ಸಿಂದಗಿ 18: ಕಾಲೇಜಿನಲ್ಲಿ ಕಟ್ಟಡಗಳ ಕೊರತೆಯಿಂದ ಗ್ರಾಮೀಣ ಮಕ್ಕಳು ಉನ್ನತ ಶಿಕ್ಷಣದಿಂದ ವಂಚಿತವಾಗಬಾರದು ಎಂದು ಇನ್ನೂ ಹೆಚ್ಚುವರಿ ಕಟ್ಟಡ ಕಾಮಗಾರಿಗೆ ಅನುದಾನ ತರಲಾಗಿದೆ ಕಾರಣ ಸರಕಾರಿ ಕಾಲೇಜಿನಲ್ಲಿ ಓದುವ ಪ್ರತಿಯೊಂದು ವಿದ್ಯಾರ್ಥಿಗಳು ಜ್ಞಾನಾರ್ಜನೆ ಪಡೆದುಕೊಂಡು ಉತ್ತಮ ಸಾಧನೆ ಮಾಡಬೇಕು ಎಂದು ಶಾಸಕ ಅಶೋಕ ಮನಗೂಳಿ ಕರೆ ನೀಡಿದರು.
ಪಟ್ಟಣದ ಪ್ರಥಮ ಧರ್ಜೆ ಕಾಲೇಜಿನಲ್ಲಿ ಎಸ್‌ಡಿ ಪಿ ಯೋಜನೆಯಡಿ ರೂ 1 ಕೋಟಿ ಅನುದಾನದಲ್ಲಿ ಕರ್ನಾಟಕ ಗೃಹ ಮಂಡಳಿಯವರು ಹೆಚ್ಚುವರಿ ಕೊಠಡಿಗಳ ಕಟ್ಟಡ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿ, ಕಾಲೇಜಿನ ಸುತ್ತಲು ಕಂಪೌಂಡ ನಿರ್ಮಿಸುವುದು ಅವಶ್ಯಕವಿದ್ದು ಶೀಘ್ರದಲ್ಲಿಯೇ ಅನುದಾನ ಬಿಡುಗಡೆಗೆ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ ಇಲಾಖೆಯಿಂದ ಬಿಡುಗಡೆಗೊಳಿಸುವುದಾಗಿ ಭರವಸೆ ನಿಡಿದರು.
ಈ ಸಂದರ್ಭದಲ್ಲಿ ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರಾದ ಸಿದ್ದನಗೌಡ ಪಾಟೀಲ, ನಿವೃತ್ತ ಉಪಪ್ರಾಚಾರ್ಯ ಪ್ರಭುಲಿಂಗ ಲೋಣೀ, ಪ್ರತಿಭಾ ಚಳ್ಳಗಿ, ಪ್ರಕಾಶ ನಿಗಡಿ, ಬಸವರಾಜ ಅಂಬಲಗಿ, ಶಿವಾನಂದ ಗಣಿಹಾರ, ಕೆಡಿಪಿ ಸದಸ್ಯರಾದ ನೂರಹ್ಮದ ಅತ್ತಾರ, ಕೆಎಚ್ಬಿ ಅಭಿಯಂತ ಶಾಧಿಕ್, ಗುತ್ತಿಗೆದಾರ ವೆಂಕಟೇಶ, ಕಾಲೇಜಿನ ಪ್ರಾಚಾರ್ಯ ಎಸ್ ಎಸ್ ಹಳೇಮನಿ, ಸಿಬ್ಬಂದಿವರ್ಗ ಹಾಜರಿದ್ದರು.