ತಿಲ ಅಮಾವಾಸ್ಯೆ ಪ್ರಯುಕ್ತ ಭರತನಾಟ್ಯ ವೈಭವ
Bharatanatyam splendor on the occasion of Tila Amavasya
ಹಂಪಿ 22: ಇತ್ತೀಚೆಗೆ ಹಂಪಿ ವಿರೂಪಾಕ್ಷ ದೇವಾಲಯದಲ್ಲಿ ತಿಲ ಅಮಾವಾಸ್ಯೆ ಪ್ರಯುಕ್ತ ಭರತನಾಟ್ಯ ವೈಭವವನ್ನು ಆಯೋಜಿಸಲಾಗಿತ್ತು.
ಬೆಂಗಳೂರಿನ ಅತ್ತಿಗುಪ್ಪೆಯ ಶ್ರೀಕಾಳಿಕಾಂಬಾ ಫೈನ್‌ಆರ್ಟ್ಸ ಕಲಾವಿದರಿಂದ ಭರತನಾಟ್ಯದ ದಿವ್ಯ ನೃತ್ಯಾರೆ್ಣ ಪ್ರೇಕ್ಷಕರ ಮನಸೂರೆಗೊಂಡಿತು. ಗುರು-ಭರತನಾಟ್ಯ ವಿದ್ಯುಷಿ ಬಿ. ಯು. ಮಾಣಿಕ್ಯಾ ದೇವಿ ಅವರ ಶಿಷ್ಯರು ಪ್ರಸ್ತುತಪಡಿಸಿದ ನಾಟ್ಯ ಪ್ರದರ್ಶನ ನಟರಾಜನ ಪಲ್ಲಕ್ಕಿ ಉತ್ಸವದೊಂದಿಗೆ ಮಲ್ಲಾರಿಯ ದಿವ್ಯನಾದದಿಂದ ಆರಂಭಗೊಂಡು, ಭಕ್ತಿ ಹಾಗೂ ಶಾಂತಿಯ ವಾತಾವರಣವನ್ನು ನಿರ್ಮಿಸಿತು.
ನಂತರ ಪುಷ್ಪಾಂಜಲಿ ಮೂಲಕ ದೇವರಿಗೆ ನಮನ ಸಲ್ಲಿಸಲಾಯಿತು. ಭಜ ಮಾನಸ, ನಟೇಶ ಕೌತ್ವಂ ಹಾಗೂ ನರಸಿಂಹ ಕೌತ್ವಂ ಕೃತಿಗಳಲ್ಲಿ ಶಿಷ್ಯರ ಲಯ, ತಾಳ, ಅಂಗಶುದ್ಧಿ ಮತ್ತು ಶೈಲಿಯ ಸೌಂದರ್ಯ ಸ್ಪಷ್ಟವಾಗಿ ವ್ಯಕ್ತವಾದವು.ಮುಂದುವರೆದು, ಶಿವಪಂಚಾಕ್ಷರಿ ಹಾಗೂ ಭೋ ಶಂಭೋ ಕೃತಿಗಳ ಮೂಲಕ ಭಕ್ತಿರಸದ ಪರಿಪೂರ್ಣತೆ ಮೂಡಿಬಂತು. ವಿಶೇಷ ಆಕರ್ಷಣೆಯಾಗಿ ಶಂಕರಾಭರಣರಾಗದಲ್ಲಿ ನೃತ್ಯರೂಪಕವಾಗಿ ಪ್ರಸ್ತುತಪಡಿಸಿದ ಭಗವಾನ್ ಶಿವನ ಆಭರಣ ಕಥಾನಕವು ಶಿಲ್ಪಸೌಂದರ್ಯ ಮತ್ತು ನೃತ್ಯಕಥನದ ಅದ್ಭುತ ಸಂಯೋಜನೆಯಾಗಿತ್ತು. ನಂತರ ಶ್ರೀದೇವಿ ಕೃತಿ ‘ಕಂಜದಳಯತಾಕ್ಷಿ’ಯಲ್ಲಿ ಶಾಂತತೆ ಮತ್ತು ಶಕ್ತಿಯ ಸ್ವರೂಪ ಮನೋಹರವಾಗಿ ಅನಾವರಣಗೊಂಡಿತು.ಕಾರ್ಯಕ್ರಮದ ತಾರಕ ಕ್ಷಣವಾಗಿ ಶಿವತಾಂಡವವು ಪ್ರಸ್ತುತಗೊಂಡು, ಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸಿತು. ಅಂತಿಮವಾಗಿ ಸಿಂಹೇಂದ್ರ ಮಧ್ಯಮ ತಿಲ್ಲಾನಾಯೊಂದಿಗೆ ಕಾರ್ಯಕ್ರಮವು ಸಂಪನ್ನಗೊಂಡು, ಶ್ರೋತೃವರ್ಗವನ್ನು ಆನಂದಭಾವದಲ್ಲಿ ಲೀನಗೊಳಿಸಿತು.
ರಿತನ್ಯಾ ಎನ್, ವೈಷ್ಣವಿ ಬಿ ಎಂ, ಹರ್ಷಿತಾ ಸಿ, ಯಶವಂತ್ ಎನ್, ಹರ್ಷಿಣಿ ವಿ ಆರ್, ಜಾಹ್ನವಿ ಎಸ್, ಸಮನ್ವಿತಾ ಎಚ್, ಪುನರ್ವಿ ಆಚಾರ್ಯ ಕೆ, ಮಿತ್ರವಿಂದಾ ಎಂ, ತ್ರಯೀ ಕುಲಕರ್ಣಿ, ಸುದೀಕ್ಷಾ ಎಂ ಪಿ ಹಾಗೂ ಶ್ರದ್ಧಾ ಶೇಷಶಾಯಿ-ಕಲಾವಿದರು ಗುರು ವಿದುಷಿ ಬಿ. ಯು. ಮಣಿಕ್ಯಾ ದೇವಿ ಮಾರ್ಗದರ್ಶನದಲ್ಲಿ, ಪ್ರದರ್ಶಿಸಿದ ಈ ನೃತ್ಯಕಾರ್ಯಕ್ರಮವು ಶಿಸ್ತು, ಸಾಧನೆ ಮತ್ತು ಭಕ್ತಿಯ ಸಮನ್ವಯತೆಯಿಂದ ಕೂಡಿದ ಮನಮೋಹಕ ಹಾಗೂ ಸ್ಮರಣೀಯ ಕಲಾರೆ್ಣಯಾಗಿ ಎಲ್ಲರ ಮನಸ್ಸಿನಲ್ಲಿ ಶಾಶ್ವತ ಸ್ಥಾನವನ್ನು ಪಡೆಯಿತು. ಹಂಪಿಯ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಇಲಾಖೆಯ ಹನುಮಂತಪ್ಪ, ಶ್ರೀನಿವಾಸ್ ಅವರು ಸಹಕರಿಸಿದರು. ಗುರುಕುಲ ಕಲಾ ಪ್ರತಿಷ್ಠಾನದ ವೆಂಕಟೇಶ್ ಬಡಿಗೇರ ಉಪಸ್ಥಿತರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 