ಭಾರತ್ ಬಂದ್: ಯಲಬುಗರ್ಾ ನೀರಸ ಪ್ರತಿಕ್ರಿಯೇ

ಲೋಕದರ್ಶನ ವರದಿ

ಯಲಬುಗರ್ಾ 09: ಕೇಂದ್ರದ ನರೇಂದ್ರ ಮೋದಿ ನೇತೃತ್ವದ ಸರಕಾರದ ಕಾಮರ್ಿಕ ನೀತಿ ವಿರೋಧಿಸಿ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ನಡೆಯುತ್ತಿರುವ 48 ಘಂಟೆಗಳ ಕಾಲದ ಮುಷ್ಕರಕ್ಕೆ ಸಾರ್ವಜನಿಕರಿಂದ ಇಂದು ಮಿಶ್ರ ಪ್ರತಿಕ್ರಿಯೇ ದೊರೆಯಿತು.

ನಗರದ ಟಿಪ್ಪು ವೃತ್ತದಿಂದ ಮೆರವಣಿಗೆ ಹೋರಟ ಪ್ರತಿಭಟನಾಕಾರರು ನಗರದ ವಿವಿಧ ವೃತ್ತಗಳ ಮೂಲಕ ತಹಸೀಲ್ದಾರ ಕಛೇರಿಗೆ ಆಗಮಿಸಿ ತಹಸೀಲ್ದಾರ ರಮೇಶ ಅಳವಂಡಿಕರ್ ಅವರ ಮುಖಾಂತರ ಕೇಂದರ ಸರಕಾರಕ್ಕೆ ಮನವಿ ಸಲ್ಲಿಸಿದರು.

ಜನ ಸಾಮಾನ್ಯರ ಉಪಯೋಗಿಸುವ ಅಗತ್ಯ ವಸ್ತುಗಳಾದ ಗ್ಯಾಸ್, ಪೆಟ್ರೋಲ್, ಡಿಸೇಲ್, ಬೆಲೆ ಏರಿಕೆ ಹಾಗೂ ಕಾಮರ್ಿಕ ಕಾನೂನುಗಳನ್ನ ತಿದ್ದುಪಡಿ ಮಾಡಿ ಕಾಮರ್ಿಕರನ್ನು ಬಿದಿಪಾಲು ಮಾಡುತ್ತಿದ್ದು, ಅಂಗನವಾಡಿ ಬಿಸಿಯೂಟವನ್ನು ಖಾಸಗಿಯವರಿಗೆ ಕೊಡಲು ಹುನ್ನಾರ ನಡೆಸಿದ್ದಾರೆ, ಸಾರ್ವಜನಿಕ ಉದ್ದಿಮೆಗಳಾದ ಖಾಸಗಿಕರಣ ಹಾಗೂ ರೈತರ ಸಂಪೂರ್ಣ ಸಾಲ ಮನ್ನಾ ಮತ್ತು ಸ್ವಾಮೀನಾಥನ ವರದಿ ಪ್ರಕಾರ ರೈತರಿಗೆ ಬೆಂಬಲ ಬೆಲೆ ನಿಗದಿ ಪಡಿಸಲು ಒತ್ತಾಯಿಸಿ ಹಾಗೂ ಶಿಕ್ಷಣದ ವ್ಯಾಪಾರಿಕರಣ ವಿರೋಧಿಸಿ ಕೇಂದ್ರ ಸರಕಾರದ ಎಲ್ಲಾ ಜನ ವಿರೋಧಿ ನೀತಿಗಳ ವಿರುದ್ಧ ಇಂದು ಎರಡನೇ ದಿನದ  ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ, ನಗರದ ಎಲ್ಲಾ ವ್ಯಾಪಾರಸ್ಥರು, ನಾಗರಿಕರು, ಈ ಬಂದನ್ನು ಬೆಂಬಲಿಸಿದ್ದು ಉತ್ತಮ ಪ್ರತಿಕ್ರಿಯೆ ದೊರೆತು ಪ್ರತಿಭಟನೆ ಯಶಸ್ವಿಯಾಗಿದೆ  ಎಂದರು.

ಎಸ್ಎಪ್ಐ ತಾಲೂಕಾದ್ಯಕ್ಷ ಸಿದ್ದಪ್ಪ, ಬಿಸಿಯೂಟ ತಾಲೂಕಾದ್ಯಕ್ಷ ಶಿವನಗೌಡ, ಪದ್ಮಾವತಿ ಕುಡಗುಂಟಿ, ಡಿವಾಯ್ಎಪ್ಐ ಮುಖಂಡ ಅಬ್ದುಲ್ ರಜಾಕ್, ರಷೀದ್ ಖಾಜಿ, ಆನಂದ ಎಚ್ ಆರ್, ವಿವಿಧ ಕಾಮರ್ಿಕ ಸಂಘಟನೆಗಳಾದ ಹಮಾಲರ ಸಂಘ, ಅಂಗನವಾಡಿ ನೌಕರರ ಸಂಘ ತಾಲೂಕ ಅದ್ಯಕ್ಷೆ ಲಲಿತಾ ಅರಳಿ, ಆಟೋ ಚಾಲಕರ ಸಂಘ, ಗ್ರಾಪಂ ದಿನಗೂಲಿ ನೌಕರರ ಸಂಘ  ಸೇರಿದಂತೆ ಇನ್ನೀತರರು ಹಾಜರಿದ್ದರು.