ಚಿಕ್ಕೋಡಿ 28: ತಾಲೂಕಿನ ನವಲಿಹಾಳ ಗ್ರಾಮದ ಭೀರ್ಪ ನಿಂಗಪ್ಪ ನಸಲಾಪೂರೆ ಅವರು ಪೊಲೀಸ್ ಸಬ್ ಇನ್ಸಪೇಕ್ಟರ ಆಗಿ ಆಯ್ಕೆಗೊಂಡು ಸಾಧನೆ ಮಾಡಿದ್ದಾರೆ.
ಕಳೆದ ಎರಡು ದಿನಗಳ ಹಿಂದೆ ಪೊಲೀಸ್ ಇಲಾಖೆ ಆಯ್ಕೆಯ ಅಂತಿಮ ಪಟ್ಟಿ ಪ್ರಕಟಿಸಿದೆ. ಭೀರ್ಪ ನಸಲಾಪೂರೆ ಅವರು ಮೊದಲ ಪತ್ರಿಕೆಯಲ್ಲಿ 32.50 ಅಂಕಗಳಿಸಿದರೆ ಎರಡನೆ ಪತ್ರಿಕೆಯಲ್ಲಿ 85.125 ಅಂಕಪಡೆದುಕೊಂಡು ಒಟ್ಟು 117.625 ಅಂಕಗಳಿಸಿ 152 ರಾ್ಯಂಕಗಳಿಸಿ ಪಿಎಸ್‌ಐ ಆಗಿ ಆಯ್ಕೆಗೊಂಡಿದ್ದಾರೆ.
ಭೀರಪ್ಪ ನಸಲಾಪೂರ ಪಿಎಸ್‌ಐ ಆಗಿ ಆಯ್ಕೆಗೊಂಡ ಹಿನ್ನಲ್ಲೆಯಲ್ಲಿ ಗ್ರಾಮದಲ್ಲಿ ಸಂತಸದ ವಾತಾವರಣ ಮೂಡಿದೆ. ಕುಟುಂಬಸ್ಥರು ಮತ್ತು ಗ್ರಾಮಸ್ಥರು ಭೀರಪ್ಪ ನಸಲಾಪೂರೆ ಅವರನ್ನು ಸನ್ಮಾನಿಸಿ ಅಭಿನಂದಿಸಿದ್ದಾರೆ.