುದಾನ, ಶಾಲಾ ಕಟ್ಟಡಗಳ ನಿರ್ಮಾಣ ಹೀಗೆ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡುತ್ತಿದ್ದು ಗ್ರಾಮಸ್ಥರು ಗುಣಮಟ್ಟದ ಕಾಮಗಾರಿಗೆ ಸಹಕಾರ ನೀಡಬೇಕು ಹಾಗೂ ಕಾಮಗಾರಿಗಳನ್ನು ಗುಣಮಟ್ಟತೆಯಿಂದ ಮಾಡಬೇಕೆಂದು ಅಧಿಕಾರಿಗಳಿಗೆ ಹಾಗೂ ಗುತ್ತಿಗೆದಾರರಿಗೆ ಶಾಸಕರು ಸೂಚನೆ ನೀಡಿದ್ದಾರೆ,ಮುಂದಿನ ದಿನಗಳಲ್ಲಿ ಮತಕ್ಷೆ?ತ್ರ ಮಾದರಿಯಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.ನಂತರ ಗ್ರಾಮದ ಮುಖಂಡರಿಂದ ಸನ್ಮಾನಿಸಿ, ಗೌರವಿಸಿದರು ಹಾಗೂ ಗ್ರಾಮದ ಬೇಡಿಕೆಗಳ ಮನವಿ ಪತ್ರ ಸಲ್ಲಿಸಿದರು.ಕಾಮಗಾರಿಗಳ ಕುರಿತು ಕೆ.ಆರಿ​‍್ಡ.ಎಲ್ ಇಲಾಖೆಯ ಎಇಇ ಗಳಾದ ಆನಂದ,ರಾಜಶೇಖರ ಅವರು ಮಾಹಿತಿ ನೀಡಿದರು.  

ಇದೇ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ  ಅಧ್ಯಕ್ಷರಾದ ಸಿದಗೊಂಡಪ್ಪಗೌಡ ಪಾಟೀಲ, ಉಪಾಧ್ಯಕ್ಷರ ಪ್ರತಿನಿಧಿ ಅಶೋಕ ರತ್ನಾಕರ, ಸದಸ್ಯರುಗಳಾದ ದೇವಾನಂದ ಕಣ್ಣಿ, ಹಣಮಂತ ಬಿರಾದಾರ, ಶಶಿಕಾಂತ ಸಾಹುಕಾರ ಚಂಡಕಿ, ಮುಖಂಡರುಗಳಾದ ರಾಜು ಸಾಹುಕಾರ ಚಂಡಕಿ, ಶ್ರೀಶೈಲ ಮುಳಜಿ,  ಸಂಜೀವ ಚಂಡಕಿ, ಕುಮಾರಗೌಡ ಬಿರಾದಾರ, ವೀರೇಶ ಕುದರಿ, ಗುರುರಾಜ ಆಕಳವಾಡಿ, ಮಾಂತಯ್ಯ ಹಿರೇಮಠ, ದಾದಾಗೌಡ ಪಾಟೀಲ, ಅರವಿಂದ ನಾಯ್ಕೋಡಿ, ಸೋಮು ಜಮಾದಾರ, ರಮೇಶ ಈಶ್ವರ​‍್ಪಗೋಳ, ಅರವಿಂದ ನಾಯ್ಕೋಡಿ ಸೇರಿದಂತೆ ಗ್ರಾಮದ ಪ್ರಮುಖರು, ಗಣ್ಯರು ಹಾಗೂ ಜೆಡಿಎಸ್ ಕಾರ್ಯಕರ್ತರು ಉಪಸ್ಥಿತರಿದ್ದರು.