ವಿಕಲಚೇತನರೊಂದಿಗೆ ಸಂವಾದ ಕಾರ್ಯಕ್ರಮ ಆಚರಣೆ

ವಿಕಲಚೇತನರೊಂದಿಗೆ ಸಂವಾದ ಕಾರ್ಯಕ್ರಮ ಆಚರಣೆ  Dialogue program held with the disabled

ಲೋಕದರ್ಶನ ವರದಿ 

ಗುರ್ಲಾಪುರ 23 : ಸ್ಥಳಿಯ ಪಿಎಂ ಕರ್ನಾಟಕ ಪಬ್ಲಿಕ್ ಸ್ಕೂಲ್, ಶಾಸಕರ ಮಾದರಿ ಶಾಲೆಯಲ್ಲಿ ಜುಲೈ 20ರಂದು “ಸಂಭ್ರಮ ಮತ್ತು ವಿಕಲಚೇತನ ವ್ಯಕ್ತಿಗಳೊಂದಿಗೆ ಸಂವಾದ” ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.  ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್ಡಿಎಂಸಿ ಅಧ್ಯಕ್ಷ ಎಲ್‌.ಪಿ. ನೇಮಗೌಡ ವಹಿಸಿದ್ದರು. ಶಾಲೆಯ ಮುಖ್ಯೋಪಾಧ್ಯಾಯರಾದ ಬಿ.ಬಿ. ಸಸಾಲಟ್ಟಿ ಮಾತನಾಡಿ, ಅಂಗವಿಕಲತೆ ಕೇವಲ ದೌರ್ಬಲ್ಯವಲ್ಲ. ವಿಕಲಚೇತನರಲ್ಲಿರುವ ವಿಶೇಷ ಪ್ರತಿಭೆ, ಸಾಮರ್ಥ್ಯ ಮತ್ತು ಛಲವನ್ನು ಗುರುತಿಸಿ ಅವರನ್ನು ಸಮಾಜದ ಮುಖ್ಯವಾಹಿನಿಗೆ ತರುವುದು ಎಲ್ಲರ ಜವಾಬ್ದಾರಿಯಾಗಿದೆ ಎಂದು ಹೇಳಿದರು.  

ಮುಖ್ಯ ಅತಿಥಿಗಳಾಗಿ ಶಿವಬಸು ಸುಳ್ಳನವರ, ಬಿ.ವೈ. ಮೋಮಿನ್ ಹಾಗೂ ಕುಮಾರಿ ಸಾಕ್ಷಿ ತಾರದಾಳೆ ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಅತಿಥಿಗಳನ್ನು ಆತ್ಮೀಯವಾಗಿ ಸತ್ಕರಿಸಲಾಯಿತು.  ಕಾರ್ಯಕ್ರಮದಲ್ಲಿ ಶಿಕ್ಷಕರಾದ ಸುಖದೇವ ದರೂರ, ಲಕ್ಷ್ಮಯ್ಯ ಸಾಲಿಮಠ, ಕವಿತಾ ಕಟಗಿ, ವಿದ್ಯಾಶ್ರೀ, ಶೋಭಾ, ಗಂಗಮ್ಮ, ಜ್ಯೋತಿ, ಸವಿತಾ ಹಾಗೂ ಅಡುಗೆ ಸಿಬ್ಬಂದಿ ಕವಿತಾ ಹಳಬರ ಸೇರಿದಂತೆ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಶಾಲೆಯ ವತಿಯಿಂದ ಎಲ್ಲರನ್ನು ಸ್ವಾಗತಿಸಿ ಕಾರ್ಯಕ್ರಮ ಯಶಸ್ವಿಯಾಗಿ ನಡೆಸಲಾಯಿತು.