ನಿವೃತ್ತ ವೃತ್ತಿ ಶಿಕ್ಷಕ ನದಾಫ್ ಗೆ ಭಾರತ ವಿಕಾಸ ರತ್ನ ರಾಷ್ಟ್ರ ಪ್ರಶಸ್ತಿ ಪ್ರದಾನ

Bharat Vikasa Ratna Rashtra Award to retired teacher Nadaf

ನಿವೃತ್ತ ವೃತ್ತಿ ಶಿಕ್ಷಕ ನದಾಫ್ ಗೆ ಭಾರತ ವಿಕಾಸ ರತ್ನ ರಾಷ್ಟ್ರ ಪ್ರಶಸ್ತಿ ಪ್ರದಾನ  

ಕೊಪ್ಪಳ 13 : ನಗರದ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗದ ವೃತ್ತಿ ನಿವೃತ್ತ ಶಿಕ್ಷಕ ಅಮೀರ್ ಹಮ್ಜಾ ನದಾಫ್ ರವರಿಗೆ ಅವರ ಉತ್ತಮ ವೃತ್ತಿ ಶಿಕ್ಷಣ ಸೇವೆಗಾಗಿ ಭಾರತ ವಿಕಾಸರತ್ನ ರಾಷ್ಟ್ರ ಪ್ರಶಸ್ತಿಯನ್ನು ಪ್ರಧಾನ ಮಾಡಲಾಯಿತು,ಬೆಂಗಳೂರಿನ ರವೀಂದ್ರ ಕಲಾ ಕ್ಷೇತ್ರ ಆವರಣದಲ್ಲಿರುವ ನಯನ ರಂಗ ಮಂದಿರ ಸಭಾಂಗಣದಲ್ಲಿ ಸುರುವೇ ಕಲ್ಚರಲ್ ಅಕಾಡೆಮಿ ವತಿಯಿಂದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಪ್ರಯುಕ್ತ ಏರಿ​‍್ಡಸಿದ ವಿವಿಧ ಸಾಧಕರಿಗೆ ಪ್ರಶಸ್ತಿ ವಿತರಣೆ ಸಮಾರಂಭದಲ್ಲಿ ಕೊಪ್ಪಳ ದ ಅಮೀರ್ ಹಮ್ಜಾ ನದಾಫ್  ರವರಿಗೆ ಅವರ ಉತ್ತಮ ಸಮಾಜ ಸೇವೆ ಗಾಗಿ ಪ್ರಶಸ್ತಿಯನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮಾಜಿ ಸಚಿವರಾದ ಡಾ, ಲೀಲಾದೇವಿ ಆರ್, ಪ್ರಸಾದ್ ರವರು ಪ್ರಧಾನ ಮಾಡಿ ಸತ್ಕರಿಸಿದರು. ಈ ಸಂದರ್ಭದಲ್ಲಿ ಸಿನಿಮಾ ನಟರಾದ ಮೀನಾ, ಶಂಕರ್ ಭಟ್ ಮತ್ತು ಎಂಜಿಆರ್ ಅರಸ್ ಅಲ್ಲದೆ ಸಾಹಿತಿ ಡಾ. ರಾಜೇಂದ್ರ ಗಡದ್ ಹಾಗೂ ಶ್ರೀಮತಿ ನಳಿನಿ ,ಕಾರ್ಯಕ್ರಮ ಸಂಘಟಕ ರಮೇಶ್ ಸುರುವೇ ಪಾಲ್ಗೊಂಡಿದ್ದು ಡಾ. ಕಲ್ಮೇಶ್ವರ ಸ್ವಾಮಿ ಬೆಳಗಾವಿ ರವರು ಸಮಾರಂಭದ ಸಾನಿಧ್ಯ ವಹಿಸಿದ್ದರು.ಅಮೀರ್ ಹಮ್ಜಾ ನದಾಫ್ ರವರಿಗೆ ಅವರ ಉತ್ತಮ ಸೇವೆಗಾಗಿ ರಾಷ್ಟ್ರಮಟ್ಟದ ಭಾರತ ರತ್ನ ರಾಷ್ಟ್ರೀಯ ಮಟ್ಟದ ಪ್ರಶಸ್ತಿ ಲಭಿಸಿರುವುದಕ್ಕೆ ಕೊಪ್ಪಳದ ವಿವಿಧ ಸಂಘಟನೆ ಅಲ್ಲದೆ ನದಾಫ್ ಪಿಂಜಾರ್ ಸಂಘಟನೆ ಮತ್ತು ಮುಸ್ಲಿಂ ಸಂಘಟನೆ ಗಳು ಅಲ್ಲದೆ ಕೊಪ್ಪಳದ ಸರ್ಕಾರಿ ಬಾಲಕರ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ಶಿಕ್ಷಕರು ,ಪ್ರಾಚಾರ್ಯರು, ಹಾಗೂ ವಿದ್ಯಾರ್ಥಿಗಳ ಬಳಗ ಮತ್ತು ಸ್ನೇಹಿತರ ಬಳಗ ಹರ್ಷ ವ್ಯಕ್ತಪಡಿಸಿ ಅಭಿನಂದಿಸಿದ್ದಾರೆ.