ಭರತೇಶ ಸೆಂಟ್ರಲ : ಶಾಲಾ ಪರಿಷತ್ ರಚನೆ

ಬೆಳಗಾವಿ.ಜೂ.27:  ಹಲಗಾ ಗ್ರಾಮದಲ್ಲಿರುವ ಭರತೇಶ ಶಿಕ್ಷಣ ಸಂಸ್ಥೆಯ  ಭರತೇಶ ಸೆಂಟ್ರಲ್ ಶಾಲೆಯಲ್ಲಿ ವಿದ್ಯಾಥರ್ಿಗಳ ಪರಿಷತ್ ರಚನೆ ಸಮಾರಂಭ  ಬುಧವಾರದಂದು ನಡೆಯಿತು. 

ಸಮಾರಂಭಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಎನ್.ಸಿಸಿ. ಬೆಳಗಾವಿ ವಿಭಾಗದ ಆಡಳಿತಾಧಿಕಾರಿ ಕರ್ನಲ್ ಶಂಕರಸಿಂಗ ಜಿ.ಸಿ. ಅವರು ಹೊಸದಾಗಿ ಶಾಲಾ ಪರಿಷತ್ಗೆ ಆಯ್ಕೆಯಾದ ವಿದ್ಯಾಥರ್ಿಗಳಿಗೆ  ಬ್ಯಾಡ್ಜಗಳನ್ನು ಪ್ರದಾನ ಮಾಡಿ ಮಾತನಾಡಿ,  ಭರತೇಶ ಸೆಂಟ್ರಲ ಶಾಲೆಯಲ್ಲಿ ಶಾಲಾ ಪರಿಷತ್ ರಚನೆ ಮಾಡುವ ಮೂಲಕ ವಿದ್ಯಾಥರ್ಿಗಳಲ್ಲಿ ಈಗಿನಿಂದಲೇ ಜೀವನದಲ್ಲಿ ಶಿಸ್ತು ಮತ್ತು ಪ್ರಾಮಾಣಿಕತೆ ಪಾಠ ಮಾಡುತ್ತಿರುವ ಕಾರ್ಯ ಶ್ಲಾಘನೀಯವಾಗಿದೆ. ಇಂತಹ ಪರಿಷತ್ ರಚನೆಗಳಲ್ಲಿ ಆಯ್ಕೆಯಾಗುವ ವಿದ್ಯಾಥರ್ಿಗಳಲ್ಲಿ ಆತ್ಮ ವಿಶ್ವಾಸ ಮೂಡಲು ಸಹಾಯವಾಗುತ್ತದೆ. ವಿದ್ಯಾಥರ್ಿಗಳೂ ಸಹ ಈಗಿನಿಂದಲೆ ನಾಯಕತ್ವ ಗುಣಗಳನ್ನು ಬೆಳೆಸಿಕೊಳ್ಳುವಲ್ಲಿ ಮುಂದಾಗಬೇಕೆಂದು ಅವರು  ಹೇಳಿದರು. ಸಮಾರಂಭದ ಅಧ್ಯಕ್ಷತೆಯನ್ನು ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷತೆಯನ್ನು ವಿನೋದ ದೊಡ್ಡಣ್ಣವರ ಅವರು ವಹಿಸಿದ್ದರು. ಗೌರವ ಅತಥಿಗಳಾಗಿ ಬಾಹುಬಲಿ ಕಡೆಮನಿ ಅವರು ಆಗಮಿಸಿದ್ದರು.ಶಾಲೆಯ ಪ್ರಾಂಶುಪಾಲ ದೇವಯಾನಿ ದೇಸಾಯಿ ಅವರು ಪರಿಷತ್ತಿನ ಸದಸ್ಯರಿಗೆ ಪ್ರಮಾಣ ವಚನ 

ನೀಡಿದರು.

ಒಂದು ದಿನ ಮುಂಚಿತವಾಗಿ ಶಾಲೆಯಲ್ಲಿ ನಡೆದ ಮುಕ್ತ ಚುನಾವಣೆಯಲ್ಲಿ ವಿದ್ಯಾಥರ್ಿಗಳನ್ನು ಅಧ್ಯಕ್ಷ, ಪ್ರಧಾನಿ, ಉಪ ಪ್ರಧಾನ ಮಂತ್ರಿ, ಸದನ ಕ್ಯಾಪ್ಟನ್ ಮತ್ತು ಮಂತ್ರಿಗಳ ಹುದ್ದೆಗಳಿಗೆ ಆಯ್ಕೆ ಮಾಡಲಾಯಿತು. ಗಜಲಾ ಜಮಾದಾರ ಅತಿಥಿಗಳನ್ನು ಸ್ವಾಗತಿಸಿ ಪರಿಚಯಿಸಿದರು. ಅಲಿಜಾ ಮುಲ್ಲಾ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.