ಭರತನಾಟ್ಯ ಭರತ ಖಂಡದ ಪುರಾತನವಾದ ಕಲೆ

ಲೋಕದರ್ಶನವರದಿ     

ಮಹಾಲಿಂಗಪೂರ : ನೂಪುರ ನೃತ್ಯ ವಿದ್ಯಾಮಂದಿರ ಸಾದರಪಡಿಸಿದ ನೃತ್ಯ ವೈಭವ ಮತ್ತು ಪ್ರತಿಭಾ ಪುರಸ್ಕಾರ ಸಮಾರಂಭ ದೇವಿ ಬನಶಂಕರಿ ಭವನದಲ್ಲಿ ಜ. 04 ರಂದು ಶನಿವಾರ ಸಂಜೆ ಜರುಗಿತು. 

            ಈ  ಕಾರ್ಯಕ್ರಮದ ಆರಂಭದಲ್ಲಿ ನಾಡ ಗೀತೆಯನ್ನು ಮೊಳಗಿಸಲಾಯಿತು.ನಂತರದಲ್ಲಿ ನಟರಾಜನಿಗೆ ಪುಷ್ಪ ಸಿಂಚನ ಮತ್ತು ಪ್ರಗತಿಯ ದ್ಯೋತಕವಾದ ದೀಪವನ್ನು ಬೆಳೆಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. 

             ಬಾಗಲಕೋಟ ಜಿಲ್ಲಾ ಪಂಚಾಯತ ಅಧ್ಯಕ್ಷ ಮಹಾಂತೇಶ ಹಿಟ್ಟಿನಮಠ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಭರತನಾಟ್ಯ ಭರತ ಖಂಡದ  ಪುರಾತನವಾದ ಕಲೆಯಾಗಿದ್ದು  ಅಂಗಾಂಗಳಿಗೆ ವ್ಯಾಯಾಮದಂತೆ  ಪರಿಶ್ರಮ ನೀಡುತ್ತದೆ.ಇದರಿಂದ ದೇಹ ಸದೃಡಗೊಂಡು  ಮನಸ್ಸು ಶುದ್ಧೀಕರಣಗೊಳ್ಳುತ್ತಾ ಧಾಮರ್ಿಕ ಭಾವನೆಗಳು ಜಾಗ್ರತಗೊಳ್ಳುತ್ತವೆ.ಇದೊಂದು ವಿಶಿಷ್ಟವಾದ ಯೋಗವಾಗಿದ್ದು ಅಂದಿನಿಂದ ಇಂದಿನವರೆವಿಗೂ ನಾಟ್ಯ ನೃತ್ಯವಾಗಿ ದೇಶದ ಪ್ರತಿಕವಾಗಿದೆ. ಆಯೋಜಕರು ಮುಂದಿನ ಪೀಳಿಗೆಗೆ ಈ ಕಲೆಯನ್ನು ಪರಿಚಯಿಸುವ ಕಾರ್ಯ ಶ್ಲ್ಯಾಘನೀಯವಾಗಿದೆ ಎಂದರು.  

            ಕೆಎಲ್ಇ. ಪಾಲಿಟೆಕ್ನಿಕ್ ಕಾಲೇಜ ಪ್ರಾಚಾರ್ಯರಾದ ಎಸ್.ಆಯ್.ಕುಂದಗೋಳ ಅವರು ಹಿಂದಿನ ಕಾಲದಲ್ಲಿ ದೇವರನ್ನು ಓಲೈಸುವ ಸಲುವಾಗಿ ದೇವಸ್ಥಾನಗಳಲ್ಲಿ ಇಂತಹ ನ್ರತ್ಯ ನಾಟಕವಾಡುತ್ತಿದ್ದು ಇದರಲ್ಲಿ ವಿಶೇಷವಾದ  ದೈವಿ ಭಕ್ತಿ ಎದ್ದು ಕಾಣುತ್ತದೆ. ಕಾಲಾಂತರದಲ್ಲಿ ಈ ಕಲೆ ರಾಜ-ಮಹಾರಾಜರ ಆಸ್ಥಾನಗಳ ದಬರ್ಾರಗಳಲ್ಲಿ ಜನತೆಯನ್ನು  ರಂಜಿಸುವ ಸಾಧನವಾಯಿತು. ಈಗ ದೇಶದ ಜನರಲ್ಲಿ ಪಾಶ್ಚ್ಯಾತ ಸಂಸ್ಕೃತಿ ಮೇಳೈಸಿಕ್ಕೊಂಡಿದ್ದು ನೂಪೂರ ನೃತ್ಯ ವೈಭವ ತನ್ನ ಅಸ್ತಿತ್ವವನ್ನು ಕಳೆದುಕ್ಕೊಳ್ಳುತ್ತಿದೆ. 

    ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಮಖಂಡಿ ಕೋ-ಆಪರೇಟಿವ್ ಬ್ಯಾಂಕ್ ನ ಅಧ್ಯಕ್ಷ ಸೂರ್ಯಕಾಂತ ಚಿಂಡಕ ಮಾತನಾಡಿ, ನಮ್ಮ ಸಂಸ್ಕೃತಿಯನ್ನು ನಾಶ ಪಡಿಸುವ ಉದ್ದೇಶದಿಂದ ಬ್ರಿಟಿಷ್ ಸಕರ್ಾರ ಭರತ ನಾಟ್ಯ ನೃತ್ಯ ನಿಷೇಧಿಸಿತು.  ನಮ್ಮ ದೇಶದ ಸಾಂಸ್ಕೃತಿಕ ಸಂಪತ್ತು ಭರತ ನಾಟ್ಯ  ಇದನ್ನು ಹೆಣ್ಣುಮಕ್ಕಳಂತೆ ಗಂಡಸರೂ ಕಲಿಬೇಕು ಹಾಗೂ ಜಯೇಶ್ವರಿ ನಾಯಕ ಅವರಿಗೆ ಬನಹಟ್ಟಿಯಲ್ಲಿಯೂ ವೇದಿಕೆ ಕಲ್ಪಿಸುವುದಾಗಿ ಹೇಳಿದರು.  ಶಾಸಕ ಸಿದ್ದು ಸವದಿ, ಪಟ್ಟಣ ಸಹಕಾರಿ ಬ್ಯಾಂಕ್ ಅಧ್ಯಕ್ಷ ಮಹಾಲಿಂಗಪ್ಪ ಕೋಳಿಗುಡ್ಡ, ಕೆಎಲ್ಇ ಆಡಳಿತ ಮಂಡಳಿಯ ಸದಸ್ಯ ಅಶೋಕ ಅಂಗಡಿ, ಭಾಜಪ ಗ್ರಾಮೀಣ ಘಟಕದ ಅಧ್ಯಕ್ಷ ಸುರೇಶ ಅಕ್ಕಿವಾಟ,ತೇರದಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಲ್ಲಪ್ಪ ಸಿಂಗಾಡಿ,  ಜೆಡಿಎಸ್ ಅಧ್ಯಕ್ಷ ನಿಂಗಪ್ಪ ಬಾಳಿಕಾಯಿ,ಪ್ರೊ.ಪುಂಡಲೀಕ ನಾಯಕ, ಪುರಸಭಾ ಸದಸ್ಯ ರಾಜು ಚಮಕೇರಿ, ಸುಧೀರ್ ಗುಂಡಾ, ಕಾನಿಪ ಅಧ್ಯಕ್ಷ ಶಿವರಾಯ ಈಶ್ವರಪ್ಪಗೋಳ, ಕಾರ್ಯದಶರ್ಿ ಶಿವಲಿಂಗ ಸಿದ್ನಾಳ,ವಿದುಷಿ ಜಯೇಶ್ವರಿ ನಾಯಕ, ಇದ್ದರು.  ರೋಹಿಣಿ ಬಯೋಟೆಕನ ಮಲ್ಲಪ್ಪ ಕಟ್ಟಿ ಮಾತನಾಡಿ, ಪ್ರಾಸ್ತಾವಿಕ ನುಡಿ ಹಾಗೂ ನಿರೂಪಣೆಯನ್ನು  ಸಂಯುಕ್ತ ಕನರ್ಾಟಕ ವರದಿಗಾರ ಜಯರಾಮ ಶೆಟ್ಟಿ ಮಾಡುತ್ತ,  ವರದಿಗಾರ ನಾರಾಣಗೌಡ ಉತ್ತಂಗಿ ಸ್ವಾಗತಿಸಿ ವಂದಿಸಿದರು.ಇದೆ ಸಂಧರ್ಭದಲ್ಲಿ ದಿ.ಪೇಜಾವರ ಶ್ರೀಗಳಿಗೆ ಶ್ರದ್ಧಾಂಜಲಿ ಅಪರ್ಿಸಲಾಯಿತು.