ಲೋದರ್ಶನ ವರದಿ
ಅಂಕೋಲಾ : ಮಾಜಿ ಸಚಿವ ಆನಂದ ಅಸ್ನೋಟಿಕರ್ ಅವರು ಸೋಮವಾರ ತಾಲೂಕಿನ ಮಂಜಗುಣಿಯ ಕಡಲ್ಕೊರತೆಯ ಪ್ರದೇಶಕ್ಕೆ ಭೇಟಿ ನೀಡಿ ಸ್ಥಳೀಯರಿಂದ ಮಾಹಿತಿಯನ್ನು ಪಡೆದುಕೊಂಡರು.
ಬಳಿಕ ಅವರು ಪತ್ರಿಕೆಯೊಂದಿಗೆ ಮಾತನಾಡಿ ಮಂಜಗುಣಿಯ ಹರಿಕಂತ್ರಕೇರಿಯಿಂದ ಕೆಳಗಿನ ಮಂಜಗು ಣಿಯ ತನಕ ಸುಮಾರು 3 ಕಿ.ಮೀ. ಇದ್ದು, ಈಗ ಸದ್ಯ 500 ಮೀ. ಉದ್ದಕ್ಕೆ 500 ಕೋಟಿ ವೆಚ್ಚದಲ್ಲಿ ಶಾಶ್ವತ ವಾಗಿ ಕಡಲ ತಡೆಗೋಡೆಗೆ ಪಿಂಚಿಂಗ್ ನಿಮರ್ಿಸುವಂತೆ ಮತ್ತು ರಸ್ತೆ ಸುಧಾರಣೆಗೆ ಜಿಲ್ಲಾಧಿಕಾರಿಯವರ ಗಮನಕ್ಕೆ ತಂದು ಸಂಬಂಧಪಟ್ಟ ಅಧಿಕಾರಿಯವರಿಂದ ಯೋಜನೆ ವರದಿಗೆ ತಯಾರಿಸುವಂತೆ ಸೂಚಿಸುತ್ತೇನೆ. ಕಾಮಗಾರಿ ಪ್ರಾರಂಭವಾಗುವಂತೆ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರಲ್ಲಿ ವಿನಂತಿಸಿಕೊಳ್ಳುತ್ತೇನೆ ಎಂದು ಭರವಸೆ ವ್ಯಕ್ತಪಡಿಸಿದರು.
ತಾಲೂಕಿನ ಶಿರಗುಂಜಿ ಪ್ರದೇಶದಲ್ಲಿ ಸುಮಾರು 700 ಎಕರೆ ಪ್ರದೇಶದಲ್ಲಿ ಯುವಕರಿಗೆ ಉದ್ಯೋಗ ಸೃಷ್ಠಿಸು ಸಲುವಾಗಿ ಖಾಸಗಿ ಕಂಪನೆಯನ್ನು ನಿಮರ್ಿಸುವಂತೆ ಕೆ.ಆಯ್.ಡಿ.ಬಿ. ಮುಖ್ಯಸ್ಥ ಜೈರಾಮ ಅವರಲ್ಲಿ ನಾನು ಮಾತನಾಡಿದ್ದೇನೆ. ಸಕರ್ಾರ ಸಂಪೂರ್ಣ ರಚನೆಗೊಂಡು, ಮಂತ್ರಿಸ್ಥಾನ ಹಂಚಿಕೆಯಾದ ಬಳಿಕ ನಾನು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಬೇಟಿಯಾಗಿ ಈ ಸಮಸ್ಯೆಗಳ ಕುರಿತು ಚಚರ್ೆ ಮಾಡುತ್ತೇನೆ. ನಾನು ಚುನಾವಣೆ ವೇಳೆ ಭರವಸೆ ನೀಡಿದ ಶೇ.100ರಲ್ಲಿ ಶೇ.60 ರಷ್ಟು ಮಾಡುತ್ತೇನೆ.
ಈ ಸಂದರ್ಭದಲ್ಲಿ ಜೆಡಿಎಸ್ ರಾಜ್ಯ ಕಾರ್ಯದಶರ್ಿ ಮೋಹಿನಿ ನಾಯ್ಕ, ಪುರಸಭೆ ಸದಸ್ಯ ಸಂದೀಪ ಜಿ. ಬಂಟ, ಬೆಳಾಂಬರ ಗ್ರಾ.ಪಂ. ಸದಸ್ಯ ಮಂಜುನಾಥ ಕೆ. ನಾಯ್ಕ ಪ್ರಮುಖರಾದ ರವಿ ನಾಯ್ಕ, ಶ್ರೀನಿವಾಸ ನಾಯ್ಕ, ಸಂಜಯ ಮೋದಿ, ವೆಂಕಟ್ರಾಯ ನಾಯಕ ಬೊಳೆ, ನಾರಾಯಣ ಮಹಾಲೆ, ಉಪೇಂದ್ರ ನಾಯ್ಕ, ವೆಂಕಟ್ರಮಣ ಕೆ. ನಾಯ್ಕ ಮಂಜಗುಣಿ, ಮಾರುತಿ ನಾಯ್ಕ, ಶ್ರೀಪಾದ ನಾಯ್ಕ ಸೇರಿದಂತೆ ಹಲವರು ಉಪಸ್ಥಿ ತರಿದ್ದರು.