ಭಾರತ ಜ್ಞಾನವಿಜ್ಞಾನ ಸಮಿತಿ : ಉದ್ಯಾನವನದಲ್ಲಿ ಪರಿಸರ ದಿನಾಚರಣೆ
Bharatiya Gyanvi Science Committee: Environment Day celebration in the park
ರಾಣೇಬೆನ್ನೂರು 13: ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಸ್ಥಳೀಯ ಭಾರತ ಜ್ಞಾನ ವಿಜ್ಞಾನ ಸಮಿತಿ, ವರ್ತಕರ ಸಂಘ ಮತ್ತು ವಿವಿಧ ಸಂಘ-ಸಂಸ್ಥೆಗಳ ಸಹಯೋಗದಲ್ಲಿ ಇತ್ತೀಚೆಗೆ ನಗರದ ಭಬನಶಂಕರಿ ಕಲ್ಯಾಣ ಮಂಟಪ ನೂತನ ಉದ್ಯಾನವನದಲ್ಲಿ “ಪಂಚವಟಿ” ಕಾರ್ಯಕ್ರಮದಡಿ ಸಸಿ ನೆಡುವ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ವರ್ತಕರ ಸಂಘದ ಮಾಜಿ ಅಧ್ಯಕ್ಷ ಗದಿಗೆಪ್ಪ. ಗು. ಹೊಟ್ಟಿಗೌಡರ ಅವರು, ಭವಿಷ್ಯದ ಮಕ್ಕಳಿಗೆ ಸದಾಕಾಲ ಶಾಂತಿ ಮತ್ತು ನೆಮ್ಮದಿ ದೊರೆಯಬೇಕಾದರೆ ಇಂದಿನ ಯುವ ಜನಾಂಗ ತಮ್ಮ ದೂರ ದೃಷ್ಟಿಯ ಮೂಲಕ ಪ್ರತಿಯೊಬ್ಬರು ಒಂದೊಂದು ಸಸಿ ನೆಟ್ಟರೆ ಮುಂದೆ ಅದು ದೊಡ್ಡದಾಗಿ ಅನೇಕ ರೀತಿಯಲ್ಲಿ ಸಹಾಯ ಮಾಡಲಿದೆ ಎಂದರು. ಪರಿಸರ ದಿನಾಚರಣೆ ಕೇವಲ ಒಂದು ದಿವಸಕ್ಕೆ ಮಾತ್ರ ಸೀಮಿತವಾಗಬಾರದು. ಅದು ಪ್ರತಿಯೊಬ್ಬರಲ್ಲಿ ನಿತ್ಯದ ದಿನವಾಗಿ ಹವ್ಯಾಸ ಬೆಳೆದಾಗ ಮಾತ್ರ ಪರಿಸರ ದಿನಾಚರಣೆಗೆ ಅರ್ಥ ಬರಲಿದೆ ಎಂದರು.
ಭಾರತ್ ಜ್ಞಾನ ವಿಜ್ಞಾನ ಸಮಿತಿಯ ರಾಜ್ಯ ಉಪಾಧ್ಯಕ್ಷ, ಎಫ್.ಸಿ. ಚೆಗರೆಡ್ಡಿ ಅವರು ಮಾತನಾಡಿ, ಸಮಿತಿಯು ಸಾಮುದಾಯಕ ಕಾರ್ಯಗಳ ಮೂಲಕ ಜ್ಞಾನ, ವಿಜ್ಞಾನ ತಂತ್ರಜ್ಞಾನ ಮತ್ತು ಮೂಢನಂಬಿಕೆಗಳ ಕುರಿತು ಅರಿವು ಜಾಗೃತಿ ಮೂಡಿಸುವ ಕಾರ್ಯದಲ್ಲಿ ತನ್ನನೇ ತಾನು ತೊಡಗಿಸಿಕೊಂಡು ಸೇವಾಮುಖಿಯಾಗಿ ಕಾರ್ಯನಿರ್ವಹಿಸುತ್ತಲಿದೆ ಎಂದರು. ಸಮಿತಿಯ ತಾಲೂಕ ಅಧ್ಯಕ್ಷ ಇಂದಿರಾ ಬಾರಂಗಿ ಅವರು ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ರಾಜ್ಯ ಸಮಿತಿ ಸದಸ್ಯ ರೇಣುಕಾ ಗುಡಿಮನಿ, ಹಾವೇರಿ ವಲಯ ಅರಣ್ಯ ಅಧಿಕಾರಿ ಜಗದೀಶ್ ಮಹಾರಾಜಪೇಟೆ ಕಾರ್ಯದರ್ಶಿ ಜಗದೀಶ ಮಳಿಮಠ, ಸದಸ್ಯರಾದ ಆರ್ ಎಸ್. ಪಾಟೀಲ, ಖಜಾಂಚಿಎಚ್.ಎಚ್. ಜಾಡರ, ಅಯ್ಯನಗೌಡರ, ಪಾಂಡಪ್ಪ ಪವಾರ, ಬಿ ಪಿ ಶಿಡೇನೂರ, ಎ. ಬಿ. ರತ್ನಮ್ಮ, ವಿದ್ಯಾವತಿ ಮಳಿಮಠ, ಬಿ. ಶೋಭಾ, ಅಕ್ಕಮಹಾದೇವಿ ಹಾನಗಲ್, ಸಂಜಯ ಕುಮಾರ, ಉಮಾ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು. ದಿನಾಚರಣೆಯಲ್ಲಿ ನೂರಕ್ಕೂ ಹೆಚ್ಚು ವಿವಿಧ ಪ್ರಭೇದಗಳ ಸಶಿಗಳನ್ನು ನೆಟ್ಟು ಸಂಭ್ರಮಿಸಿದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 