ಭೂಮಿ ಪೂಜಾ ಸಮಾರಂಭ

ಲೋಕದರ್ಶನವರದಿ 

ಮಹಾಲಿಂಗಪೂರ27 :   ನಗರದಲ್ಲಿ ಕೌಜಲಗಿ ನಿಂಗಮ್ಮ ಸಾಂಸ್ಕೃತಿಕ ಭವನದ ಬಾಕಿ ಉಳಿದ ಕಾಮಗಾರಿಗೆ  ತೇರದಾಳ ಮತ ಕ್ಷೇತ್ರದ ಶಾಸಕ ಸಿದ್ದು ಸವದಿ ಚಾಲನೆ ನೀಡಿ ಮಾತನಾಡುತ್ತಾ ಗುತ್ತಿಗೆದಾರರಿಗೆ 6 ತಿಂಗಳಲ್ಲಿ  ಕೆಲಸ ಮುಗಿಸಲು ಆದೇಶ ನೀಡಿದರು.ಮತ್ತು ಪಟ್ಟಣದ ಸರಕಾರಿ ಶಾಲೆಗೆ ಕಾಂಪೌಂಡ್ ಹಾಗೂ ಗಾಂಧಿ ಕ್ರಿಡಾಂಗಣಕ್ಕೆ ಸ್ಟೇಡಿಯಂ ಮಾಡುವ ಮುಖಾಂತರ ಶಾಲೆಯ ಹಾಗೂ ಊರಿನ ಸುಂದರ ಹೆಚ್ಚಿಸಲಾಗುವುದು ಎಂದು ಭರವಸೆ ನೀಡಿದರು.  

          ಈ ಕೆಲಸವು  ಲೋಕೋಪಯೋಗಿ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ, ಉಪವಿಭಾಗ ಮುಧೋಳ ಅಡಿಯಲ್ಲಿ ನಡೆಯುತ್ತಿದೆ.  ಸಿವಿಲ್ ಸೌಂಡ್, ಅಕ್ಯಾಸ್ಟಿಕ್ ಕಾಮಗಾರಿಯ ಅಂದಾಜು ಮೊತ್ತ 2 ಕೋಟಿ 50  ಲಕ್ಷಗಳದ್ದಾಗಿದೆ. 

                 ಗಾಂಧಿ ಕ್ರಿಡಾಂಗಣಕ್ಕೆ ಸ್ಟೇಡಿಯಂ ಮಾಡುವ ಭರವಸೆಯ ಬೆನ್ನಲ್ಲೆ ನಗರದ ಕ್ರಿಕೆಟ್ ಲವರ್ ಟ್ರೋಫಿ ಅಧ್ಯಕ್ಷ ಶೇಖರ್ ಅಂಗಡಿ, ಕಾರ್ಯದಶರ್ಿ ಮೀರಾ ತಟಗಾರ, ಹಿರಿಯ ಕ್ರಿಕೆಟ್ ಆಟಗಾರರಾದ ಶ್ರೀಕಾಂತ ಮಾಗಿ, ಜಯರಾಮ್ ಶೆಟ್ಟಿ, ಹುಸೈನ್ ಚಿಕ್ಕೋಡಿ, ಪ್ರೋ.ಮಹಾದೇವ ನಿಂಬರಗಿ, ಪಾಂಡು ಸರ್, ಶಿವಶಂಕರ ಗುಜ್ಜರ,  ರವಿ ಬಿದ್ರಿ, ಮಹಮ್ಮದ ಪಾಂಡು, ಮಹಾದೇವ ಕಡಬಲ್ಲವರ, ಮಹಾದೇವ ಮೇರಾಪಟ್ಟಿ ಹಾಗೂ  ಕ್ರೀಡಾ ಪ್ರೇಮಿಗಳು .ಇದೇ ಸಂಧರ್ಭದಲ್ಲಿ ಈ ಮುಂಚಿನ ಮಾಜಿ ಸಚಿವೆ ಉಮಾಶ್ರೀ  ಕ್ರಿಡಾಂಗಣದ ತಯಾರಿಯಲ್ಲಿ ಹೆಚ್ಚಿನ ಮುತವಜರ್ಿವಹಿಸಿ ಕೆಲಸ ಮಾಡಿದ್ದಾರೆ.

   ಇನ್ನುಳಿದ ಕೆಲಸವನ್ನು ಮಾಡುವ ಭರವಸೆ ನೀಡಿರುವ ಶಾಸಕ ಸಿದ್ದು ಸವದಿಯವರನ್ನು ಅಭಿನಂದನೆ ಸಲ್ಲಿಸುವ ಮುಖಾಂತರ ಔದಾರ್ಯ ಮೆರೆದಿದ್ದಾರೆ. 

 ಈ ಸಮಾರಂಭದಲ್ಲಿ  ಗ್ರಾಮೀಣ ಘಟಕದ ಅಧ್ಯಕ್ಷ ಬಸನಗೌಡ ಪಾಟೀಲ್, ನಗರ ಘಟಕದ ಅಧ್ಯಕ್ಷ ಮಹಾಲಿಂಗ ಕುಳ್ಳೋಳ್ಳಿ, ಜಿ.ಪಂ.ಮಾಜಿ ಅಧ್ಯಕ್ಷ ಮಹಾಂತೇಶ ಹಿಟ್ಟಿನಮಠ, ಪುರಸಭೆ ಸದಸ್ಯರಾದ ಮಹಾಲಿಂಗಪ್ಪ ಕೋಳಿಗುಡ್ಡ, ಶೇಖರ್ ಅಂಗಡಿ, ಪ್ರಹ್ಲಾದ ಸಣ್ಣಕ್ಕಿ, ಚನಬಸು ಹುರಕಡ್ಲಿ, ಶಿವು ಅಂಗಡಿ, ಚನ್ನಪ್ಪ ರಾಮೋಜಿ, ರಾಜು ಚಮಕೇರಿ, ವಿರೂಪಾಕ್ಷ ಬಾಟ್, ಜಿ.ಎಸ್ಸ್.ಗೊಂಬಿ, ಮನೋಹರ ಶಿರೋಳ್, ಜಮೀರ್ ಯಕ್ಸಂಬಿ, ಶಿವಲಿಂಗ ಘಂಟಿ, ಹಣ್ಮಂತ್ ಜಮಾದಾರ್, ಸಿದ್ದಪ್ಪ ಶಿರೋಳ್, ಭೀಮಶಿ ಗೌಂಡಿ, ಶಂಕರಗೌಡ್ ಪಾಟೀಲ್, ಪ್ರಶಾಂತ್ ಮುಖೆನ್ನವರ್, ಮಹಾಲಿಂಗಪ್ಪ ಮುದ್ದಾಪೂರ್, ಬಸು ಗಿರಿಸಾಗರ ಇನ್ನೂ ಅನೇಕರು ಭಾಗವಹಿಸಿದ್ದರು.